Kannada News: ದರ್ಶನ್ ವಿರುದ್ಧ ಅಂದು ತೊಡೆತಟ್ಟಿ ಗಟ್ಟಿಯಾಗಿ ನಿಂತಿದ್ದ ಇಂದು ಚಪ್ಪಲಿ ಪ್ರಸಂಗದ ಕುರಿತು ಹೇಳಿದ್ದೇನು ಗೊತ್ತೇ?? ಇವೆಲ್ಲ ಬೇಕಿತ್ತಾ?
Kannada News: ನಟ ದರ್ಶನ್ (Darshan) ಅವರೊಡನೆ ಇಂದು ಇಡೀ ಕರ್ನಾಟಕ ನಿಂತಿದೆ. ಭಾನುವಾರ ಹೊಸಪೇಟೆಯಲ್ಲಿ (Hospet) ನಡೆದ ಅದೊಂದು ಘಟನೆ ಇಂದ ದರ್ಶನ ಅವರ ವ್ಯಕ್ತಿತ್ವ ಹೇಗೆ ಎಂದು ಮತ್ತೊಮ್ಮೆ ಗೊತ್ತಾಗಿದ್ದು ಮಾತ್ರವಲ್ಲದೆ, ಕಲಾವಿದರಿಗೆ ಎಲ್ಲರು ಗೌರವ ಕೊಡಬೇಕು ಎನ್ನುವ ವಿಚಾರವನ್ನು ಅರ್ಥಮಾಡಿಕೊಳ್ಳಬೇಕು ಎನ್ನುವುದು ತಿಳಿಸಿಕೊಟ್ಟಿದೆ. ಹೊಸಪೇಟೆಯಲ್ಲಿ ಒಬ್ಬ ಕಿಡಿಗೇಡಿ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದಿದ್ದಾ.
ಈ ಘಟನೆ ನಡೆದ ಬಳಿಕ ಸ್ವತಃ ದರ್ಶನ್ ಅವರೇ, ಪರ್ವಾಗಿಲ್ಲ ಬಿಡು ಚಿನ್ನ, ಇಂಥವು ಜೀವನದಲ್ಲಿ ತುಂಬಾ ನೋಡಿದ್ದೀನಿ ಎಂದಿದ್ದರು. ದರ್ಶನ್ ಅವರು ಈ ರೀತಿ ಹೇಳಿದ ಮಾತುಗಳು, ಎಲ್ಲರಿಗೂ ಅವರ ವ್ಯಕ್ತಿತ್ವ ಎಂಥದ್ದು ಎಂದು ತಿಳಿಸಿತ್ತು. ಇನ್ನು ಈ ಘಟನೆ ಬಗ್ಗೆ ದರ್ಶನ್ ಅವರ ಕನ್ನಡ ಚಿತ್ರರಂಗದ ಎಲ್ಲಾ ಕಲಾವಿದರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಶಿವಣ್ಣ (Shivanna) ಅವರು, ಜಗ್ಗೇಶ್ (Jaggesh) ಅವರು, ಕಿಚ್ಚ ಸುದೀಪ್ (Kiccha Sudeep) ಅವರು, ನಟಿ ಪ್ರಣೀತಾ ಸುಭಾಷ್ (Pranitha Subhash) ಸೇರಿದಂತೆ ಸಾಕಷ್ಟು ಕಲಾವಿದರು ದರ್ಶನ್ ಅವರ ಪರವಾಗಿ ನಿಂತಿದ್ದಾರೆ. ಈ ಸಮಯದಲ್ಲಿ ರಾಬರ್ಟ್ ಸಿನಿಮಾ ಪ್ರೊಡ್ಯುಸರ್ ಉಮಾಪತಿ ಶ್ರೀನಿವಾಸ್ ಗೌಡ (Umapathy Srinivas Gowda) ಅವರು ಕೂಡ ದರ್ಶನ್ ಅವರ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಇದನ್ನು ಓದಿ.. Kannada News: ದರ್ಶನ್ ಚಪ್ಪಲಿ ಎಸೆತ ಬಗ್ಗೆ ಶಿವಣ್ಣ ಒತ್ತಾಯದ ಪ್ರತಿಕ್ರಿಯೆಗೆ ದರ್ಶನ್ ಶಾಕಿಂಗ್ ಹೇಳಿಕೆ, ಚಿತ್ರರಂಗ ಮತ್ತೊಂದು ಶಾಕ್ ನಲ್ಲಿ.
“ಒಬ್ಬ ಲೈಟ್ ಬಾಯ್ ನಿಂದ ಇಲ್ಲೀ ತನಕ ಬೆಳೆದು ಬಂದಿರೋ ಹಾದಿ ಅದೆಷ್ಟೋ ಮನಸುಗಳಿಗೆ ಸ್ಪೂರ್ತಿ. ಯಾರಿಗೂ ಗೊತ್ತಾಗದ ರೀತಿ ಮಾಡಿರುವ ಅದೆಷ್ಟೋ ದಾನ ಧರ್ಮಗಳು, ಮೂಕ ಪ್ರಾಣಿಗಳ ಮೇಲಿರುವ ಪ್ರೀತಿ, ರೈತರ ಮೇಲಿನ ಪ್ರೀತಿ, ತನ್ನ ಜೀವನದ ಯಾವುದೇ ಹಂತದಲ್ಲೂ ಕನ್ನಡದ ಬಗ್ಗೆ ಇರುವ ಗೌರವವನ್ನು ಬಿಟ್ಟು ಕೊಡದ ವ್ಯಕ್ತಿ. ನಡೆದ ಘಟನೆ, ಆದ ಅಗೌರವ ಅಪಾರವಾದ ನೋವು ತಂದಿದೆ. ಇದು ಖಂಡನೀಯ. ಕೇಡು ತಾಕದ ಮನುಜನ ಹಿಂದೆ ನಾವೆಂದಿಗೂ ಇರುತ್ತೇವೆ. We are always with you #westandwithdarshan #Umapathysrinivasgowda..” ಎಂದು ಬರೆದು, ಡಿಬಾಸ್ ಜೊತೆಗಿರುವುದಾಗಿ ತಿಳಿಸಿದ್ದಾರೆ ಉಮಾಪತಿ ಶ್ರೀನಿವಾಸ್ ಗೌಡ. ಇದನ್ನು ಓದಿ..Kannada News: ಡಿ ಬಾಸ್ ಗೆ ಚಪ್ಪಲಿ ಎಸೆತ ಪ್ರಕರಣಕ್ಕೆ ಟ್ವಿಸ್ಟ್ , ಇರುವುದು ಕೇವಲ ಒಂದು ವಾರ ಸಮಯ ಅಷ್ಟೇ. ಏನಾಗಿದೆ ಗೊತ್ತೇ?