ಮೊದಲ ದಿನದಲ್ಲಿಯೇ ಗೆಲುವಿನ ತಂತ್ರ ಆರಂಭಿಸಿದ ಧನುಶ್ರೀ ! ಏನು ಗೊತ್ತಾ??

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ದೊರೆತಿದೆ, ಟಾಸ್ಕ್ ಗಳು ಕೂಡ ಯಶಸ್ವಿಯಾಗಿ ನಡೆಯುತ್ತಿವೆ, ಹೀಗಿರುವಾಗ ಸ್ಪರ್ಧಿಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಅಭಿಪ್ರಾಯಗಳು ವ್ಯಕ್ತವಾಗಿವೆ, ಅದರಂತೆ ಧನುಶ್ರೀ ರವರ ಕುರಿತು ಸಾಕಷ್ಟು ಅಭಿಪ್ರಾಯಗಳು ವ್ಯಕ್ತವಾಗಿದ್ದು, ಕಳೆದ ಆವೃತ್ತಿಗಳ ಬಿಗ್ ಬಾಸ್ ಸ್ಪರ್ಧೆಯಂತೆ ಧನುಶ್ರೀ ರವರು ಕೆಲವೊಂದು ಗೆಲುವಿನ ತಂತ್ರ ಊಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಬನ್ನಿ ಈ ಕುರಿತು ಇಂದು ನಿಮಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ, ಸ್ನೇಹಿತರೇ ಕಳೆದ ಹಲವಾರು ವೃತ್ತಿಗಳಿಂದ ಬಿಗ್ ಬಾಸ್ ಕಾರ್ಯಕ್ರಮದ ಕುರಿತು ಹಲವಾರು ವಾದಗಳು ಕೇಳಿ ಬರುತ್ತಿವೆ, ಮೊದಲೇ ವಿನ್ನರ್ ಅನ್ನು ಫಿಕ್ಸ್ ಮಾಡಲಾಗಿರುತ್ತದೆ, ಸುದೀಪ್ ರವರಿಗೆ ಬಕೆಟ್ ಹಿಡಿಯುವವರನ್ನು ಹೆಚ್ಚಿನ ದಿನ ಉಳಿಸಿ ಕೊಳ್ಳಲಾಗುತ್ತದೆ ಹೀಗೆ ನೂರಾರು ರೀತಿಯಲ್ಲಿ ವಾದಗಳು ಕೇಳಿ ಬರುತ್ತಿವೆ.

ಈ ಬಾರಿ ಕೂಡ ಧನುಶ್ರೀ ರವರು ರಾತ್ರೋ ರಾತ್ರಿ ಫೇಮಸ್ ಆಗಿ ಟಿಕ್ ಟಾಕ್ ಮೂಲಕ ಜನಪ್ರಿಯತೆ ಗಳಿಸಿ ಬಿಗ್ ಬಾಸ್ ಮನೆಗೆ ತೆರೆಳಿದಿರುವುದು ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ, ಅಷ್ಟೇ ಅಲ್ಲದೆ ಕಳೆದ ಕೆಲವು ಆವೃತ್ತಿ ಗಳಲ್ಲಿ ಹೆಚ್ಚಿನ ಜನಪ್ರಿಯತೆ ಇಲ್ಲದೆ ಇದ್ದರೂ ಕೂಡ ಸುದೀಪ್ ರವರ ಕುರಿತು ಮಾತನಾಡಿ ಮನೆಯಲ್ಲಿ ಉಳಿಯುತ್ತಿದ್ದಾರೆ ಎಂಬ ಹಲವಾರು ಸ್ಪರ್ಧಿಗಳ ಹೆಸರಿಗೆ ಇದೀಗ ಧನುಶ್ರೀ ರವರ ಹೆಸರು ಸೇರ್ಪಡೆಯಾಗಿದೆ, ಸುದೀಪ್ ರವರ ಕುರಿತು ಅಭಿಮಾನದ ಮಾತುಗಳನ್ನು ಹೆಚ್ಚು ಆಡಿ, ಸುದೀಪ್ ರವರನ್ನು ಮೆಚ್ಚಿಸುವ ಮೂಲಕ ಬಕೆಟ್ ಹಿಡಿದು ಮನೆಯಲ್ಲಿ ಉಳಿಯುವ ಪ್ರಯತ್ನವನ್ನು ಧನುಶ್ರೀ ಮಾಡುತ್ತಿದ್ದಾರೆ ಎಂಬ ಟ್ರೋಲ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಹರಿದಾಡುತ್ತಿವೆ.

Get real time updates directly on you device, subscribe now.