ಬಿಗ್ ನ್ಯೂಸ್: ಟಿಆರ್ಪಿ ಯಲ್ಲಿ ಮಹತ್ವದ ಬದಲಾವಣೆ, ಟಾಪ್ 10 ಧಾರಾವಾಹಿಗಳು ಯಾವ್ಯಾವು ಗೊತ್ತೇ??

17

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಕಳೆದ ಕೆಲವು ತಿಂಗಳುಗಳಿಂದ ಕನ್ನಡದ ಟಿಆರ್ಪಿ ಲಿಸ್ಟಿನಲ್ಲಿ ನೀವು ಹೆಚ್ಚಿನ ಬದಲಾವಣೆಗಳನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ, ಬಿಡುಗಡೆಯಾದ ವಾರದಿಂದಲೂ ಸತ್ಯ ಧಾರವಾಹಿ ಮೊದಲನೇ ಸ್ಥಾನದಲ್ಲಿ ಸ್ಥಾನ ಪಡೆದುಕೊಂಡು ಭದ್ರವಾಗಿ ನೆಲೆಯೂರಿತ್ತು, ಎಷ್ಟರ ಮಟ್ಟಿಗೆ ಎಂದರೇ ಕನಿಷ್ಠ 2000 ಅಂಕಗಳಿಂದ ಎರಡನೇ ಸ್ಥಾನದಲ್ಲಿರುವ ಧಾರವಾಹಿಯಿಂದ ಮುಂದಿರುತ್ತಿತ್ತು. ಆದರೆ ಇದೀಗ ಕಳೆದ ವಾರದ ಟಿಆರ್ಪಿ ಬಿಡುಗಡೆಯಾಗಿದ್ದು, ಇದೇ ಮೊದಲ ಬಾರಿಗೆ ಸತ್ಯ ಧಾರಾವಾಹಿ ಮೊದಲನೇ ಸ್ಥಾನದಿಂದ ಕೆಳಗಡೆ ಬಂದಿದೆ. ಈ ಟಿಆರ್ಪಿ ಲಿಸ್ಟಿನ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

ಹಾಗಿದ್ದರೆ ಬನ್ನಿ ಟಿಆರ್ಪಿ ಲೆಕ್ಕಾಚಾರದ ಪ್ರಕಾರ ಯಾವ ಧಾರವಾಹಿಗಳು ಯಾವ್ಯಾವ ಸ್ಥಾನವನ್ನು ಪಡೆದುಕೊಂಡಿದೆ ಎಂಬುದನ್ನು ತಿಳಿದುಕೊಳ್ಳೋಣ. ಸ್ನೇಹಿತರೇ ಕಳೆದ ವಾರದ ಟಿಆರ್ಪಿ ಲೆಕ್ಕಾಚಾರದ ಪ್ರಕಾರ ಹತ್ತನೇ ಸ್ಥಾನದಲ್ಲಿ ಗಿಣಿರಾಮ ಧಾರಾವಾಹಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಒಂಬತ್ತನೇ ಸ್ಥಾನದಲ್ಲಿ ಕನ್ನಡತಿ ಧಾರಾವಾಹಿಯ ಸ್ಥಾನ ಪಡೆದುಕೊಂಡಿದೆ. ಬಹಳ ನಿರೀಕ್ಷೆ ಮೂಡಿಸಿದ್ದರೂ ಕೂಡ ಕನ್ನಡತಿ ಧಾರಾವಾಹಿ ಟಿಆರ್ಪಿ ಲಿಸ್ಟಿನಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ.

ಇನ್ನು ಎಂಟನೇ ಸ್ಥಾನದಲ್ಲಿ ಮುದ್ದುಲಕ್ಷ್ಮಿ ಧಾರವಾಹಿಯು ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಏಳನೇ ಸ್ಥಾನದಲ್ಲಿ ಕಲರ್ಸ್ ಕನ್ನಡ ವಾಹಿನಿಯ ಗೀತ ದಾರವಾಹಿ ಸ್ಥಾನ ಪಡೆದು ಕೊಂಡಿದೆ. ಇನ್ನುಳಿದಂತೆ 6ನೇ ಸ್ಥಾನದಲ್ಲಿ ಮಂಗಳ ಗೌರಿ ದಾರವಾಹಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನು ಐದನೇ ಸ್ಥಾನದಲ್ಲಿ ಪಾರು ಧಾರವಾಹಿ, ನಾಲ್ಕನೇ ಸ್ಥಾನದಲ್ಲಿ ನಾಗಿಣಿ ಭಾಗ-2 ಧಾರವಾಹಿ ಸ್ಥಾನ ಪಡೆದುಕೊಂಡಿದೆ. ಇನ್ನು ಇಷ್ಟು ದಿವಸ ಎರಡನೇ ಸ್ಥಾನದಲ್ಲಿ ಭದ್ರವಾಗಿ ನೆಲೆಯೂರಿದ್ದ ಗಟ್ಟಿಮೇಳ ಧಾರಾವಾಹಿಯು ಈ ಬಾರಿ ಮೂರನೇ ಸ್ಥಾನ ಪಡೆದು ಕೊಂಡಿದೆ, ಮೊದಲನೇ ಬಾರಿಗೆ ಸತ್ಯ ಧಾರವಾಹಿ ಇವರ ಎರಡನೇ ಸ್ಥಾನಕ್ಕೆ ಜಾರಿದ್ದು, ಹಲವಾರು ತಿಂಗಳುಗಳ ಬಳಿಕ ಜೊತೆ ಜೊತೆಯಲಿ ಧಾರಾವಾಹಿ ಮೊದಲನೇ ಸ್ಥಾನಕ್ಕೆ ಏರಿದೆ.

Get real time updates directly on you device, subscribe now.