ಕೊನೆಗೂ ಡಿಲಿವರಿ ಕಾಮರಾಜ್ ರವರಿಗೆ ಸಿಹಿ ಸುದ್ದಿ ನೀಡಿದ ಝೋಮೋಟೋ ಸಂಸ್ಥೆ ! ಏನು ಗೊತ್ತಾ??

4

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇದೀಗ ಆಹಾರ ಮನೆ ಬಾಗಿಲಿಗೆ ಡಿಲವರಿ ಮಾಡುವ ವಿಚಾರದಲ್ಲಿ ಝೋಮೋಟೋ ಸಂಸ್ಥೆಯ ಡಿಲೆವರಿ ಮಾಡುವ ಕಾಮರಾಜ್ ಹಾಗೂ ಒಂದು ಮಹಿಳೆಯ ನಡುವೆ ನಡೆದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ. ಆಹಾರ ತಡವಾಗಿ ಬಂದ ಕಾರಣ ನಡೆದಿದೆ ಎನ್ನಲಾಗುತ್ತಿರುವ ಈ ಘಟನೆಗೆ ಕಾಮರಾಜ್ ಅವರ ಕಡೆಯಿಂದ ಒಂದು ಹೇಳಿಕೆ ಹಾಗೂ ಮಹಿಳೆಯ ಕಡೆಯಿಂದ ಮತ್ತೊಂದು ಹೇಳಿಕೆ ಕೇಳಿದೆ. ಮೊದಲು ಮಹಿಳೆಯ ಮಾತನ್ನು ನಂಬಿದ ಎಲ್ಲರೂ ತದ ನಂತರ ಕಾಮರಾಜ್ ರವರ ವಿವರಣೆ ನೀಡಿದ ಬಳಿಕ ಕಾಮರಾಜ್ ಅವರ ಬೆಂಬಲಕ್ಕೆ ಲಕ್ಷಾಂತರ ಜನ ನಿಂತಿದ್ದಾರೆ.

ಈ ಮೂಲಕ ಕಾಮರಾಜ್ ರವರು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಬೆಂಬಲವನ್ನು ಪಡೆಯುತ್ತಿದ್ದಾರೆ, ಮಹಿಳೆ ಸಿಂಪತಿ ಗಿಟ್ಟಿಸಲು ಆಡಿದ ನಾಟಕ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ಕಾರಣ ಬಾಲಿವುಡ್ ಸೆಲೆಬ್ರೆಟಿ ಗಳಾದ ಪರಣಿತಿ ಚೋಪ್ರಾ ಹಾಗೂ ಸ್ಯಾಂಡಲ್ ವುಡ್ ನಟಿ ಪ್ರಣೀತಾ ಸುಭಾಷ್ ರವರು ಸೇರಿದಂತೆ ಇನ್ನಿತರ ಹಲವಾರು ಸೆಲೆಬ್ರಿಟಿಗಳು ಕೂಡ ಕಾಮರಾಜ್ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಕಾಮರಾಜ್ ರವರ ವಿವರಣೆ ನೀಡುವಾಗ ನನ್ನನ್ನು ಸಿಕ್ಕಿ ಹಾಕಿಸಿದ ಕಾರಣಕ್ಕೆ ಇದೀಗ ನಾನು 25 ಸಾವಿರ ರೂಪಾಯಿಗಳನ್ನು ಕಟ್ಟಿ ಹೊರ ಬರಬೇಕಾಗಿದೆ ಹಾಗೂ ಮುಂದಿನ ವ’ಕೀಲ ಪ್ರಕ್ರಿಯೆಗಳಿಗೆ ಎಲ್ಲಿಂದ ಹಣ ತರಲಿ ಎಂದು ಅಳಲು ತೋಡಿಕೊಂಡಿದ್ದರು, ಮಧ್ಯಮ ವರ್ಗದ ಕುಟುಂಬಕ್ಕೆ ನಿಜಕ್ಕೂ rs.25000 ಎಂದರೆ ಕನಿಷ್ಠ ಎರಡು ತಿಂಗಳ ದುಡಿಮೆ ಎಂದರೆ ತಪ್ಪಾಗಲಾರದು, ಇದೀಗ ಕಾಮರಾಜ್ ರವರ ಝೋಮೋಟೋ ಡೆಲಿವರಿ ರೇಟಿಂಗ್ ಉತ್ತಮವಾಗಿರುವ ಕಾರಣ ಝೋಮೋಟೋ ಸಂಸ್ಥೆಯು ಕಾಮರಾಜ್ ಅವರಿಗೆ ಅಗತ್ಯವಿರುವ ಮುಂದಿನ ಎಲ್ಲ ಪ್ರಕ್ರಿಯೆಗೆ ಖರ್ಚಾದ ಅಷ್ಟು ಹಣವನ್ನು ಕಂಪನಿ ವಹಿಸಿಕೊಳ್ಳುತ್ತದೆ ಹಾಗೂ ಕಾಮರಾಜ್ ರವರನ್ನು ತೆಗೆದಿರುವುದು ಕೇವಲ ತಾತ್ಕಲಿಕ ಎಂದು ಘೋಷಣೆ ಮಾಡಿ ಆದೇಶ ಹೊರಡಿಸಿದೆ. ಇದರಿಂದ ಕಾಮರಾಜ್ ಅವರ ಮೇಲೆ ಬೀಳುತ್ತಿದ್ದ ಸಾವಿರ ರೂಪಾಯಿ ಹೊರೆ ಕಡಿಮೆಯಾಗಿದೆ.

Get real time updates directly on you device, subscribe now.