ರಾಬರ್ಟ್ ಸಿನೆಮಾದ ಮೊದಲ ದಿನದ ಕಲೆಕ್ಷನ್ ಎಷ್ಟು ಕೋಟಿ ಗೊತ್ತೇ? ಯಪ್ಪಾ ಇಷ್ಟೊಂದ

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕಳೆದ ಒಂದು ವರ್ಷದಿಂದ ಅಭಿಮಾನಿಗಳು ತುದಿಗಾಲಲ್ಲಿ ಕಾದು ನಿಂತಿದ್ದ ಕ್ಷಣ ಈಗ ಬಂದೇ ಬಿಟ್ಟಿದೆ ಕೊನೆಗೂ ಕನ್ನಡದ ಬಹು ನಿರೀಕ್ಷಿತ ಸಿನಿಮಾ ರಾಬರ್ಟ್ ಸಿನಿಮಾ ಬಿಡುಗಡೆಯಾಗಿದೆ, ಅಂದು ಕೊಂಡಂತೆ ಮೊದಲ ದಿನವೇ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಯನ್ನು ಪಡೆದು ಕೊಂಡಿರುವ ರಾಬರ್ಟ್ ಚಿತ್ರದ ಟಿಕೆಟ್ಗಳು ಮೊದಲ ನಾಲ್ಕು ದಿನಕ್ಕೆ ಈಗಾಗಲೇ ಬುಕ್ ಆಗಿವೆ. ಇಂತಹ ಸಂದರ್ಭದಲ್ಲಿ ಪ್ರೇಕ್ಷಕರಿಂದ ಅತ್ಯುತ್ತಮ ರಿವ್ಯು ಪಡೆದು ಕೊಳ್ಳುತ್ತಿರುವ ಕಾರಣ ರಾಬರ್ಟ್ ಸಿನಿಮಾ ನೂರು ದಿನಗಳ ಕಾಲ ಖಚಿತವಾಗಿ ಓಡಲಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಇನ್ನು ಈಗಾಗಲೇ ನಾಲ್ಕು ದಿನಗಳ ಟಿಕೆಟ್ ಬುಕ್ ಆಗಿರುವ ಕಾರಣ ರಾಬರ್ಟ್ ಸಿನಿಮಾದ ಗಳಿಕೆಯ ಲೆಕ್ಕಾಚಾರ ಮಾಡುವುದು ಕಷ್ಟದ ಕೆಲಸವೇನಲ್ಲ. ಆದರೆ ಯಾವುದೇ ತಾಂತ್ರಿಕ ದೋಷವಿಲ್ಲದೆ ಹಾಗೂ ಇನ್ನಾವುದೇ ತೊಂದರೆ ಇಲ್ಲದೆ ಎಷ್ಟು ಸ್ಕ್ರೀನ್ ಗಳಲ್ಲಿ ಯಶಸ್ವಿಯಾಗಿ ಚಿತ್ರ ಪ್ರಸಾರ ಗೊಂಡಿದೆ ಎಂಬುದರ ಮೇಲೆ ಮೊದಲ ದಿನದ ಗಳಿಕೆಯನ್ನು ನಾವು ಲೆಕ್ಕಾಚಾರ ಹಾಕಬಹುದಾಗಿದೆ.

ಹೀಗಿರುವಾಗ ಆಂಧ್ರ ಪ್ರದೇಶದಲ್ಲಿ ಐನೂರಕ್ಕೂ ಹೆಚ್ಚು ಶೋ ಪ್ರಸಾರವಾಗುತ್ತಿದೆ ಹಾಗೂ ಕರ್ನಾಟಕದಲ್ಲಿ 2000 ಶೋ ಪ್ರಸಾರವಾಗುತ್ತಿರುವ ಕಾರಣ ರಾಬರ್ಟ್ ಸಿನಿಮಾದ ಮೊದಲ ದಿನದ ಕಲೆಕ್ಷನ್ ನಾವು ಗಮನಿಸುವುದಾದರೇ ಬರೋಬ್ಬರಿ 25 ರಿಂದ 30 ಕೋಟಿ ಕಲೆಕ್ಷನ್ ನಡೆದಿದೆ ಎಂಬ ಲೆಕ್ಕಾಚಾರಗಳು ಕೇಳಿ ಬರುತ್ತಿವೆ. ಈ ಮೂಲಕ ಬಾಕ್ಸಾಫೀಸ್ ರೆಕಾರ್ಡುಗಳನ್ನು ಉಡಿಸ್ ಮಾಡುತ್ತಿರುವ ರಾಬರ್ಟ್ ಸಿನಿಮಾ ಈಗ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದು ಕೊಂಡಿರುವ ಕಾರಣ ಮುಂದಿನ ದಿನಗಳ ಟಿಕೆಟ್ಗಳು ಕೂಡ ಬುಕ್ ಆಗುತ್ತಿವೆ, ಆದ ಕಾರಣ ಈ ಕೂಡಲೇ ನೀವು ಕೂಡ ನಿಮ್ಮ ಟಿಕೆಟ್ಗಳನ್ನು ಬುಕ್ ಮಾಡುವುದನ್ನು ಮರೆಯಬೇಡಿ ಇಲ್ಲವಾದಲ್ಲಿ ನೀವು ಮತ್ತೊಂದು ವಾರ ಕಾಯಬೇಕಾಗುತ್ತದೆ.

Get real time updates directly on you device, subscribe now.