ದ್ವಾರಕೀಶ್ ರವರ ಬಂಗಲೆಯನ್ನು ರಿಷಬ್ ಶೆಟ್ಟಿ ರವರು ಕೊಂಡದ್ದು ಎಷ್ಟು ಕೋಟಿಗೆ ಗೊತ್ತಾ?? ವಿಷ್ಣು ದಾದಾ ಇದ್ದಿದ್ದರೇ ಹೀಗೆ ಆಗುತಿತ್ತಾ?

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ಹಾಗೂ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರಾಗಿರುವ ದ್ವಾರಕೀಶರವರು ಇದೀಗ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಮನೆಯನ್ನು ಮಾರೀದ್ದಾರೆ. ಒಂದು ಕಾಲದಲ್ಲಿ ಅದೆಷ್ಟೋ ಕಲಾವಿದರಿಗೆ ಕೆಲಸ ನೀಡಿ ಅವರಿಗೆ ಅನ್ನವನ್ನು ನೀಡಿದ ದ್ವಾರಕೀಶ್ ಸಂಸ್ಥೆ ಇದೀಗ ಸಾಲದ ಸುಳಿಯಲ್ಲಿ ಸಿಲುಕಿರುವ ಕಾರಣ ಬಹಳ ಪ್ರೀತಿಯಿಂದ ಕಟ್ಟಿಸಿದ ಮನೆಯನ್ನು ಮಾರಿ ಆರ್ಥಿಕ ಪರಿಸ್ಥಿತಿಯನ್ನು ಸರಿಪಡಿಸಿ ಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಇನ್ನು ಕನ್ನಡ ಚಿತ್ರರಂಗದ ಯುವ ಹಾಗೂ ಭರವಸೆಯ ನಿರ್ದೇಶಕರಾಗಿರುವ ರಿಷಬ್ ಶೆಟ್ಟಿ ರವರು ದ್ವಾರಕೀಶ್ ರವರು ಮನೆ ಮಾರುತ್ತಿರುವ ವಿಷಯವನ್ನು ತಿಳಿದು ಅವರೇ ಕೊಂಡುಕೊಂಡಿದ್ದಾರೆ.

ಹಲವಾರು ವರ್ಷಗಳ ಹಿಂದೆ ಇದೇ ರೀತಿಯ ಆರ್ಥಿಕ ಸಂದಿಗ್ಧ ಪರಿಸ್ಥಿತಿಯನ್ನು ದ್ವಾರಕೀಶ್ ರವರು ಎದುರಿಸಿದಾಗ ನಮ್ಮ ನಿಮ್ಮೆಲ್ಲರ ನೆಚ್ಚಿನ ಕರುನಾಡಿನ ಶ್ರೇಷ್ಠ ನಟ ವಿಷ್ಣುವರ್ಧನ್ ರವರು ದ್ವಾರಕೀಶ್ ರವರ ಸಹಾಯಕ್ಕೆ ನಿಂತು ಯಾವುದೇ ಸಂಭಾವನೆ ಪಡೆಯದೇ ದ್ವಾರಕೀಶ್ ರವರ ‌ ಜೊತೆ ಆಪ್ತಮಿತ್ರ ಸಿನಿಮಾವನ್ನು ಮಾಡಿ ದ್ವಾರಕೀಶ್ ರವರ ಆರ್ಥಿಕ ಸಂಕಷ್ಟವನ್ನು ಚಿಟಿಕೆ ಹೊಡೆಯುವಷ್ಟು ಸುಲಭವಾಗಿ ದೂರ ಮಾಡಿದ್ದರು. ಈ ಚಿತ್ರ ಮಾಡುವ ಮುನ್ನ ವಿಷ್ಣುವರ್ಧನ್ ರವರ ಕುರಿತು ದ್ವಾರಕೀಶ್ ರವರು ಹಲವಾರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು ಕೂಡ ವಿಷ್ಣುವರ್ಧನ್ ರವರು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ದ್ವಾರಕೀಶ್ ರವರ ಸಿನಿಮಾದಲ್ಲಿ ಸಂಭಾವನೆ ಪಡೆಯದೆ ನಟನೆ ಮಾಡುವ ಮೂಲಕ ದ್ವಾರಕೀಶ್ ಅವರಿಗೆ ಸಹಾಯ ಮಾಡಿದರು ಎಂಬ ಮಾತುಗಳು ಈಗಲೂ ಕೂಡ ಗಾಂಧಿನಗರದಲ್ಲಿ ಹರಿದಾಡುತ್ತಿದೆ

ಆದರೆ ಇಂದು ದ್ವಾರಕೀಶ್ ಅವರ ಜೊತೆ ನಿಂತು ಕೊಳ್ಳಲು ಸಾಹಸಸಿಂಹ ವಿಷ್ಣುವರ್ಧನ್ ರವರು ನಮ್ಮ ಜೊತೆ ಇಲ್ಲ. ಹೀಗಿರುವಾಗ ಆರ್ಥಿಕ ಸಂಕಷ್ಟದಿಂದ ಪಾರಾಗಲು ಹಾಗೂ ಸಾಲದ ಸುಳಿಯಿಂದ ಹೊರ ಬರಲು ದ್ವಾರಕೀಶ್ ರವರು ಬಂಗಲೆಯೊಂದನ್ನು ಮಾರೀದ್ದಾರೆ. ದ್ವಾರಕೀಶ್ ಅವರ ಮಕ್ಕಳು ದ್ವಾರಕೀಶ್ ರವರು ಕನ್ನಡ ಚಿತ್ರರಂಗದಲ್ಲಿ ಸೃಷ್ಟಿಸಿದ ಹಾದಿಯಲ್ಲಿ ನಡೆಯಲು ವಿಫಲವಾಗಿರುವುದು ಆರ್ಥಿಕ ಸಂಕಷ್ಟಕ್ಕೆ ಕಾರಣ ಎನ್ನಲಾಗುತ್ತಿದೆ.

ಸಾಕಷ್ಟು ಯಶಸ್ಸಿನ ಚಿತ್ರಗಳಲ್ಲಿ ನಟನೆ ಮಾಡಿ ನಿರ್ದೇಶನ ಮಾಡಿರುವ ದ್ವಾರಕೀಶ್ ರವರು ತಮ್ಮ ಪುತ್ರನನ್ನು ತಮ್ಮದೇ ಹಾದಿಯಲ್ಲಿ ನಡೆಸಲು ವಿಫಲವಾಗಿದ್ದಾರೆ. ದ್ವಾರಕೀಶ್ ಅವರ ಪುತ್ರ ಯೋಗಿ ರವರು ಸ್ಯಾಂಡಲ್ವುಡ್ನ ಸಾಕಷ್ಟು ಕಲಾವಿದರ ಜೊತೆ ಮನಸ್ತಾಪ ಇಟ್ಟುಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ, ಒಮ್ಮೆ ಸುದೀಪ್ ರವರ ಜೊತೆ ವಿಷ್ಣುವರ್ಧನ ಚಿತ್ರ ನಿರ್ಮಾಣ ಮಾಡುವಾಗ ಸೆಟ್ನಲ್ಲಿ ಕಾಣಿಸಿಕೊಂಡು ಬಹಳ ಆತ್ಮೀಯವಾಗಿ ಸುದೀಪ್ ರವರೊಂದಿಗೆ ಇದ್ದ ಯೋಗಿ ರವರು ತದ ನಂತರ ಅಲ್ಲಿಂದ ಕೂಡ ಹೊರ ಬಂದಿದ್ದರು,

ಅದೇಗೋ ಶಿವರಾಜ್ ಕುಮಾರ್ ಅವರ ಜೊತೆ ಆಯುಷ್ಮಾನ್ ಭವ ಚಿತ್ರವನ್ನು ನಿರ್ಮಾಣ ಮಾಡಿದರು. ಆದರೆ ಆ ಚಿತ್ರ ಬಾಕ್ಸಾಫೀಸಲ್ಲಿ ಸದ್ದು ಮಾಡಲು ಸಂಪೂರ್ಣವಾಗಿ ವಿಫಲವಾಯಿತು. ಇದರ ಬೆನ್ನಲ್ಲೇ ಶಿವರಾಜಕುಮಾರ್ ಹಾಗೂ ನಟಿ ರಚಿತಾ ರಾಮ್ ರವರಿಗೆ ಸಂಭಾವನೆ ಸಂಪೂರ್ಣವಾಗಿ ನೀಡಲಿಲ್ಲ ಎಂಬ ವಿವಾದವನ್ನು ಕೂಡ ಸೃಷ್ಟಿಸಿಕೊಂಡರು. ಅಷ್ಟೇ ಅಲ್ಲದೆ ನಿರ್ಮಾಪಕ ಜಯಣ್ಣ ರವರಿಗೆ ಕೂಡ ಇದೇ ಚಿತ್ರದಲ್ಲಿ ಪಡೆದುಕೊಂಡ ಹಣವನ್ನು ವಾಪಸು ನೀಡಿಲ್ಲ ಎಂಬ ಮಾತುಗಳು ಕೂಡ ಜೋರಾಗಿ ಕೇಳಿಬಂದವು.

ಹೀಗೆ ಇಷ್ಟೆಲ್ಲಾ ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿರುವ ದ್ವಾರಕೀಶ್ ರವರ ಕುಟುಂಬ ಇದೀಗ ಇನ್ನು ವಿವಿಧ ಸಾಲಗಳಲ್ಲಿ ಸಿಲುಕಿರುವ ಕಾರಣ ಬೇರೆ ವಿಧಿ ಇಲ್ಲದೆ ಬೆಂಗಳೂರಿನ ಖ್ಯಾತ ಪ್ರದೇಶಗಳಲ್ಲಿ ಒಂದಾಗಿರುವ ಎಚ್ಎಸ್ಆರ್ ಲೇಔಟ್ ನಲ್ಲಿ ಇರುವ ಬಂಗಲೆಯನ್ನು ಮಾರಿದ್ದಾರೆ, ಬಹಳ ತಿಂಗಳುಗಳಿಂದ ಈ ಮನೆಯನ್ನು ದ್ವಾರಕೀಶ್ರವರು ಮಾರುವ ಪ್ರಯತ್ನ ಮಾಡುತ್ತಿದ್ದರು. ಆದರೆ ದ್ವಾರಕೀಶ್ ರವರು ಹೇಳಿದ ಬೆಲೆಗೆ ಯಾರು ಒಪ್ಪದೇ ಇದ್ದಾಗ ಕೊನೆಗೆ ಹಲವಾರು ತಿಂಗಳಾದ ಮೇಲೆ ಯುವ ನಿರ್ದೇಶಕ ರಿಷಬ್ ಶೆಟ್ಟಿ ರವರು ದ್ವಾರಕೀಶ್ ರವರು ಕೇಳಿದಷ್ಟು ಹಣವನ್ನು ನೀಡಿ ಮನೆ ಕೊಂಡುಕೊಳ್ಳಲು ನಿರ್ಧಾರ ಮಾಡಿದ್ದಾರೆ. ಹೌದು ಇದೀಗ ಬಂದಿರುವ ಮೂಲಗಳ ಪ್ರಕಾರ ರಿಷಬ್ ಶೆಟ್ಟಿ ರವರು ಈ ಬಂಗಲೆಗೆ 10.5 ಕೋಟಿ ರೂಪಾಯಿ ನೀಡಿ ಈ ಬಂಗಲೆಯನ್ನು ಕೊಂಡುಕೊಂಡಿದ್ದಾರೆ.

Get real time updates directly on you device, subscribe now.