Relationship Tips: ಮದುವೆಯ ನಂತರ ಪ್ರತಿ ಹುಡುಗಿ, ಆಂಟಿ ಯಾಗಲಿ ಮಾಡಬೇಕಾದ ಕೆಲಸಗಳೇನು ಗೊತ್ತೇ??
Relationship Tips: ಮದುವೆ ಎನ್ನುವುದು ಎಂಥ ಪವಿತ್ರವಾದ ಬಂಧ ಎನ್ನುವುದು ಎಲ್ಲರಿಗು ಗೊತ್ತಿದೆ. ಅದರಲ್ಲೂ ಹುಡುಗಿಯರಿಗೆ ಮದುವೆ ನೀಡುವ ಎಫೆಕ್ಟ್ ಬೇರೆಯೇ ಆಗಿರುತ್ತದೆ. ಮದುವೆಯ ನಂತರ ಹುಡುಗಿ ಹುಟ್ಟಿ ಬೆಳೆದ ಮನೆ ಬಿಟ್ಟು, ಅತ್ತೆ ಮನೆಗೆ ಹೋಗಬೇಕು. ಹಾಗೂ ಮದುವೆ ನಂತರ ಅನೇಕ ಆಚಾರ ವಿಚಾರಗಳನ್ನು ಪಾಲಿಸಬೇಕು. ಮದುವೆಯಾದ ನಂತರ ಹುಡುಗಿಯರು ಕೆಲವೊಂದು ವಿಷಯಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅವುಗಳನ್ನು ರೂಢಿಸಿಕೊಳ್ಳಬೇಕು. ಆ ವಿಚಾರಗಳು ಏನು ಎಂದು ತಿಳಿಸುತ್ತೇವೆ ನೋಡಿ..
ಮದುವೆ ನಂತರ ಹುಡುಗಿಯರು ಅನುಸರಿಸಬೇಕಾದ ಮುನ್ನೆಚ್ಚರಿಕೆಗಳು ಇವು. ಮದುವೆಯ ನಂತರ ಹೊಸ ಮನೆ, ಹೊಸ ಜನ ಇರುತ್ತಾರೆ, ಅವರ ಜೊತೆ ಹೆಚ್ಚು ಸಮಯ ಕಳೆದರೆ ಅವರನ್ನು ಅರ್ಥ ಮಾಡಿಕೊಂಡು ಅವರ ಜೊತೆಗಿನ ಬಾಂಧವ್ಯವನ್ನು ಗಟ್ಟಿಯಾಗಿಸಿಕೊಳ್ಳಬಹುದು. ಹಾಗೆಯೇ ಮದುವೆಯ ನಂತರ ಮಹಿಳೆಯರು ತಮ್ಮ ಕೆಲಸವನ್ನು ಬಿಡಬಾರದು. ಆರ್ಥಿಕವಾಗಿ ಸದೃಢವಾಗಿರಲು, ಮದುವೆ ನಂತರ ನೀವು ನಿಮ್ಮ ಕೆಲಸವನ್ನು ಬಿಡದೆ ಮುಂದುವರೆಸಿ. ಇದು ನಿಮಗೆ ಬೇರೆ ಸಮಯಗಳಲ್ಲಿ ಸಹಾಯ ಮಾಡುತ್ತದೆ. ಮದುವೆಯಾದ ನಂತರ ಹುಡುಗಿಯರು ಸ್ನೇಹಿತರಿಂದ ದೂರವಾಗುತ್ತಾರೆ. ಆದರೆ ಈ ರೀತಿ ಮಾಡಿಕೊಳ್ಳುವುದು ದೊಡ್ಡ ತಪ್ಪು. ಈ ರೀತಿ ಎಂದಿಗೂ ಮಾಡಬೇಡಿ. ಇದನ್ನು ಓದಿ..Kannada News: ಆಂಟಿ ಆದಮೇಲೆ ಮದುವೆಯಾದರೂ, ಗಂಡನಿಗಾಗಿ ಮಹಾ ತ್ಯಾಗ ಮಾಡಲು ಮುಂದಾದ ಗಾಯಕಿ ಸುನಿತಾ. ಏನು ಮಾಡಿದ್ದಾರೆ ಗೊತ್ತೆ?

ನಿಮ್ಮ ಸ್ನೇಹಿತರ ಜೊತೆಗೆ ಸಂಪರ್ಕದಲ್ಲಿರಿ, ನಿಮ್ಮ ಭಾವನೆಗಳನ್ನು ಅವರೊಂದಿಗೆ ಹಂಚಿಕೊಳ್ಳಿ. ಹಾಗೆಯೇ ನಿಮ್ಮ ಮದುವೆಯನ್ನು ರಿಜಿಸ್ಟರ್ ಮಾಡಿಸುವುದು ಬಹಳ ಮುಖ್ಯ, ಅದನ್ನು ಮರೆಯಬೇಡಿ. ಮುಂದಿನ ಎಲ್ಲಾ ಕೆಲಸಗಳಲ್ಲಿ ನಿಮಗೆ ಇದು ಬಹುಮುಖ್ಯವಾಗಿ ಬೇಕಾಗುತ್ತದೆ. ಮದುವೆ ನಂತರ ನಿಮ್ಮ ಹೆತ್ತವರನ್ನು ಮನೆಗೆ ಕರೆಯಲು ಸಾಧ್ಯವಾಗುವುದಿಲ್ಲ. ಕೆಲಸ ಮತ್ತು ಮನೆಯ ವಿಷಯಗಳಲ್ಲಿ ಬ್ಯುಸಿ ಆಗಿರುವಾಗ ಸಮಯ ಸಿಕ್ಕಾಗ ತಂದೆ ತಾಯಿ ಜೊತೆಗೆ ಮಾತನಾಡಿ. ನಿಮ್ಮ ಪತಿಯ ಜೊತೆಗೆ ಹಣಕಾಸಿನ ವಿಷಯಗಳ ಬಗ್ಗೆ ಚರ್ಚೆ ಮಾಡುವುದು ಒಳ್ಳೆಯದು. ಬಜೆಟ್ ಮಾಡಿದರೆ ಮಾತ್ರ ಹಣಕಾಸಿನ ಹೊರೆಯಿಂದ ಪಾರಾಗಬಹುದು. ಮದುವೆ ನಂತರ ಮಹಿಳೆಯರು ಈ ಎಲ್ಲಾ ವಿಷಯಗಳನ್ನು ನೆನಪಲ್ಲಿ ಇಟ್ಟುಕೊಂಡರೆ, ಒಂದಿಷ್ಟು ಕಷ್ಟಗಳಿಂದ ಹೊರಬರಬಹುದು. ಇದನ್ನು ಓದಿ.. Kannada News: ಬಗ್ಗಿ ಕೂಡ ವಿವಿಧ ಬಂಗಿಯಲ್ಲಿ ಫೋಟೋ ಶೂಟ್ ಮಾಡಿಸಿದ ಶ್ರೇಯ. ನೋಡಿ ಹೃದಯ ಕಳೆದುಹೋದರೆ, ನಾವು ಜವಾಬ್ದಾರಿಯಲ್ಲ.