ಕಿರುತೆರೆಯಲ್ಲಿ ಎಲ್ಲರಿಗೂ ಶಾಕ್ ಮೂಡಿಸಿದ ಅನು ಸಿರಿಮನೆ ಹೊಸ ಸಂಭಾವನೆ! ಒಂದು ಎಪಿಸೋಡಿಗೆ ಪಡೆಯುವುದು ಎಷ್ಟು ಗೊತ್ತಾ??
ನಮಸ್ಕಾರ ಸ್ನೇಹಿತರೇ ಕನ್ನಡದ ಕಿರುತೆರೆಯಲ್ಲಿ ಇದೀಗ ಜೊತೆ ಜೊತೆಯಲ್ಲಿ ದಾರವಾಹಿ ಎಷ್ಟರ ಮಟ್ಟಿಗೆ ಅಭಿಮಾನಿ ಬಳಗವನ್ನು ಪಡೆದು ಕೊಂಡಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಜೊತೆ ಜೊತೆಯಲಿ ಧಾರಾವಾಹಿಯನ್ನು ಕೇವಲ ಒಂದು ಧಾರವಾಹಿಯಾಗಿ ಮಾತ್ರ ಜನರು ನೋಡುತ್ತಿಲ್ಲ ಬದಲಾಗಿ ಭಾವನಾತ್ಮಕವಾಗಿ ತಮ್ಮ ಸುತ್ತ ಮುತ್ತಲಿನ ಜೀವನದಲ್ಲಿ ಘಟನೆಗಳು ನಡೆಯುತ್ತಿವೆ ಎಂದು ಊಹಿಸಿಕೊಂಡು ನಿಜಕ್ಕೂ ಭಾವನಾತ್ಮಕವಾಗಿ ಧಾರವಾಹಿಯೊಂದಿಗೆ ಬೆರೆತು ಕೊಂಡಿದ್ದಾರೆ
ಹೀಗೆ ತನ್ನದೇ ಆದ ಪ್ರತ್ಯೇಕ ಅಭಿಮಾನಿ ಬಳಗವನ್ನು ಸೃಷ್ಟಿಸಿ ಕೊಳ್ಳುವುದರಲ್ಲಿ ಯಶಸ್ವಿ ಯಾಗಿರುವ ಜೊತೆ ಜೊತೆಯಲ್ಲಿ ದಾರವಾಹಿ ಇಷ್ಟರ ಮಟ್ಟಿಗೆ ಯಶಸ್ವಿಗೊಳ್ಳಲು ಒಂದು ಕಡೆ ದಾರವಾಹಿ ಕಥೆಯಾದರೆ ಮತ್ತೊಂದು ಕಡೆಯಿಂದ ಅದರಲ್ಲಿ ನಟನೆ ಮಾಡುತ್ತಿರುವ ಕಲಾವಿದರು ಶ್ರಮ ಕೂಡ ಎದ್ದು ಕಾಣುತ್ತಿದೆ. ಅದರಲ್ಲಿಯೂ ವಿಷ್ಣುವರ್ಧನ್ ರವರ ಅಳಿಯ ಅನಿರುದ್ ರವರು ಹಾಗೂ ಮಧ್ಯಮ ವರ್ಗದ ಕುಟುಂಬದ ಹುಡುಗಿಯಾಗಿ ಅದ್ಭುತವಾಗಿ ನಟನೆ ಮಾಡಿರುವ ಅನು ಸಿರಿಮನೆ ಪಾತ್ರದಾರಿ ಮೇಘ ಶೆಟ್ಟಿರವರಿಗೆ ಈ ಕೀರ್ತಿ ಸಲ್ಲುತ್ತದೆ ಎಂದರೆ ತಪ್ಪಾಗಲಾರದು.
ಹೀಗೆ ಇವರಿಬ್ಬರ ಜೋಡಿಯಿಂದ ಜೊತೆ ಜೊತೆಯಲ್ಲಿ ದಾರವಾಹಿ ನಿಜಕ್ಕೂ ಕನ್ನಡದ ಸಾರ್ವಕಾಲಿಕ ಉತ್ತಮ ಧಾರವಾಹಿಗಳಲ್ಲಿ ಸ್ಥಾನ ಪಡೆದು ಕೊಳ್ಳುವುದರಲ್ಲಿ ಯಶಸ್ವಿಯಾಗಿದೆ. ಹೀಗೆ ಇಷ್ಟೆಲ್ಲಾ ಸದ್ದು ಮಾಡುತ್ತಿರುವ ಜೊತೆ ಜೊತೆಯಲಿ ಧಾರವಾಹಿ ಒಂದು ಎಪಿಸೋಡಿಗೆ ಅನು ಸಿರಿಮನೆ ರವರು ಪಡೆಯುವ ಸಂಭಾವನೆ ಎಲ್ಲರ ಹುಬ್ಬೇರಿಸಿದೆ, ಹೌದು ಸ್ನೇಹಿತರೇ ಕಿರುತೆರೆಯ ಮೂಲಗಳ ಪ್ರಕಾರ ಅನು ಸಿರಿಮನೆ ರವರು ಒಂದು ಎಪಿಸೋಡಿಗೆ ಬರೋಬ್ಬರಿ 40 ರಿಂದ 45 ಸಾವಿರ ರೂಪಾಯಿಗಳನ್ನು ಪಡೆದು ಕೊಳ್ಳುತ್ತಾರೆ ಎಂಬುದು ತಿಳಿದು ಬಂದಿದೆ. ಕನ್ನಡ ಕಿರುತೆರೆಯಲ್ಲಿ ಇತಿಹಾಸದಲ್ಲಿ ಹಿರಿಯ ಕೆಲವೊಂದು ನಟಿಯರು ಅತಿಥಿ ಪಾತ್ರಕ್ಕೆ ಮಾತ್ರ ಇದಕ್ಕಿಂತ ಹೆಚ್ಚಿನ ಹಣ ಪಡೆದು ಕೊಂಡಿದ್ದಾರೆ, ಅವರನ್ನು ಬಿಟ್ಟರೆ ಇನ್ಯಾರು ಕೂಡ ಇಷ್ಟು ಸಂಭಾವನೆಯನ್ನು ಪಡೆದಿಲ್ಲ.