ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಪರ್ಧಿ ಯಾರು ಗೊತ್ತೇ? ದಾಖಲೆ ನಿರ್ಮಾಣ.

10

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡದ ಪ್ರಖ್ಯಾತ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಬಿಗ್ ಬಾಸ್ ಕಾರ್ಯಕ್ರಮ ವಿವಿಧ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದು ಕೊಳ್ಳುತ್ತಿದೆ. ಎಲ್ಲಿ ನೋಡಿದರೂ ಕಾರ್ಯಕ್ರಮದ ಕುರಿತು ಹೆಚ್ಚಿನ ಚರ್ಚೆ ನಡೆಯುತ್ತಿದ್ದು ಪ್ರೇಕ್ಷಕರನ್ನು ತನ್ನತ್ತ ಸೆಳೆಯುವುದರಲ್ಲಿ ಕಾರ್ಯಕ್ರಮ ಯಶಸ್ವಿಯಾಗುತ್ತಿದೆ. ಹೀಗಿರುವಾಗ ಸ್ಪರ್ಧಿಗಳಿಗೆ ಕೂಡ ಪ್ರತಿ ಸೀಸನ್ ನಂತೆ ಈ ಬಾರಿಯೂ ಕೂಡ ಉತ್ತಮ ಸಂಭವನೆಯನ್ನು ನೀಡಲಾಗುತ್ತಿದೆ.

ಕೆಲವೊಂದು ವಿಶೇಷ ಸ್ಪರ್ಧಿಗಳಿಗೆ ಅತಿ ಹೆಚ್ಚಿನ ಸಂಭಾವನೆ ನೀಡುತ್ತಿದ್ದು, ಇವರನ್ನು ಮನೆಗೆ ಕರೆತರಲು ವಾಹಿನಿಯು ಎಷ್ಟು ಬೇಕಾದರೂ ಕೊಡಲು ಸಿದ್ಧವಾಗಿರುತ್ತದೆ ಯಾಕೆಂದರೆ ಇವರನ್ನು ಮನೆಗೆ ಕರೆತಂದರೆ ಪ್ರೇಕ್ಷಕರನ್ನು ಸೆಳೆಯುವುದು ಸುಲಭವಾಗಲಿದೆ ಎಂಬುದು ಬಿಗ್ ಬಾಸ್ ಲೆಕ್ಕಾಚಾರ,

ಅದೇ ಲೆಕ್ಕಾಚಾರದಂತೆ ಇದೀಗ ಬಿಗ್ ಬಾಸ್ ಕಾರ್ಯಕ್ರಮದ ಸ್ಪರ್ಧಿಗಳ ಸಂಭಾವನೆಯನ್ನು ಗಮನದಲ್ಲಿಟ್ಟು ಕೊಳ್ಳುವುದಾದರೆ ಈ ಹಿಂದೆ ಯಾವುದೇ ಕಳೆದ ಎಲ್ಲ ಸೀಸನ್ ಗಳಲ್ಲಿ ಯಾವುದೇ ಸ್ಪರ್ದಿಗಳಿಗೆ ನೀಡದಷ್ಟು ಹಣವನ್ನು ಈ ಬಾರಿ ನಟಿ ನಿಧಿ ಸುಬ್ಬಯ್ಯರ ಬಗ್ಗೆ ನೀಡಲಾಗುತ್ತಿದ್ದು, ಕನ್ನಡದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಇಲ್ಲಿಯವರೆಗೂ ಅತಿ ಹೆಚ್ಚು ಸಂಭಾವನೆ ಪಡೆದುಕೊಂಡ ನಟಿ ಎಂಬ ಖ್ಯಾತಿಗೆ ಒಳಗಾಗಿದ್ದಾರೆ.

ಹೌದು ಸ್ನೇಹಿತರೆ ಕಿರುತೆರೆಯ ಮೂಲಗಳ ಪ್ರಕಾರ ಇದೇ ಮೊಟ್ಟ ಮೊದಲ ಬಾರಿಗೆ ಸ್ಪರ್ಧೆ ಯೊಬ್ಬರಿಗೆ ವಾರಕ್ಕೆ ಒಂದು ಲಕ್ಷಕ್ಕಿಂತಲೂ ಹೆಚ್ಚು ರೂಪಾಯಿ ನೀಡಲಾಗುತ್ತಿದೆ, ಮೂಲಗಳ ಪ್ರಕಾರ ನಿಧಿ ಸುಬ್ಬಯ್ಯರಿಗೆ ಒಂದು ವಾರಕ್ಕೆ 1,10,000 ರೂಪಾಯಿಗಳನ್ನು ಸಂಭಾವನೆಯಾಗಿ ನೀಡಲಾಗುತ್ತದೆ ಎಂಬುದು ತಿಳಿದು ಬಂದಿದೆ.

Get real time updates directly on you device, subscribe now.