ಬಿಗ್ ಬಾಸ್ ಮನೆಯಲ್ಲಿ ಶಂಕರ್ ಅಶ್ವಥ್ ರವರಿಗೆ ಒಂದು ವಾರಕ್ಕೆ ನೀಡುವ ಸಂಭಾವನೆ ಎಷ್ಟು ಗೊತ್ತೆ??

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಬಿಗ್ ಬಾಸ್ ಮನೆಯಲ್ಲಿ ಶಂಕರ್ ಅಶ್ವತ್ಥ್ ಅವರು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲಾ ಸ್ಪರ್ಧಿಗಳ ಜೊತೆ ಬಹಳ ಉತ್ತಮವಾಗಿ ಬೆರೆತು ಪ್ರತಿಯೊಂದು ಮನೆಯಲ್ಲಿ ಹೇಗೆ ಹಿರಿಯರು ಇರುತ್ತಾರೋ ಅದೇ ರೀತಿ ಬಿಗ್ ಬಾಸ್ ಮನೆಯಲ್ಲಿ ಹಿರಿಯರ ಜವಾಬ್ದಾರಿಯನ್ನು ವಹಿಸಿಕೊಂಡು ತಮ್ಮ ಸಾಮರ್ಥ್ಯಕ್ಕೂ ಮೀರಿದ ರೀತಿ ವಿವಿಧ ಟಾಸ್ಕ್ಗಳಲ್ಲಿ ಭಾಗವಹಿಸುತ್ತಿರುವ ಶಂಕರ್ ಅಶ್ವತ್ಥ್ ಅವರು ಕೇವಲ ಮನೆಯ ಸ್ಪರ್ಧಿಗಳ ಮನಸ್ಸಷ್ಟೇ ಅಲ್ಲದೆ ಪ್ರೇಕ್ಷಕರ ಮನಗೆಲ್ಲುವಲ್ಲಿ ಕೂಡ ಯಶಸ್ವಿಯಾಗಿದ್ದಾರೆ.

ಖಂಡಿತ ಇವರು ಪಡೆಯುತ್ತಿರುವ ಜನಪ್ರಿಯತೆಯನ್ನು ನೋಡಿದರೆ ಇವರು ಬಿಗ್ ಬಾಸ್ ಕಾರ್ಯಕ್ರಮದಿಂದ ಹೊರ ಬಂದ ಮೇಲೆ ಇವರಿಗೆ ಮತ್ತಷ್ಟು ಸಿನಿಮಾಗಳಲ್ಲಿ ಅವಕಾಶ ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ. ಕಳೆದ ಕೆಲವು ದಿನಗಳ ಹಿಂದೆ ಯಾವುದೇ ಅವಕಾಶಗಳಿಲ್ಲದೆ ಕಾಲಕಳೆಯಲು ಹಾಗೂ ಜೀವನೋಪಾಯಕ್ಕಾಗಿ ಉಬರ್ ಕ್ಯಾಬ್ ಓಡಿಸುವುದಾಗಿ ಶಂಕರ್ ಅಶ್ವತ್ಥ್ ಅವರೇ ಹೇಳಿದ್ದರು. ಆದರೆ ಖಂಡಿತ ಇವರು ಮನೆಯಿಂದ ಹೊರ ಬಂದ ಮೇಲೆ ಇವರಿಗೆ ಸಾಕಷ್ಟು ಸಿನಿಮಾಗಳಲ್ಲಿ ಅವಕಾಶಗಳು ಸಿಗುತ್ತವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇನ್ನು ಬಿಗ್ ಬಾಸ್ ಮನೆಯಲ್ಲಿ ಇವರಿಗೆ ಇರಲು ಸಂಭಾವನೆ ನೀಡಲಾಗುತ್ತಿದ್ದು, ಪ್ರತಿಯೊಂದು ವಾರಕ್ಕೆ ಇವರಿಗೆ ನೀಡುವ ಸಂಭಾವನೆ ಕುರಿತು ನಾವು ಮಾತನಾಡುವುದಾದರೆ ಇತರ ಕೆಲವು ಸ್ಪರ್ಧಿಗಳಿಗೆ ಹೋಲಿಕೆ ಮಾಡಿದರೆ ಶಂಕರ್ ಅಶ್ವತ್ಥ್ ಅವರಿಗೆ ನೀಡುವ ಸಂಭಾವನೆ ಕಡಿಮೆಯಾಗಿದೆ. ಆದರೂ ಕೂಡ ಪ್ರತಿವಾರ ಇವರಿಗೆ ಐವತ್ತು ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ. ಒಟ್ಟಿನಲ್ಲಿ ಅದೇನೇ ಆಗಲಿ ಇವರು ಬಿಗ್ ಬಾಸ್ ಮನೆಯಲ್ಲಿ ಬಹಳ ಅದ್ಭುತವಾಗಿ ಆಟವಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಇವರ ಆಟದ ವೈಖರಿ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Get real time updates directly on you device, subscribe now.