ಹೈದರಾಬಾದ್ ಆಯಿತು ಇದೀಗ ಮುಂಬೈನಲ್ಲಿ ಹೊಸ ಮನೆ ಖರೀದಿ ಮಾಡಿದ ರಶ್ಮಿಕ ! ಬೆಲೆ ಕೇಳಿದರೆ ತಲೆತಿರುಗುತ್ತದೆ !
ನಮಸ್ಕಾರ ಸ್ನೇಹಿತರೇ ರಶ್ಮಿಕ ಮಂದನ್ನ ರವರು ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಬಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ, ಬಾಲಿವುಡ್ ಚಿತ್ರ ನಟ ಸಿದ್ಧಾರ್ಥ್ ಮಲ್ಹೋತ್ರ ರವರ ಅಭಿನಯದ ಮಿಷನ್ ಮಜ್ನು ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಪ್ರವೇಶ ಮಾಡಲು ಸಜ್ಜಾಗಿರುವ ರಶ್ಮಿಕ ಮಂದನ್ನ ರವರು ಇದೀಗ ಅದೇ ಕಾರಣಕ್ಕಾಗಿ ಮುಂಬೈ ನಗರದಲ್ಲಿ ಮನೆ ಖರೀದಿ ಮಾಡಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ಯಶಸ್ಸುಗಳಿಸಿದ ತಕ್ಷಣ ಸಾಕಷ್ಟು ಸಮಯವನ್ನು ಹೈದರಾಬಾದ್ ನಗರದಲ್ಲಿ ಕಳೆಯ ಬೇಕಾಗುತ್ತದೆ ಎಂಬುದನ್ನು ಲೆಕ್ಕಾಚಾರ ನಡೆಸಿ ಹೈದರಾಬಾದ್ ನಲ್ಲಿ ಇತ್ತೀಚೆಗೆ ಐಷಾರಾಮಿ ಬಂಗಲೆ ಯನ್ನು ಖರೀದಿ ಮಾಡಿದ್ದ ರಶ್ಮಿಕ ಮಂದನ್ನ ರವರು ಇದೀಗ ನಲ್ಲಿಯೂ ಕೂಡ ಹೊಸ ಮನೆ ಖರೀದಿ ಮಾಡಿದ್ದರು,
ಅದರಂತೆ ಇದೀಗ ಬಾಲಿವುಡ್ ಗೆ ಪಾದಾರ್ಪಣೆ ಮಾಡಲು ಇದೀಗ ಮುಂಬೈ ನಗರದಲ್ಲಿ ಹೊಸ ಮನೆ ಖರೀದಿ ಮಾಡಿರುವ ರಶ್ಮಿಕಾ ಮಂದಣ್ಣ ಈ ಐಶಾರಾಮಿ ಭಂಗಲೆಗಾಗಿ ಬರೋಬ್ಬರಿ 14 ಕೋಟಿ ಖರ್ಚು ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ, ಇನ್ನು ಇವರು ನಟಿಸುತ್ತಿರುವ ಸಿನಿಮಾ ನೈಜ ಘಟನೆಗಳನ್ನು ಆಧರಿಸಿದ ಭಾರತದ ರಾ ಸಂಸ್ಥೆಯು ಪಾಕಿಸ್ತಾನದ ಒಳಗಡೆ ನಡೆಸಿದ ಕಾರ್ಯಾಚರಣೆಯ ಘಟನೆಗಳನ್ನು ಆಧರಿಸಿ ಮಿಷನ್ ಮಜ್ನು ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ.