ವಿವಾದದ ಬೆನ್ನಲ್ಲೇ ಶುರುವಾಯಿತು ಡೈಲಾಗ್ ವಾರ್ ! ಧ್ರುವ ಖದರ್ ಡೈಲಾಗ್ ಸೃಷ್ಟಿಸಿತು ಫ್ಯಾನ್ ವಾರ್

1

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಸಿನಿಮಾ ಎಂದ ಮೇಲೆ ಖಡಕ್ ಡೈಲಾಗ್ ಇರುವುದು ಸಾಮಾನ್ಯ, ಅದರಲ್ಲಿಯೂ ಸ್ಟಾರ್ ನಟರ ಸಿನಿಮಾದಲ್ಲಿ ಡೈಲಾಗ್ ಗಳಿಗೆ ಬರ ಇರುವುದಿಲ್ಲ. ಇನ್ನು ತಮ್ಮದೇ ಆದ ಡೈಲಾಗ್ ಡೆಲವರಿ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನ ಛಾಪು ಮೂಡಿಸಿರುವ ಧ್ರುವ ಸರ್ಜಾ ಅವರ ಸಿನಿಮಾದಲ್ಲಿಯೂ ಕೂಡ ಡೈಲಾಗ್ ಗಳಿಗೆ ಯಾವುದೇ ಕೊರತೆ ಇರುವುದಿಲ್ಲ

ಉದ್ದುದ್ದ ಡೈಲಾಗ್ ಗಳನ್ನು ಬಹಳ ಸುಲಭವಾಗಿ ಬಹಳ ಉತ್ತಮ ಟೈಮಿಂಗ್ ನೊಂದಿಗೆ ಡೈಲಾಗ್ ಹೇಳುವ ದ್ರುವ ಸರ್ಜಾ ರವರು ಇತ್ತೀಚಿಗೆ ಬಿಡುಗಡೆಗೊಂಡ ಪೊಗರು ಸಿನಿಮಾದಲ್ಲಿಯೂ ಕೂಡ ಹವಾ ಸೃಷ್ಟಿಸುವಂತಹ ಡೈಲಾಗ್ ಗಳನ್ನು ಹೊ’ಡೆದಿದ್ದಾರೆ, ಆದರೆ ಇದೀಗ ವಿವಾದಗಳು ಬಗ್ಗೆ ಹರಿದಿರುವ ಬೆನ್ನಲ್ಲೇ ಪೊಗರು ಚಿತ್ರದ ಡೈಲಾಗ್ ಗಳಿಂದ ಫ್ಯಾನ್ ವಾರ್ ಸೃಷ್ಟಿ ಯಾಗುವ ಸೂಚನೆಗಳು ಎದ್ದು ಕಾಣುತ್ತಿವೆ.

ಹೌದು ಸ್ನೇಹಿತರೆ ಟಿವಿ9 ವರದಿಯ ಪ್ರಕಾರ ಸಿನಿಮಾದಲ್ಲಿ ನಾನೇ ಕಿಂಗು ನಾನೇ ಹೀರೋ ಅನ್ನೋದು ನಾವು ಡಿಸೈಡ್ ಮಾಡೋದು ಅಲ್ಲ ಜನ ಡಿಸೈಡ್ ಮಾಡಬೇಕು ಎಂದು ಧ್ರುವ ಸರ್ಜಾ ರವರು ಹೇಳಿರುವ ಡೈಲಾಗ್ ವೈರಲ್ ಆಗಿದೆ, ಈ ಡೈಲಾಗನ್ನು ಕನ್ನಡದ ಖ್ಯಾತ ನಟರಾಗಿರುವ ಯಶ್ ರವರಿಗೆ ಹೇಳಲಾಗಿದೆ ಎಂದು ಕೆಲವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ತಕ್ಷಣ, ಯಶ್ ಫ್ಯಾನ್ಸ್ ಗಳು ಗರಂ ಆಗಿದ್ದಾರೆ, ನಾವು ಕೂಡ ದ್ರುವ ಸರ್ಜಾ ರವರ ಸಿನಿಮಾವನ್ನು ನೋಡುತ್ತಿದ್ದೇವೆ, ದಯವಿಟ್ಟು ಈ ರೀತಿ ಅಭಿಪ್ರಾಯಗಳು ಬೇಡ ಎಂದು ಯಶ್ ಫ್ಯಾನ್ಸ್ ರವರು ಹೇಳಿಕೆ ನೀಡಿದರೆ ಮತ್ತೊಂದಡೆ ಧ್ರುವ ಸರ್ಜಾ ಅಭಿಮಾನಿಗಳು ಕೂಡ ಯಾವುದೇ ಫ್ಯಾನ್ ವಾರ್ ಇಲ್ಲ ಎಂಬಂತೆ ವರ್ತಿಸಿದ್ದಾರೆ ಆದರೆ ಕೆಲವೊಂದಷ್ಟು ಜನ ಯಶ್ ರವರ ಪರವಾಗಿ ಹಾಗೂ ಮತ್ತೊಂದಷ್ಟು ಜನ ಧ್ರುವ ಸರ್ಜಾ ರವರ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಈ ಡೈಲಾಗ್ ಕುರಿತು ಚರ್ಚೆ ಮಾಡಲು ಆರಂಭಿಸಿದ್ದಾರೆ, ಇದು ದಿನೇ ದಿನೇ ಹೆಚ್ಚಾಗುತ್ತಿದ್ದು ಡೈಲಾಗ್ ಮೂಲಕ ಕನ್ನಡ ಹೀರೋಗಳಿಗೆ ಟಾಂಗ್ ನೀಡಲಾಗಿದೆ ಎಂಬ ಮಾತುಗಳನ್ನು ಕೆಲವರು ಹಾಡುತ್ತಿದ್ದಾರೆ.

Get real time updates directly on you device, subscribe now.