ಬಡತನದಲ್ಲಿ ಬೆಳೆದರೂ ಟ್ಯಾಲೆಂಟ್ ಕಡಿಮೆ ಇಲ್ಲದ ಗಿಣಿರಾಮ ಸೀಮಾ ರವರ ನಿಜ ಜೀವನ ಹೇಗಿದೆ ಗೊತ್ತೇ??

54

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ತನ್ನದೇ ಆದ ಪ್ರತ್ಯೇಕ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಳ್ಳುವುದು ಯಶಸ್ವಿಯಾಗಿರುವ ಗಿಣಿರಾಮ ಧಾರವಾಹಿಯಲ್ಲಿ ನಾಯಕ ನಟ ಶಿವರಾಂ ರವರ ತಂಗಿಯಾಗಿ ನಟಿಸುತ್ತಿರುವ ಸೀಮಾ ಪಾತ್ರದಾರಿ ಕಾವೇರಿ ರವರ ಕುರಿತು ಇಂದು ಹೆಚ್ಚಿನ ಮಾಹಿತಿಯನ್ನು ನೀಡುತ್ತೇನೆ ಕೇಳಿ.

ಸ್ನೇಹಿತರೇ ಈ ಮೊದಲೇ ಹೇಳಿದಂತೆ ಸೀಮಾ ಪಾತ್ರಧಾರಿಯ ಹೆಸರು ಕಾವೇರಿ ಇವರು ಮೂಲತಹ ಬಾಗಲಕೋಟೆ ಯವರು. ಇವರ ತಂದೆ ಹೆಸರು ಬಸಲಿಂಗಪ್ಪ ಇವರಿಗೆ ಒಬ್ಬರು ಮುದ್ದಾದ ತಂಗಿದ್ದು ಅವರ ಹೆಸರು ಸುನಿತಾ. ಇನ್ನು ಇವರು ಕೇವಲ 8ನೇ ತರಗತಿಯಲ್ಲಿ ಇರುವಾಗ ಇವರ ತಂದೆ ದುರದೃಷ್ಟವಶಾತ್ ಇಹಲೋಕ ತ್ಯಜಿಸಿದ್ದಾರೆ. ಮನೆಯನ್ನು ನಡೆಸುವ ಜವಾಬ್ದಾರಿ ತಾಯಿಯ ಹೆಗಲಿಗೆ ಹೇರುತ್ತದೆ, ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡು ಇವರ ತಾಯಿ ನಿಜಕ್ಕೂ ಬಹಳ ಚೆನ್ನಾಗಿ ಇಬ್ಬರು ಮಕ್ಕಳನ್ನು ಬೆಳೆಸಿದ್ದಾರೆ ಎಂದು ಇತ್ತೀಚಿನ ಸಂದರ್ಶನದಲ್ಲಿ ಕಾವೇರಿ ರವರು ಹೇಳಿದ್ದಾರೆ.

ಬಡತನವನ್ನು ಕೂಡ ನೋಡಿರುವ ಸೀಮಾ ರಾವರು, ಕಾಲೇಜು ಮುಗಿಸಿ ಆಗತಾನೆ ಪದವಿ ಪಡೆದು ಕೊಂಡಿರುವ ಸಂದರ್ಭದಲ್ಲಿ ಉತ್ತರ ಕರ್ನಾಟಕ ಶೈಲಿಯಲ್ಲಿ ಒಂದು ಧಾರವಾಹಿ ಪ್ರಸಾರವಾಗುತ್ತದೆ, ಆ ಧಾರಾವಾಹಿಯಲ್ಲಿ ನಾಯಕ ನಟನ ತಂಗಿಯ ಪಾತ್ರದಲ್ಲಿ ನಟನೆ ಮಾಡಲು ಆಡಿಶನ್ ನಡೆಯುತ್ತಿದೆ ಎಂದು ತಿಳಿದಾಗ, ಬಡವರಾಗಿದ್ದರೂ ಟ್ಯಾಲೆಂಟ್ ಹೊಂದಿದ್ದ ಕಾವೇರಿ ರವರು ಆಡಿಷನ್ ಗೆ ತೆರಳಿ ಸೆಲೆಕ್ಟ್ ಆಗುತ್ತಾರೆ. ಇನ್ನು ಬಿ ಕಾಂ ಪದವೀಧರೆಯಾಗಿರುವ ಇವರು ಜನಿಸಿದ್ದು 1999ರಲ್ಲಿ, ಇಂದಿನ ಲೆಕ್ಕಾಚಾರದ ಪ್ರಕಾರ ಇವರ ವಯಸ್ಸು ಕೇವಲ 21.

Get real time updates directly on you device, subscribe now.