ಬದಲಾಗುತ್ತಿದೆ ಆರ್ಯವರ್ಧನ್ ಪಾತ್ರ ! ಕಥೆಯಲ್ಲಿ ಹೊಸ ಟ್ವಿಸ್ಟ್ ! ಏನು ಗೊತ್ತಾ??

21

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಜೊತೆ ಜೊತೆಯಲಿ ಧಾರವಾಹಿ ಇದೀಗ ಮತ್ತೊಮ್ಮೆ ಟಿಆರ್ಪಿ ಲಿಸ್ಟಿನಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ, ಹಲವಾರು ವಾರಗಳ ಬಳಿಕ ಜೊತೆ ಜೊತೆಯಲಿ ಧಾರವಾಹಿ ಮತ್ತೊಮ್ಮೆ ಮೊದಲನೇ ಸ್ಥಾನಕ್ಕೆ ಏರಿದೆ. ಇದಕ್ಕೆಲ್ಲ ಕಾರಣ ಕಳೆದ ವಾರ ನಡೆದ ಅನು ಸಿರಿಮನೆಯ ಮದುವೆ ವಿಚಾರ. ಕೊನೆಯದಾಗಿ ವಿಜಯ್ ಸೂರ್ಯ ಅವರ್ ಜೊತೆ ನಡೆಯಬೇಕಿದ್ದ ಮದುವೆ ನಿಂತು ಹೋಯಿತು. ಇನ್ನು ಇಷ್ಟೆಲ್ಲಾ ತಿರುವು ಗಳನ್ನು ಧಾರವಾಹಿ ಪಡೆದುಕೊಂಡ ಮೇಲೆ ಇದೀಗ ಮತ್ತೊಂದು ಹೊಸ ತಿರುವು ಪಡೆದುಕೊಳ್ಳಲು ಸಿದ್ಧವಾಗಿದೆ.

ಹೌದು ಸ್ನೇಹಿತರೇ ಅನು ಸಿರಿಮನೆ ಹಾಗೂ ಆರ್ಯವರ್ಧನ್ ರವರ ಮದುವೆ ನಡೆಯುತ್ತದೆ ಎಂದು ಕೊಂಡಿದ್ದ ಸಂದರ್ಭದಲ್ಲಿ ಇದೀಗ ಹೊಸ ಟ್ವಿಸ್ಟ್ ನೀಡಲು ತಯಾರಿ ನಡೆಸುತ್ತಿದ್ದು ಆರ್ಯವರ್ಧನ್ ಅವರ ಪಾತ್ರ ಸಂಪೂರ್ಣ ಬದಲಾಗಲಿದೆ, ಇಷ್ಟು ದಿವಸ ಆರ್ಯವರ್ಧನ್ ರವರನ್ನು ನಿಮಗೆಲ್ಲರಿಗೂ ತಿಳಿದಿರುವಂತೆ ವರ್ಧನ್ ಗ್ರೂಪ್ ಮಾಲೀಕನಾಗಿ ಹಾಗೂ ವರ್ಧನ್ ಕುಟುಂಬದ ಮಗನಾಗಿ ತೋರಿಸಲಾಗುತ್ತಿತ್ತು, ಆದರೆ ಇದೀಗ ಅನು ಸಿರಿಮನೆ ರವರು ಆರ್ಯವರ್ಧನ್ ರವರು ವರ್ಧನ್ ಕುಟುಂಬದ ಮಗನಲ್ಲ ಎಂಬ ವಿಚಾರವನ್ನು ಹೊರಗೆಳೆದಿದ್ದಾರೆ.

ಇದೀಗ ರಾಜನಂದಿನಿ ರವರು ಬರೆದ ವಿಲ್ ಅನ್ನು ಅನು ರವರು ಹುಡುಕಿ ತೆಗೆದಿದ್ದು, ರಾಜನಂದಿನಿ ಸಂಸ್ಥೆ ನನ್ನ ನಂತರ ನನ್ನ ತಮ್ಮ ಹರ್ಷವರ್ಧನ್ ಹಾಗೂ ತಾಯಿ ಶಾರದಾ ದೇವಿಗೆ ಸೇರಬೇಕು ಎಂದು ಬರೆದಿದ್ದಾರೆ, ಇದರಿಂದ ಆರ್ಯವರ್ಧನ್ ರವರು ಶಾರದಾ ದೇವಿ ರವರ ಮಗನಲ್ಲ ಎಂಬುದು ಬಹಿರಂಗಗೊಂಡಿದೆ. ಇದೀಗ ಧಾರವಾಹಿಯಲ್ಲಿ ರೋಚಕ ತಿರುವುಗಳು ಜೊತೆಗೆ ಆರ್ಯವರ್ಧನ್ ಹಾಗೂ ಝೇಂಡೆ ರವರ ಬಾಲ್ಯ ಜೀವನದ ಕುರಿತು ತೋರಿಸಲಾಗುತ್ತದೆ, ವಿಶೇಷವೆಂದರೆ ಇವರಿಬ್ಬರ ಬಾಲ್ಯದ ಜೀವನದ ಪಾತ್ರವನ್ನು ಮಾಡಲು ಡ್ರಾಮಾ ಜೂನಿಯರ್ಸ್ ಕಲಾವಿದರು ಸಿದ್ಧತೆ ನಡೆಸಿದ್ದು ಧಾರಾವಾಹಿಗೆ ಮತ್ತಷ್ಟು ಕಳೆ ತಂದುಕೊಡುವಲ್ಲಿ ಯಶಸ್ವಿಯಾಗಲಿದ್ದಾರೆ.

Get real time updates directly on you device, subscribe now.