Kannada News: ಕಾಂತಾರ ಸಿನಿಮಾ ನೋಡಿದ, ಹೃತಿಕ್ ರೋಷನ್ ಹೇಳಿದ್ದೇನು ಗೊತ್ತೇ?? ಇಷ್ಟು ದಿವಸ ಆದ್ಮೇಲೆ ನೋಡಿ ಹೇಳಿದ್ದೇನು ಗೊತ್ತೇ?

13

Get real time updates directly on you device, subscribe now.

Kannada News: ಕನ್ನಡದ ಹೆಮ್ಮೆ ಆಗಿರುವ ಕಾಂತಾರ (Kantara) ಸಿನಿಮಾ ಓಟಿಟಿಗೆ ಬಂದಮೇಲು ಕೂಡ ಅದರ ಹವಾ ಮಾತ್ರ ಕಡಿಮೆ ಆಗಿಲ್ಲ. ಸಿನಿಮಾ ಬಿಡುಗಡೆ ಆದಾಗಿನಿಂದಲೂ ಎಲ್ಲರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಕಾಂತಾರ ಸಿನಿಮಾ ಕನ್ನಡದಲ್ಲಿ ಬಿಡುಗಡೆ ಆಗಿ ನಂತರ ಸಿನಿಮಾಗೆ ಶುರುವಾದ ಬೇಡಿಕೆ ಇಂದ, ಜನರು ಮತ್ತು ಬೇರೆ ಚಿತ್ರರಂಗದವರು ಒತ್ತಾಯ ಮಾಡಿದ ಕಾರಣದಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆದ ಕಾಂತಾರ ಸಿನಿಮಾ ಇಂದು ದೊಡ್ಡ ಮಟ್ಟದಲ್ಲಿ ಹೆಸರು ಪಡೆದಿದೆ. ದೇಶಾದ್ಯಂತ ಎಲ್ಲಾ ಜನರು ಕರಾವಳಿ ಭಾಗದ ಸಂಸ್ಕೃತಿ ಬಗ್ಗೆ ತಿಳಿದುಕೊಂಡು ದೈವಗಳ ಬಗ್ಗೆ ಭಕ್ತಿ ಪರವಶರಾಗಿದ್ದಾರೆ.

ಕಾಂತಾರ ಸಿನಿಮಾ ನೋಡಿ ಚಿತ್ರಪ್ರೇಮಿಗಳು ಮಾತ್ರವಲ್ಲ, ಎಲ್ಲಾ ಸೆಲೆಬ್ರಿಟಿಗಳು ಕೂಡ ಫಿದಾ ಆಗಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರು, ನಟ ಸೂರ್ಯ (Surya), ಕಾರ್ತಿ (Karthi), ನಟ ಪ್ರಭಾಸ್ (Prabhas) ಸೇರಿರಂತೆ ದಕ್ಷಿಣ ಭಾರತ ಚಿತ್ರರಂಗದ ಕಲಾವಿದರು ಮಾತ್ರವಲ್ಲದೆ, ಬಾಲಿವುಡ್ ನ ನಟ ನಟಿಯರು ಕೂಡ ಕಾಂತಾರ ಸಿನಿಮಾ ಮೆಚ್ಚಿಕೊಂಡಿದ್ದಾರೆ. ಕಂಗನಾ ರನಾವತ್ (Kangana Ranaut) ಅವರು ಕಾಂತಾರ ಸಿನಿಮಾ ನೋಡಿ ಫಿದಾ ಆಗಿದ್ದರು, ಸುನೀಲ್ ಶೆಟ್ಟಿ (Suniel Shetty), ಶಿಲ್ಪಾ ಶೆಟ್ಟಿ (Shilpa Shetty) ಅವರು ಸೇರಿದಂತೆ ಎಲ್ಲರೂ ಕಾಂತಾರ ಸಿನಿಮಾ ನೋಡಿ ಹೊಗಳಿದ್ದಾರೆ. ಇದೀಗ ಬಾಲಿವುಡ್ ನ ಮತ್ತೊಬ್ಬ ಖ್ಯಾತ ನಟ ಹೃತಿಕ್ ರೋಷನ್ (Hritik Roshan) ಅವರು ಕಾಂತಾರ ಸಿನಿಮಾ ನೋಡಿ ಫಿದಾ ರಿಷಬ್ ಶೆಟ್ಟಿ (Rishab Shetty) ಅವರನ್ನು ಹಾಡಿ ಹೊಗಳಿದ್ದಾರೆ. ಇದನ್ನು ಓದಿ..Kannada News: ಆಂಟಿ ಆದಮೇಲೆ ಮದುವೆಯಾದರೂ, ಗಂಡನಿಗಾಗಿ ಮಹಾ ತ್ಯಾಗ ಮಾಡಲು ಮುಂದಾದ ಗಾಯಕಿ ಸುನಿತಾ. ಏನು ಮಾಡಿದ್ದಾರೆ ಗೊತ್ತೆ?

ಕಾಂತಾರ ಸಿನಿಮಾವನ್ನು ಕಾರಣಾಂತರಗಳಿಂದ ನೋಡಲಾಗದ ಹೃತಿಕ್ ರೋಷನ್ ಅವರು, ಓಟಿಟಿಯಲ್ಲಿ ಬಿಡುಗಡೆ ಆದ ಬಳಿಕ ಸಿನಿಮಾ ನೋಡಿದ್ದಾರೆ. ಸಿನಿಮಾ ಮೆಚ್ಚಿ ಟ್ವೀಟ್ ಮಾಡಿರುವ ಹೃತಿಕ್ ಅವರು, “ಕಾಂತಾರ ಸಿನಿಮಾ ನೋಡಿ ನಾನು ತುಂಬಾ ವಿಷಯಗಳನ್ನು ಕಲಿತೆ. ರಿಷಬ್ ಶೆಟ್ಟಿ ಅವರಿಗೆ ಕಥೆಯ ಮೇಲಿದ್ದ ಸ್ಪಷ್ಟತೆ ಈ ಸಿನಿಮಾ ಅದ್ಭುತವಾಗಿ ಮೂಡಿಬರುವ ಹಾಗೆ ಮಾಡಿದೆ. ಕಥೆ ಹೇಳಿರುವ ವಿಧಾನ, ಡೈರೆಕ್ಷನ್ ಮತ್ತು ಆಕ್ಟಿಂಗ್ ಅತ್ಯದ್ಭುತವಾಗಿದೆ. ಕ್ಲೈಮ್ಯಾಕ್ಸ್ ನಲ್ಲಿ ರಿಷಬ್ ಶೆಟ್ಟಿ ಅವರು ಪಾತ್ರದ ಪರಕಾಯ ಪ್ರವೇಶ ಮಾಡಿರುವ ರೀತಿ ನನಗೆ ರೋಮಾಂಚನ ತಂದಿತು. ರಿಷಬ್ ಶೆಟ್ಟಿ ಅವರಿಗೆ ಮತ್ತು ಇಡೀ ಕಾಂತಾರ ಸಿನಿಮಾ ತಂಡಕ್ಕೆ ನನ್ನ ಅಭಿನಂದನೆಗಳು..” ಎಂದು ಹೃತಿಕ್ ರೋಷನ್ ಅವರು ಟ್ವೀಟ್ ಮಾಡಿದ್ದಾರೆ. ಇದನ್ನು ಓದಿ.. Kannada News: ಬಗ್ಗಿ ಕೂಡ ವಿವಿಧ ಬಂಗಿಯಲ್ಲಿ ಫೋಟೋ ಶೂಟ್ ಮಾಡಿಸಿದ ಶ್ರೇಯ. ನೋಡಿ ಹೃದಯ ಕಳೆದುಹೋದರೆ, ನಾವು ಜವಾಬ್ದಾರಿಯಲ್ಲ.

Get real time updates directly on you device, subscribe now.