ಬಿಗ್ ಬಾಸ್ ಗೆ ಬಿಗ್ ಶಾಕ್ ! ಸುದೀಪ್ ರವರ ಪಂಚಾಯತಿಗೂ ಕ್ಯಾರೇ ಎನ್ನದ ಜನತೆ ! ನಡೆದ್ದದೇನು ಗೊತ್ತೇ??

2

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡದ ಬಹುನಿರೀಕ್ಷಿತ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಬಿಗ್ ಬಾಸ್ ಕಾರ್ಯಕ್ರಮ ಕಳೆದ ಎರಡು ವಾರಗಳಿಂದ ಪ್ರಸಾರವಾಗುತ್ತಿದೆ. ಕಳೆದ ವರ್ಷ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರವಾಗದೆ ಇರುವ ಕಾರಣ ಈ ವರ್ಷದ ಬಿಗ್ ಬಾಸ್ ಕಾರ್ಯಕ್ರಮದ ಮೇಲೆ ಬಹಳ ನಿರೀಕ್ಷೆಗಳು ಹೆಚ್ಚಾಗಿತ್ತು, ಅದರಂತೆಯೇ ವಾಹಿನಿಯು ಕೂಡ ಬಹಳ ವರ್ಣರಂಜಿತವಾಗಿ ಕಾರ್ಯಕ್ರಮವನ್ನು ಆರಂಭಿಸಿತು ಹಲವಾರು ಸೆಲೆಬ್ರಿಟಿಗಳನ್ನು ಬಿಗ್ ಬಾಸ್ ಮನೆಯಲ್ಲಿ ಭಾಗವಹಿಸುವಂತೆ ಕೇಳಿಕೊಳ್ಳಲಾಗಿತ್ತು

ಕೊನೆಯದಾಗಿ ಅದಿನೆಂಟು ಸ್ಪರ್ಧಿಗಳು ಫೈನಲ್ ಆಗಿ ಒಪ್ಪಿಕೊಂಡು ಇದೀಗ ಮನೆ ಸೇರಿಕೊಂಡಿದ್ದಾರೆ. ಇನ್ನು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪ್ರತಿಬಾರಿಯಂತೆ ಈ ಬಾರಿಯೂ ಕೂಡ ಹಲವಾರು ರೀತಿಯ ವಿವಿದ ಟಾಸ್ಕ್ ಗಳನ್ನು ನೀಡುವ ಮೂಲಕ ಪ್ರೇಕ್ಷಕರನ್ನು ಬೆಳೆಯುವ ಕೆಲಸ ಮಾಡಲಾಗುತ್ತಿದೆ. ಆದರೆ ಬಿಗ್ ಬಾಸ್ ಮನೆಯಲ್ಲಿ ಎಷ್ಟೇ ಟ್ವಿಸ್ಟ್ ಹಾಗೂ ಆಸಕ್ತಿಕರ ಟಾಸ್ಕ್ ಗಳು ನೀಡಿದರೂ ಕೂಡ ಬಿಗ್ ಬಾಸ್ ಕಾರ್ಯಕ್ರಮ ಟಿಆರ್ಪಿ ಲೆಕ್ಕದಲ್ಲಿ ಗೆಲುವು ಸಾಧಿಸುವುದರಲ್ಲಿ ವಿಫಲವಾಗಿದೆ.

ಇನ್ನು ಬಹಳ ವರ್ಣರಂಜಿತವಾಗಿ ಮೂಡಿಬಂದ ಬಿಗ್ ಬಾಸ್ ಕಾರ್ಯಕ್ರಮದ ಓಪನಿಂಗ್ ದಿನದ ಎಪಿಸೋಡಿನ ಕುರಿತು ನಾವು ಮಾತನಾಡುವುದಾದರೆ ಕಿಚ್ಚ ಸುದೀಪ್ ರವರು ಮೊದಲ ಬಾರಿಗೆ ಟಿಆರ್ಪಿ ಲೆಕ್ಕದಲ್ಲಿ ಹಿಂದೆ ಉಳಿದಿದ್ದಾರೆ ಎಂಬುದು ತಿಳಿದು ಬಂದಿದೆ. ಹೌದು ಸ್ನೇಹಿತರೇ ಕಳೆದ ವಾರದ ಟಿಆರ್ಪಿ ಲಿಸ್ಟ್ ಗಳು ಇದೀಗ ಬಿಡುಗಡೆಯಾಗಿದ್ದು ಬಿಗ್ ಬಾಸ್ ಕಾರ್ಯಕ್ರಮ ಆರಂಭವಾದ ದಿನದ ಟಿಆರ್ಪಿ ಕೇವಲ 4.5 ಟಿವಿಆರ್ ಎಂಬುದು ತಿಳಿದು ಬಂದಿದೆ, ಇನ್ನು ಇತರ ದಿನಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಕೇವಲ 3.7 ಟಿವಿಆರ್ ಪಡೆಯುವುದರಲ್ಲಿ ಮಾತ್ರ ಯಶಸ್ವಿಯಾಗಿದೆ.ಇದೇ ಸಮಯದಲ್ಲಿ ಪ್ರಸಾರವಾಗುವ ಸತ್ಯ ಹಾಗೂ ನಾಗಿಣಿ ಧಾರಾವಾಹಿಗಳು ಉತ್ತಮ ಟಿವಿಆರ್ ಪಡೆದುಕೊಂಡಿವೆ.

Get real time updates directly on you device, subscribe now.