ನೀವಂದುಕೊಂಡಷ್ಟು ವಯಸ್ಸಾಗಿಲ್ಲ, ನಾನು ಚಿಕ್ಕವಳು ಎಂದ ಪ್ರಿಯಾಂಕಾ, ಇವರ ನಿಜವಾದ ವಯಸ್ಸೆಷ್ಟು ಗೊತ್ತೇ??

9

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕಿನ್ನರಿ ಧಾರಾವಾಹಿಯ ಮೂಲಕ ಕಿರುತೆರೆ ಜೌರ್ನಿಯನ್ನು ಆರಂಭಿಸಿ, ತದ ನಂತರ ಚಂದ್ರಿಕಾ ಎಂಬ ಖಡಕ್ ವಿಲನ್ ಪಾತ್ರದಲ್ಲಿ ನಟಿಸುವ ಮೂಲಕ ಭಾರೀ ಜನಪ್ರಿಯತೆಯನ್ನು ಪಡೆದು ಕೊಂಡ ಪ್ರಿಯಾಂಕಾ ರವರು ತದ ನಂತರ ದಿನಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ತಮ್ಮ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡರು. ಹೀಗೆ ವಿವಿಧ ಕಾರ್ಯಕ್ರಮಗಳ ಮೂಲಕ ಹಾಗೂ ಧಾರಾವಾಹಿಗಳ ಮೂಲಕ ದಿನೇ ದಿನೇ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಪ್ರಿಯಾಂಕಾ ರವರು ಇದೀಗ ಸಂದರ್ಶನವೊಂದರಲ್ಲಿ ಅಚ್ಚರಿ ಕೆ ಹೇಳಿಕೆಯನ್ನು ನೀಡಿದ್ದಾರೆ

ಹೌದು ಸ್ನೇಹಿತರೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡ ಬಳಿಕ ಇದೀಗ ಸತ್ಯ ಧಾರವಾಹಿಯಲ್ಲಿ ಮತ್ತೊಮ್ಮೆ ನೆಗೆಟಿವ್ ರೋಲ್ ಇವರಿಗೆ ದೊರೆತಿದೆ, ಅಗ್ನಿಸಾಕ್ಷಿ ಧಾರವಾಹಿ ಯಲ್ಲಿಯೂ ಕೂಡ ನೆಗೆಟಿವ್ ರೋಲ್ ಹಾಗೂ ಆಂಟಿ ವಯಸ್ಸಿನ ಪಾತ್ರಧಾರಿಯಾಗಿ ನಟಿಸಬೇಕಾಗಿತ್ತು. ಇದನ್ನು ಕಂಡ ಎಲ್ಲರೂ ಪ್ರಿಯಾಂಕ ರವರಿಗೆ ನಿಜಕ್ಕೂ ಮೂವತ್ತಕ್ಕಿಂತ ಹೆಚ್ಚು ವಯಸ್ಸಾಗಿದೆ ಎಂದು ನಂಬಿದ್ದರು.

ಇದರ ಕುರಿತು ಇದೀಗ ಮಾತನಾಡಿರುವ ಪ್ರಿಯಾಂಕಾ ರವರು ಬರುತ್ತಿರುವ ಪಾತ್ರಗಳು ಮಾತ್ರ ಹೆಚ್ಚಿನ ವಯಸ್ಸಿನ ಮಹಿಳೆಯಂತೆ ನಟಿಸುವ ಅವಕಾಶ ಸಿಗುತ್ತದೆ, ಆದರೆ ನನಗೆ ನಿಜಕ್ಕೂ ಅಷ್ಟು ವಯಸ್ಸಾಗಿಲ್ಲ ನಾನು ಇನ್ನು ಚಿಕ್ಕ ಹುಡುಗಿ ಎಂದರೂ ಕೂಡ ಯಾರೂ ಕೇಳುವುದಿಲ್ಲ ಏನು ಮಾಡುವುದು ನಾನು ಮಾಡುವ ಪಾತ್ರಗಳು ನನ್ನ ವಯಸ್ಸನ್ನು ಜಾಸ್ತಿ ಮಾಡಿಸಿವೆ ಎಂದು ಹೇಳಿಕೆ ನೀಡಿದ್ದಾರೆ. ಅಂದ ಹಾಗೆ ಇವರ ವಯಸ್ಸಿನ ಕುರಿತು ನಾವು ಗಮನಿಸುವುದಾದರೆ ಪ್ರಿಯಾಂಕಾ ರವರು 1994 ರಲ್ಲಿ ಜನಿಸಿದ್ದಾರೆ, ಅಂದರೆ ಈ ಲೇಖನ ಬರೆಯುವ ಸಮಯದಲ್ಲಿ ಇವರಿಗೆ 26 ವರ್ಷಗಳಾಗಿವೆ.

Get real time updates directly on you device, subscribe now.