ಕಿರುತೆರೆಗೆ ಮತ್ತೊಬ್ಬರು ದಕ್ಷಿಣ ಭಾರತದ ಖ್ಯಾತ ನಟಿ ಎಂಟ್ರಿ, ಯಾರು ಮತ್ತು ಯಾವ ಧಾರವಾಹಿ ಗೊತ್ತೇ??

14

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇಂದಿನ ದಿನಗಳಲ್ಲಿ ಕಿರುತೆರೆಯು ಯಾವುದೇ ಚಿತ್ರರಂಗಕ್ಕಿಂತ ಕಡಿಮೆ ಇಲ್ಲ, ಪ್ರತಿಯೊಂದು ಎಪಿಸೋಡಿಗೂ ಕೂಡ ನಿರ್ಮಾಪಕರು ಹಿಂದೆ ಮುಂದೆ ನೋಡುವುದಿಲ್ಲ, ಎಷ್ಟೆಲ್ಲ ಬಂಡವಾಳ ಹೂಡಿಕೆ ಮಾಡಿದರೂ ಕೂಡ ಒಮ್ಮೆ ಜನರು ಮೆಚ್ಚಿಕೊಂಡರೆ ಬಹಳ ಸುಲಭವಾಗಿ ಲಾಭ ಬರುತ್ತ್ತದೆ ಎಂಬ ಲೆಕ್ಕಾಚಾರ ನಿರ್ಮಾಪಕರದ್ದು. ಇನ್ನು ಅದೇ ಕಾರಣಕ್ಕೆ ಜನರು ಕೂಡ ಬಹಳ ಇಷ್ಟ ಪಟ್ಟು ವರ್ಣ ರಂಜಿತವಾಗಿ ಮೂಡಿಬರುತ್ತಿರುವ ಧಾರಾವಾಹಿಗಳನ್ನು ನೋಡಿತ್ತಿದ್ದಾರೆ. ಇನ್ನು ಹೀಗೆ ಬಹಳ ಅದ್ಭುತವಾಗಿ ಕಿರುತೆರೆಯಲ್ಲಿ ಧಾರಾವಾಹಿಗಳು ನಿರ್ಮಾಣ ವಾಗುತ್ತಿರುವ ಕಾರಣ ಬೆಳ್ಳಿ ತೆರೆಯ ನಟರು ಹಾಗೂ ನಟಿಯರು ಕೂಡ ಧಾರಾವಾಹಿಗಳಲ್ಲಿ ನಟಿಸಲು ಹಿಂದೇಟು ಆಗುತ್ತಿಲ್ಲ.

ಬಹು ಬೇಡಿಕೆಯ ನಟಿಯರು ಹಾಗೂ ಪೋಷಕ ನಟಿಯರು ಕೂಡ ಧಾರಾವಾಹಿಯಲ್ಲಿ ನಟಿಸಲು ಒಪ್ಪಿಕೊಳ್ಳುತ್ತಿದ್ದಾರೆ, ಇನ್ನು ಇದೀಗ ಈ ಸಾಲಿಗೆ ಮತ್ತೊಬ್ಬರು ಖ್ಯಾತ ಹಿರಿಯ ನಟಿ ಒಪ್ಪಿಕೊಂಡು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ, ವಿಶೇಷವೇನೆಂದರೆ ಈ ಧಾರವಾಹಿ ಇದೀಗ ಕನ್ನಡ ಭಾಷೆಯಲ್ಲಿಯೂ ಕೂಡ ಪ್ರಸಾರವಾಗುತ್ತಿದೆ, ಆದ ಕಾರಣ ಪರೋಕ್ಷವಾಗಿ ಕನ್ನಡ ಕಿರುತೆರೆಗೂ ಕೂಡ ಕಾಲಿಟ್ಟಂತೆ ಆಗಲಿದೆ. ಆ ಖ್ಯಾತ ನಟಿ ಯಾರು ಹಾಗೂ ಯಾವ ಧಾರವಾಹಿ ಎಂಬುದನ್ನು ತಳಿಸುತ್ತೇವೆ ಕೇಳಿ.

ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಗಟ್ಟಿಮೇಳ ಧಾರವಾಹಿ ಖ್ಯಾತಿಯ ಆರತಿ ಪಾತ್ರದಾರಿ ನಟಿಸುತ್ತಿರುವ ನಾಗ ಭೈರವಿ, ಧಾರವಾಹಿ ಇದೀಗ ಪ್ರಸಾರವಾಗಲು ಆರಂಭಿಸಿದೆ. ಈ ಧಾರಾವಾಹಿಯಲ್ಲಿ ನಟಿ ಯಾಶ್ಮಿ ಗೌಡ ರವರು ಕೂಡ ನಟನೆ ಮಾಡುತ್ತಿದ್ದಾರೆ, ಅಷ್ಟೇ ಅಲ್ಲದೇ, ದಕ್ಷಿಣ ಭಾರತದ ಎಲ್ಲಾ ಚಿತ್ರರಂಗದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಹಾಗೂ ಇಂದಿಗೂ ಕೂಡ ಬಹುಬೇಡಿಯ ನಟಿಯಾಗಿರುವ ರಮ್ಯಾ ಕೃಷ್ಣ ರವರು ಇದೀಗ ನಾಗ ಭೈರವಿ ಧಾರಾವಾಹಿಯ ಮೂಲಕ ಚಿತ್ರ ರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇನ್ನು ಈ ಸುದ್ದಿ ಕುರಿತು ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Get real time updates directly on you device, subscribe now.