ಧನುಶ್ರೀ ರವರ ಬದಲು ಮನೆಯಿಂದ ಯಾರು ಹೊರಬರಬೇಕಿತ್ತು ಗೊತ್ತೇ??

8

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಮೊದಲನೇ ಸ್ಪರ್ಧಿ ಎಲಿಮಿನೇಟ್ ಆಗಿದ್ದಾರೆ. ಟಿಕ್ ಟಾಕ್ ಅಪ್ಲಿಕೇಶನ್ ಮೂಲಕ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿ ಲಕ್ಷಾಂತರ ಸಂಖ್ಯೆಯಲ್ಲಿ ಫಾಲ್ಲೋರ್ ಗಳನ್ನು ಹೊಂದಿದ್ದ ಧನುಶ್ರೀ ಅವರು ಇದೀಗ ಬಿಗ್ ಬಾಸ್ ಮನೆಯಿಂದ ಮೊದಲನೇ ಸ್ಪರ್ಧಿಯಾಗಿ ಹೊರ ಬಂದಿದ್ದಾರೆ. ಮೊದಲನೇ ವಾರದಲ್ಲಿ ಎಲ್ಲರ ಜೊತೆ ಬೆರೆಯಲು ವಿಫಲವಾಗಿದ್ದು ಹಾಗೂ ಟಾಸ್ಕ್ ಗಳಲ್ಲಿ ಉತ್ತಮ ಸಾಧನೆ ಮಾಡುವಲ್ಲಿ ವಿಫಲವಾಗಿದ್ದು ಧನುಶ್ರೀ ಅವರ ಸೋಲಿಗೆ ಕಾರಣಗಳು ಎಂದು ಹೇಳಲಾಗುತ್ತಿದೆ.

ಆದರೆ ಒಂದು ವೇಳೆ ಇದೇ ರೀತಿಯ ಮಾನದಂಡಗಳನ್ನು ಪ್ರೇಕ್ಷಕರು ಇಟ್ಟುಕೊಂಡು ಧನುಶ್ರೀ ರವರನ್ನು ಹೊರಕಳಿಸುವ ನಿರ್ಧಾರ ಮಾಡಿದ್ದಾರೆ ಎಂದರೆ ಅಸಲಿಗೆ ಮನೆಯಿಂದ ಹೊರಬೇಕಾದ ಸ್ಪರ್ಧೆಯೇ ಧುನುಶ್ರೀ ರವರು ಅಲ್ಲವೇ ಅಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಹೌದು ಸ್ನೇಹಿತರೇ ಈಗಾಗಲೇ ಧನಶ್ರೀ ರವರು ಕೂಡ ಸಂದರ್ಶನದಲ್ಲಿ ಒಪ್ಪಿಕೊಂಡಿರುವಂತೆ ಧನುಶ್ರೀ ಅವರು ಹೆಚ್ಚಿನ ಸಮಯವನ್ನು ಇತರ ಸ್ಪರ್ಧಿಗಳ ಜೊತೆ ಕಳೆಯದೇ ಹೋದರೂ ಹಾಗೂ ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ತೋರಿದೇ ಇದ್ದರೂ ಕೂಡ ಇವರಿಗಿಂತ ಕಳಪೆ ಆಟವನ್ನು ಆಡಿದ ನಿರ್ಮಲ ರವರು ಇರುವಾಗ ಅದೇಗೆ ಪ್ರೇಕ್ಷಕರು ಧನುಶ್ರೀ ರವರನ್ನು ಅವರ ಕಳುಹಿಸುವ ನಿರ್ಧಾರ ಮಾಡಿದರು ಎಂಬ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿವೆ.

ಯಾರ ಜೊತೆಗೆ ಬೆರೆಯದೇ ವಿಚಿತ್ರವಾಗಿ ವರ್ತನೆ ಮಾಡಿ ಪ್ರೇಕ್ಷಕರನ್ನು ನಿಜಕ್ಕೂ ಆಶ್ಚರ್ಯಗೊಳಿಸಿ ಒಂದು ರೀತಿಯ ವಿಚಿತ್ರ ವರ್ತನೆ ತೋರಿಸಿ ನಿರ್ಮಲ ರವರು ಅದೇಗೆ ಮನೆಯಲ್ಲಿಯೇ ಉಳಿದುಕೊಂಡರೂ ಎಂದು ಜನರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಧನುಶ್ರೆ ರವರು ಬೆಸ್ಟ್ ಆಗದೇ ಇದ್ದರೂ ಕೂಡ ನಿರ್ಮಲ ಅವರಿಗಿಂತ ಉತ್ತಮ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Get real time updates directly on you device, subscribe now.