ಒಂದು ವಾರಕ್ಕೆ ಜನರ ಫೇವರೆಟ್ ಸ್ಪರ್ದಿ ಮಂಜು ಪಾವಗಡ ಪಡೆಯುವ ಸಂಭಾವನೆ ಎಷ್ಟು ಗೊತ್ತಾ??

1

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕಿರುತೆರೆಯಲ್ಲಿ ಮಜಾ ಭಾರತ ಕಾರ್ಯಕ್ರಮದ ಮೂಲಕ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡು ಇದೀಗ ಬಿಗ್ ಬಾಸ್ ಮನೆಯಲ್ಲಿ ಹಾಸ್ಯ ಚಟಾಕಿ ಆರಿಸುವುದರಲ್ಲಿ ಯಶಸ್ವಿಯಾಗಿರುವ ಮಂಜು ಪಾವಗಡ ರವರು ಬಿಗ್ ಬಾಸ್ ಮನೆಯಲ್ಲಿ ನಿಜಕ್ಕೂ ಎಲ್ಲರ ಮನೆ ಗೆಲ್ಲುವುದರಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ ಬಿಗ್ ಬಾಸ್ ಮನೆಯಲ್ಲಿನ ಸ್ಪರ್ಧಿಗಳಷ್ಟೇ ಅಲ್ಲದೆ ಟಿವಿ ನೋಡುತ್ತಿರುವ ಪ್ರೇಕ್ಷಕರು ಕೂಡ ಮಂಜು ಪಾವಗಡ ರವರನ್ನು ಇಷ್ಟಪಡಲು ಆರಂಭಿಸಿದ್ದಾರೆ

ಇವರು ಮೊದಲು ಬಿಗ್ ಬಾಸ್ ಮನೆಗೆ ಹೋದಾಗ ಸ್ಕ್ರಿಪ್ಟ್ ಇಲ್ಲದೆ ಯಾವುದೇ ಹಾಸ್ಯವನ್ನು ಮಂಜು ಪಾವಗಡ ರವರು ಮಾಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯಗಳು ಕೇಳಿ ಬಂದಿದ್ದವು. ಆದರೆ ತಮ್ಮ ಕುರಿತು ಕೇಳಿಬಂದ ಎಲ್ಲ ಅಭಿಪ್ರಾಯಗಳನ್ನು ಉಲ್ಟಾ ಮಾಡಿ ತಮ್ಮ ಹಾಸ್ಯ ಪ್ರಜ್ಞೆಯ ಮೂಲಕ ಮಂಜು ಪಾವಗಡ ರವರು ಇದೀಗ ಪ್ರೇಕ್ಷಕರನ್ನು ನಕ್ಕು ನಲಿಸುವುದರಲ್ಲಿ ಯಶಸ್ವಿಯಾಗಿದ್ದಾರೆ, ಈ ಮೂಲಕ ಸ್ಕ್ರಿಪ್ಟ್ ಇಲ್ಲದೆ ತಮಾಷೆ ಮಾಡಬಲ್ಲೆನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಅದೇ ಕಾರಣಕ್ಕಾಗಿ ಕೇವಲ ಮೊದಲ ವಾರದಲ್ಲಿಯೇ ಎಲ್ಲಿ ನೋಡಿದರೂ ಮಂಜು ಪಾವಗಡ ರವರು ಗೆಲ್ಲುತ್ತಾರೆ ಎಂಬ ಮಾತುಗಳು ಕೇಳಿ ಬಂದಿವೆ. ಹೀಗಿರುವಾಗ ಮಂಜು ಪಾವಗಡ ರವರು ಒಂದು ವಾರಕ್ಕೆ ಎಷ್ಟು ಸಂಭಾವನೆ ಪಡೆದುಕೊಳ್ಳುತ್ತಾರೆ ಎಂಬುದರ ಕುರಿತು ಚರ್ಚೆ ನಡೆಯುತ್ತಿದ್ದು ಇದೀಗ ಕಿರುತೆರೆಯ ಮೂಲಗಳಿಂದ ಮಂಜು ಪಾವಗಡ ರವರು ಒಂದು ವಾರಕ್ಕೆ 45 ಸಾವಿರ ರೂಪಾಯಿಗಳನ್ನು ಸಂಭಾವನೆಯನ್ನು ಪಡೆಯುತ್ತಾರೆ ಎಂಬುದು ತಿಳಿದು ಬಂದಿದೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಇವರ ಆಟದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರಿಯಬೇಡಿ.

Get real time updates directly on you device, subscribe now.