ಬಿಗ್ ಬಾಸ್ ಮನೆಯ ಫೋಟೋಗಳು ಬಿಡುಗಡೆ ! ಹೇಗಿರಲಿದೆ ಗೊತ್ತಾ ಬಿಗ್ ಬಾಸ್ ಮನೆ?

28

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇನ್ನು ಬಿಗ್ ಬಾಸ್ ಕಾರ್ಯಕ್ರಮ ಆರಂಭಗೊಳ್ಳಲು ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ, ಪ್ರತಿ ಬಾರಿಗಿಂತ ಈ ಬಾರಿ ಹೆಚ್ಚಿನ ನಿರೀಕ್ಷೆಯನ್ನು ಪ್ರೇಕ್ಷಕರು ಇಟ್ಟುಕೊಂಡಿದ್ದು ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗುವುದನ್ನು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಇನ್ನು ಪ್ರತಿಬಾರಿಯೂ ಬಿಗ್ ಬಾಸ್ ಮನೆ ಹೇಗಿರಲಿದೆ ಎಂದು ಎಲ್ಲರಿಗೂ ಕುತೂಹಲ ಮೂಡುತ್ತದೆ, ಅದೇ ಕಾರಣಕ್ಕಾಗಿ ಇದೀಗ ಬಿಗ್ ಬಾಸ್ ಕಾರ್ಯಕ್ರಮದ ಆಯೋಜಕರಾದ ಪರಮೇಶ್ವರ್ ರವರು ಬಿಗ್ ಬಾಸ್ ಮನೆಯ ಫೋಟೋ ಬಿಡುಗಡೆ ಮಾಡಿ ಹೆಚ್ಚಿನ ಮಾಹಿತಿಯನ್ನು ನೀಡಿದ್ದಾರೆ

ಸ್ನೇಹಿತರೆ ಈ ಬಾರಿಯ ಬಿಗ್ ಬಾಸ್ ಮನೆಯ ಅಡುಗೆ ಮನೆ ಹೇಗಿರಲಿದೆ ಎಂದರೆ ಹಸಿರು ಬಣ್ಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಸ್ಪರ್ಧಿಗಳು ಹೆಚ್ಚಿನ ಸಮಯವನ್ನು ಅಡುಗೆ ಮನೆಯಲ್ಲಿ ಕಳೆಯುವ ಕಾರಣ ಬಹಳ ದೊಡ್ಡದಾಗಿ ಅಡುಗೆ ಮನೆಯನ್ನು ನಿರ್ಮಾಣ ಮಾಡಲಾಗಿದೆ ಹಾಗೂ ಸಾಕಷ್ಟು ಜನರು ಒಟ್ಟಾಗಿ ಕೂತು ಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ, ಇನ್ನು ಜಸ್ಟ್ ಬಾತ್ ಬಾತಲ್ಲಿ ಎಂಬ ಟ್ಯಾಗ್ ಲೈನ್ ಹಾಕಲಾಗಿದ್ದು ಅಡುಗೆ ಮನೆ ಈ ಕೆಳಗಿನಂತೆ ಇರಲಿದೆ

ಇನ್ನು ಈ ಬಾರಿ ಆಧುನಿಕವಾಗಿ ಹಳೆಯ ಹಳ್ಳಿ ಮನೆಯಂತೆ ಬಿಗ್ ಬಾಸ್ ಮನೆ ವಿನ್ಯಾಸ ಗೊಳಿಸಲಾಗುತ್ತದೆ ಹೆಚ್ಚು ಹಸಿರು ಬಳಸಲಾಗಿದೆ ಕಾರಣ ಎಂಬುದು ತಿಳಿದು ಬಂದಿದೆ, ಎಂದಿನಂತೆ ಅಲ್ಲಲ್ಲಿ ಜಾಹೀರಾತು ಚಿತ್ರಗಳನ್ನು ಕೂಡ ಅಂಟಿಸಲಾಗಿತ್ತು ಈ ಬಾರಿ ಸಾಮಾಜಿಕ ಅಂತರವನ್ನು ಸಾರುವುದಕ್ಕಾಗಿ ಪ್ರತಿಯೊಂದು ವಸ್ತುಗಳನ್ನು ದೂರ ದೂರ ಇಡಲಾಗಿದೆ, ಇನ್ನುಳಿದಂತೆ ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಸ್ವಿಮಿಂಗ್ಪೂಲ್ ನೀಡದಿರಲು ನಿರ್ಧಾರ ಮಾಡಲಾಗಿದ್ದು, ಕೊರೊನ ಕಾರಣದಿಂದಾಗಿ ಈ ರೀತಿಯ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದು ತಿಳಿದು ಬಂದಿದೆ.

Get real time updates directly on you device, subscribe now.