ಕನ್ನಡತಿ ಧಾರಾವಾಹಿಗೆ ಖ್ಯಾತ ಹಿರಿಯ ನಟ ಹಾಗೂ ನಿರ್ದೇಶಕ ಎಂಟ್ರಿ ! ಯಾರು ಗೊತ್ತಾ??

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಕಿರುತೆರೆಯಲ್ಲಿ ಬಹಳ ಅತ್ಯದ್ಭುತ ಧಾರವಾಹಿಯಾಗಿ ಕನ್ನಡತಿ ಧಾರವಾಹಿ ಮೂಡಿ ಬರುತ್ತಿದೆ. ಕಥೆಯನ್ನು ಎಷ್ಟು ಬೇಕೋ ಅಷ್ಟು ಮಾತ್ರ ತೋರಿಸುತ್ತಾ ಪ್ರತಿಯೊಂದು ಪಾತ್ರಗಳಿಗೂ ತನ್ನದೇ ಆದ ಮಹತ್ವ ನೀಡಿ ಹೆಚ್ಚಾಗಿ ಕಥೆ ಎಳೆಯದೆ ದಿನೇ ದಿನೇ ಅಭಿಮಾನಿ ಬಳಗವನ್ನು ಕನ್ನಡತಿ ಧಾರಾವಾಹಿ ಹೆಚ್ಚಿಸಿಕೊಳ್ಳುತ್ತಿದೆ. ಇದುವರೆಗೂ ಜೀವನದಲ್ಲಿ ಧಾರವಾಹಿ ನೋಡದ ಅದೆಷ್ಟೋ ಜನರು ಕನ್ನಡತಿ ಧಾರಾವಾಹಿ ನೋಡಲು ಆರಂಭಿಸಿದ್ದಾರೆ ಎಂದರೆ ನೀವು ನಂಬಲೇಬೇಕು.

ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಪಡುವ ಧಾರವಾಹಿ ಎಂದು ಖ್ಯಾತಿ ಪಡೆದು ಕೊಂಡಿರುವ ಕನ್ನಡತಿ ಧಾರಾವಾಹಿಯು ಇದೀಗ ಮತ್ತಷ್ಟು ಕುತೂಹಲ ಮೂಡಿಸಲು ಸಿದ್ಧವಾದಂತೆ ಕಾಣುತ್ತಿದೆ, ಹೌದು ಸ್ನೇಹಿತರೇ ಕನ್ನಡತಿ ತಾರಾ ಬಳಗದಲ್ಲಿ ಖ್ಯಾತ ನಿರ್ದೇಶಕ ಹಾಗೂ ನಟರೊಬ್ಬರು ಎಂಟ್ರಿ ಕೊಡುವ ಸೂಚನೆ ಸಿಕ್ಕಿದೆ. ಇವರ ಕುರಿತು ಹಲವಾರು ದಿನಗಳಿಂದ ಹಲವಾರು ಚರ್ಚೆಗಳು ನಡೆಯುತ್ತಿವೆಯಾದರೂ, ಕೊನೆಗೂ ಆ ಕಾಲ ಬಂದಂತೆ ಕಾಣುತ್ತಿದೆ.

ಹೌದು ಸ್ನೇಹಿತರೇ ಮೊದಲಿನಿಂದಲೂ ಭುವಿಯ ತಂದೆಯ ಪಾತ್ರದಲ್ಲಿ ನಟಿಸುತ್ತಾರೆ ಅಥವಾ ವಕೀಲರ ಪಾತ್ರದಲ್ಲಿ ನಟಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದ ಖ್ಯಾತ ನಿರ್ದೇಶಕ ಹಾಗೂ ಹಿರಿಯ ನಟ ಟಿಎನ್ ಸೀತಾರಾಮ್ ರವರು ಧಾರಾವಾಹಿಯಲ್ಲಿ ಪಾತ್ರ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು, ಆದರೆ ಅದ್ಯಾಕೋ ತಿಳಿದಿಲ್ಲ ಪ್ರತಿಯೊಂದು ಪಾತ್ರಗಳಿಗೆ ಇವರ ಹೆಸರು ಕೇಳಿ ಬರುತ್ತಿದ್ದ ಸಂದರ್ಭದಲ್ಲಿ ಇವರು ನಟಿಸಲು ಅವಕಾಶ ಸಿಗಲೇ ಇಲ್ಲ,

ಈಗಾಗಲೇ ಕನ್ನಡತಿ ಎಂತಹ ಅದ್ಭುತ ಧಾರವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ನಟನೆ ಮಾಡಲು ಸ್ಥಾನ ಸಿದ್ಧವಿರುವುದಾಗಿ ಘೋಷಿಸಿರುವ ಸೀತಾರಾಮ್ ರವರು ಇದೀಗ ಇನ್ನು ಕೆಲವೇ ಕೆಲವು ದಿನಗಳಲ್ಲಿ ಕನ್ನಡತಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಮಾಹಿತಿ ಕೇಳಿಬಂದಿದೆ. ಇನ್ನು ಈ ಧಾರಾವಾಹಿಯ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Get real time updates directly on you device, subscribe now.