ತೆಲುಗು, ಕನ್ನಡ ಪ್ರೇಕ್ಷಕರಿಂದ ಸಿಕ್ತು ರಾಬರ್ಟ್ ರೇಟಿಂಗ್, ಮತ್ತೊಂದು ಲೆವೆಲ್ ಅನ್ನು ತೋರಿಸಿದ ದರ್ಶನ್. ಹೇಗಿದೆ ಗೊತ್ತಾ ಚಿತ್ರದ ರೇಟಿಂಗ್??

3

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ರಾಬರ್ಟ್ ಸಿನಿಮಾ ಇದೀಗ ಬಿಡುಗಡೆಯಾಗಿದೆ. ಬಿಡುಗಡೆಯಾದ ಮೊದಲನೆ ಶೋನಲ್ಲಿಯೇ ಪ್ರೇಕ್ಷಕರನ್ನು ಹುಚ್ಚೆಬ್ಬಿಸುವ ದರಲ್ಲಿ ರಾಬರ್ಟ್ ಸಿನಿಮಾ ಯಶಸ್ವಿಯಾಗಿದೆ. ಕನ್ನಡದಲ್ಲಿ ಅಷ್ಟೇ ಅಲ್ಲದೆ ತೆಲುಗಿನಲ್ಲಿಯೂ ಕೂಡ ಹವಾ ಆರಂಭಿಸಿರುವ ರಾಬರ್ಟ್ ಸಿನಿಮಾ ಇದೀಗ ತೆಲುಗು ರಾಜ್ಯಗಳಲ್ಲಿ ಕೂಡ ಭರ್ಜರಿಯಾಗಿ ಸದ್ದು ಮಾಡುತ್ತಿದೆ,

ಸಾಮಾಜಿಕ ಜಾಲತಾಣಗಳಲ್ಲಿ ತೆಲುಗಿನ ಜನರು ರಾಬರ್ಟ್ ಸಿನಿಮಾ ಕುರಿತು ಬರೆಯುತ್ತಿರುವ ರಿವ್ಯೂ ಗಳನ್ನು ನೋಡಿದರೆ ನಿಜಕ್ಕೂ ಒಂದು ಕ್ಷಣ ತೆಲುಗಿನಲ್ಲಿಯೂ ಕೂಡ ದರ್ಶನ್ ಹಿಂದೆ ಹಲವಾರು ಸಿನಿಮಾಗಳನ್ನು ಮಾಡಿ ಅಭಿಮಾನಿ ಬಳಗವನ್ನು ಗಳಿಸಿದಂತೆ ಕಾಣುತ್ತಿದೆ. ಯಾಕೆಂದರೆ ಮೊದಲ ಸಿನಿಮಾದಲ್ಲಿಯೇ ಪ್ರೇಕ್ಷಕರು ಈ ರೀತಿ ರಿವ್ಯೂ ಬರೆಯುವುದು ನಿಜಕ್ಕೂ ಆಶ್ಚರ್ಯಕರ ಸಂಗತಿ ಎನ್ನಲಾಗುತ್ತಿದೆ.

ಇನ್ನು ಸ್ನೇಹಿತರೆ ರಾಬರ್ಟ ಸಿನಿಮಾದಲ್ಲಿ ಮೊದಲ ಇಂಟರ್ವಲ್ ವರೆಗೂ ಕಥೆ ಒಂದು ಉತ್ತಮ ಫ್ಲೋ ನಲ್ಲಿ ಹೋಗುತ್ತದೆ, ಸ್ಕ್ರೀನ್ ಪ್ಲೇ ಬಹಳ ಅದ್ಭುತವಾಗಿ ಮೂಡಿ ಬಂದಿದೆ, ನಿರ್ದೇಶಕರಿಗೆ ಫುಲ್ ಮಾರ್ಕ್ಸ್ ನೀಡಲಾಗಿದೆ, ಇನ್ನು ಮೊದಲ ಭಾಗದಲ್ಲಿ ರಾವಣನ ಸೀನ್ ಗಳು ನಿಜಕ್ಕೂ ಪ್ರೇಕ್ಷಕರಿಗೆ ಒಂದು ಜೋಷ್ ನೀಡುತ್ತವೆ, ಇನ್ನು ಈ ಸಿನಿಮಾದಲ್ಲಿ ನೀವು ಇಷ್ಟು ದಿವಸ ನೋಡುತ್ತಿದ್ದ ದರ್ಶನ್ ಅವರಿಗಿಂತ ಮತ್ತೊಂದು ಲೆವೆಲ್ ದರ್ಶನ್ ಅವರನ್ನು ನೋಡಬಹುದು ಎಂದು ಹೇಳಬಹುದಾಗಿದೆ

ಇಂಟರ್ವಲ್ ನಲ್ಲಿ ಟ್ವಿಸ್ಟ್ ಕೂಡ ಬಹಳ ಅದ್ಭುತವಾಗಿ ಮೂಡಿ ಬಂದಿದ್ದು ಹೆಚ್ಚಿನ ಫೈಟ್ ಸ್ಕಿನ ಗಳನ್ನು ನೀವು ನೋಡಬಹುದು. ಅದರಲ್ಲಿಯೂ ವಾರಣಾಸಿಯಲ್ಲಿ ನಡೆದಿರುವ ಒಂದು ಫೈಟ್ ಸ್ಕಿನ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿದ್ದು, ತೆಲುಗಿನಲ್ಲಿಯೂ ಕೂಡ ಈ ಫೈಟ್ ಕುರಿತು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿ, ಅದ್ಭುತ ಎನ್ನುತ್ತಿದ್ದಾರೆ ಎಂಬುದು ಪ್ರೇಕ್ಷಕರ ರಿವ್ಯೂ ಗಳಿಂದ ತಿಳಿದುಬಂದಿದೆ.

ಇನ್ನು ಇಡೀ ಫ್ಯಾಮಿಲಿ ಕುಳಿತು ನೋಡಬಹುದಾದ ಚಿತ್ರ ಇದಾಗಿದ್ದು ಕೊಂಚ ಹೆಚ್ಚಿನ ಫೈಟ್ ಗಳು ಕಾಣಿಸುತ್ತವೆ. ಇನ್ನು ಚಿಕ್ಕಣ್ಣನವರು ಮೊದಲನೇ ಭಾಗದಲ್ಲಿ ಕಡಿಮೆ ಕಾಮಿಡಿ ಮಾಡಿದರು ಕೂಡ ಜನರನ್ನು ನಗಿಸುವುದರಲ್ಲಿ ಯಶಸ್ವಿಯಾಗಿದ್ದಾರೆ, ಇನ್ನು ದರ್ಶನ್ ರವರ ಆಟಿಟ್ಯೂಡ್ ಹಾಗೂ ಸ್ಟೈಲ್ ಬಹಳ ಅದ್ಭುತವಾಗಿ ಮೂಡಿಬಂದಿದ್ದು, ಅವರ ಬೈಕ್ ಹಾಗೂ ಜಾಕೆಟ್ ಟ್ರೈಲರ್ ನಲ್ಲಿ ತೋರಿಸಿದಂತೆ ಫಿಲಂ ನಲ್ಲಿಯೂ ಕೂಡ ಪ್ರೇಕ್ಷಕರಿಗೆ ಇಷ್ಟವಾಗುವುದರಲ್ಲಿ ಯಶಸ್ವಿಯಾಗಿದೆ.

ಒಟ್ಟಾರೆಯಾಗಿ ಇಲ್ಲಿಯವರೆಗೂ ಬಂದಿರುವ ರೇಟಿಂಗ್ ಗಳನ್ನು ನಾವು ತೆಗೆದುಕೊಳ್ಳುವುದಾದರೆ 5 ಸ್ಟಾರ್ ಗಳಿಗೆ ಬರೋಬ್ಬರಿ ನಾಲ್ಕು ಸ್ಟಾರ್ ಗಳನ್ನು ಈ ಸಿನಿಮಾ ಗೆ ಜನರು ನೀಡಿದ್ದಾರೆ. ಇನ್ನು ಫ್ಯಾಮಿಲಿ ನೋಡಬಹುದಾದ ಚಿತ್ರ ಇದಾಗಿದ್ದು ಮಕ್ಕಳು ಖಂಡಿತ ದರ್ಶನ್ ಅವರ ಆಟಿಟ್ಯೂಡ್ ಅನ್ನು ಇಷ್ಟ ಪಡುತ್ತಾರೆ ಎಂಬ ಮಾತುಗಳು ಪ್ರೇಕ್ಷಕರಿಂದ ಕೇಳಿಬಂದಿದೆ. ಇನ್ನು ಈಗಾಗಲೇ ನಾಲ್ಕು ದಿನದ ಟಿಕೆಟ್ಗಳು ಬುಕ್ ಆಗಿದ್ದು ಖಂಡಿತ ರಾಬರ್ಟ್ ಸಿನಿಮಾ ಕೆಜಿಎಫ್ ಚಿತ್ರದ ಮಟ್ಟಕ್ಕೆ ಹೋಗಲಿದೆ ಎಂಬುದು ತಿಳಿದು ಬಂದಿದೆ. ಸುಲಭವಾಗಿ ನೂರು ಕೋಟಿ ಗಳಿಸುತ್ತದೆ ಎಂದು ತೆಲುಗು ಪ್ರೇಕ್ಷಕರು ಅಭಿಪ್ರಾಯ ನೀಡಿರುವುದು ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ಒಂದು ಹೆಮ್ಮೆಯ ವಿಷಯವಾಗಿದೆ.

Get real time updates directly on you device, subscribe now.