Kannada News: ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ರವರನ್ನು ಬ್ಯಾನ್ ಮಾಡುವ ವಿಚಾರದ ಕುರಿತು ಮಾತನಾಡಿದ ಶಿವಣ್ಣ ಹೇಳಿದ್ದೇನು ಗೊತ್ತೇ?

31

Get real time updates directly on you device, subscribe now.

Kannada News: ನಟಿ ರಶ್ಮಿಕಾ ಮಂದಣ್ಣ (Rashmik Mandanna) ಚಿತ್ರರಂಗದಲ್ಲಿ ಬಹಳ ದೊಡ್ಡ ಹೆಸರು ಮಾಡಿದ್ದಾರೆ. ಈಗ ಬಾಲಿವುಡ್ (Bollywood), ಟಾಲಿವುಡ್ (Tollywood), ಕಾಲಿವುಡ್ (Kollywood) ಎಲ್ಲಾ ಕಡೆ ಅವರದ್ದೇ ಹವಾ ಎಂದರೆ ತಪ್ಪಲ್ಲ. ಎಲ್ಲ ಭಾಷೆಯ ಸ್ಟಾರ್ ನಟರುಗಳ ಜೊತೆಯಲ್ಲಿ ತೆರೆ ಹಂಚಿಕೊಂಡು, ಅವರೊಡನೆ ಸಿನಿಮಾ ಮಾಡುತ್ತಿದ್ದಾರೆ. ವಿಶೇಷವಾಗಿ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ, ಇವರ ಮೇಲಿದ್ದ ಕ್ರೇಜ್ ಅನ್ನು ದುಪ್ಪಟ್ಟು ಮಾಡಿತು. ಇದರಿಂದ ರಶ್ಮಿಕಾ ಅವರಿಗೆ ಬಾಲಿವುಡ್ ನಲ್ಲಿ ಕೂಡ ಬೇಡಿಕೆ ಹೆಚ್ಚಾಯಿತು. ಆದರೆ ಕರ್ನಾಟದಲ್ಲಿ ಮಾತ್ರ ರಶ್ಮಿಕಾ ಅವರು ಟ್ರೋಲ್ ಆಗಿದ್ದೆ ಹೆಚ್ಚು.

ಅದಕ್ಕೆ ಕಾರಣ ಅವರು ಹಲವು ವೇದಿಕೆಗಳಲ್ಲಿ ಕನ್ನಡ ಮಾತನಾಡುವುದಕ್ಕೆ ಹಿಂಜರಿದದ್ದು, ಕನ್ನಡದ ಮೇಲೆ ಧೋರಣೆ ತೋರಿರುವುದು. ಇತ್ತೀಚಿನ ಸಂದರ್ಶನದಲ್ಲಿ ತಮಗೆ ಮೊದಲ ಅವಕಾಶ ಕೊಟ್ಟ ಸಂಸ್ಥೆಯ ಹೆಸರು ಹೇಳೋದಕ್ಕೂ ಹಿಂಜರಿದಿದ್ದ ರಶ್ಮಿಕಾ ಅವರು ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದರು, ಕರ್ನಾಟಕದಲ್ಲಿ ರಶ್ಮಿಕಾ ಅವರ ಸಿನಿಮಾಗಳನ್ನು ಬ್ಯಾನ್ ಮಾಡಬೇಕು, ರಶ್ಮಿಕಾ ಕನ್ನಡದಿಂದ ಬ್ಯಾನ್ ಆಗಬೇಕು ಎನ್ನುವ ಸುದ್ದಿಗಳು ಕೇಳಿಬಂದಿತ್ತು. ಆದರೆ ಅದರ ಬಗ್ಗೆ ಖುದ್ದು ರಶ್ಮಿಕಾ ಅವರೇ ರಿಯಾಕ್ಟ್ ಮಾಡಿ, ಅಂತಹ ಸುದ್ದಿ ಏನು ನನಗೆ ಬಂದಿಲ್ಲ, ನನಗೆ ಕನ್ನಡ ಸಿನಿಮಾ ಮೇಲೆ ಪ್ರೀತಿ ಇದೆ, ಉಳಿದದ್ದು ಅವರಿಗೆ ಬಿಟ್ಟಿದ್ದು ಎಂದಿದ್ದರು. ಇದನ್ನು ಓದಿ..Kannada News: ಇಡೀ ವಿಶ್ವವೇ ಕಾಂತಾರ ಮೆಚ್ಚಿರುವಾಗ ಆ ಒಬ್ಬ ಬಾಲಿವುಡ್ ನವನಿಗೆ ಶುರುವಾಗಿದೆ ಉರಿ: ಯಾಕೆ ಗೊತ್ತೇ? ಏನು ಹೇಳಿದ್ದಾರೆ ಗೊತ್ತೇ??

ಇದೀಗ ಈ ವಿಷಯದ ಬಗ್ಗೆ ಕರುನಾಡ ಚಕ್ರವರ್ತಿ ಶಿವಣ್ಣ ಅವರಿಗೆ ಪ್ರಶ್ನೆ ಕೇಳಲಾಗಿದೆ. ಶಿವಣ್ಣ (Shivanna) ಅಭಿನಯದ 125ನೇ ಸಿನಿಮಾ ವೇದ (Vedha) ಡಿಸೆಂಬರ್ 23ರಂದು ತೆರೆಕಾಣುತ್ತಿದ್ದು, ಸಿನಿಮಾದ ಪ್ರೊಮೋಷನ್ ನಲ್ಲಿ ಶಿವಣ್ಣ ಬ್ಯುಸಿ ಆಗಿದ್ದಾರೆ. ವೇದ ಸಂದರ್ಶನದಲ್ಲಿ ರಶ್ಮಿಕಾ ಅವರು ಬ್ಯಾನ್ ಆಗುವ ಬಗ್ಗೆ ಶಿವಣ್ಣ ಅವರಿಗೆ ಪ್ರಶ್ನೆ ಕೇಳಲಾಗಿದ್ದು, ಅದಕ್ಕೆ ಶಿವಣ್ಣ ರಿಯಾಕ್ಟ್ ಮಾಡಿದ್ದಾರೆ, “ನಾನು ಅವರ ಸಿನಿಮಾ ಚೆನ್ನಾಗಿ ಹೋಗ್ತಾ ಇದೆಯಾ ಎಂದಷ್ಟೇ ನೋಡುತ್ತೇನೆ. ಕಾಂಟ್ರಾವರ್ಸಿಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ..” ಎಂದಿದ್ದಾರೆ ಶಿವಣ್ಣ. ಈ ಮೂಲಕ ರಶ್ಮಿಕಾ ವಿಚಾರ ತಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನು ಓದಿ.. Kannada News: ನಿಶ್ಚಿತಾರ್ಥ ಮುಗಿದ 2 ದಿನಕ್ಕೆ ಮುಂದಿನ ಸೊಸೆ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಸುಮಲತಾ, ಕೇಳಿ ಎಲ್ಲರೂ ಶಾಕ್.

Get real time updates directly on you device, subscribe now.