Kannada News: ತನ್ನನು ಟ್ರೊಲ್ ಮಾಡುತ್ತಿರುವವರಿಗೆ ಸರಿಯಾಗಿಯೇ ಉತ್ತರ ಕೊಟ್ಟ ಕನ್ನಡದ ಕುವರಿ ರಶ್ಮಿಕಾ. ಹೇಳಿದ್ದೇನು ಗೊತ್ತೇ?

25

Get real time updates directly on you device, subscribe now.

Kannada News: ನ್ಯಾಶನಲ್ ಕ್ರಶ್ ಎಂದು ಹೆಸರು ಮಾಡಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಾರೆ. ಅದಕ್ಕೆ ಕಾರಣ, ಕನ್ನಡದ ಸ್ಟಾರ್ ನಿರ್ದೇಶಕ ಹಾಗೂ ನಾಯಕ ರಿಷಬ್ ಶೆಟ್ಟಿ (Rishab Shetty) ಅವರು ನಟಿಸಿ ನಿರ್ದೇಶಿಸಿದ ಕಾಂತಾರ ಚಿತ್ರವನ್ನು ರಶ್ಮಿಕಾ ನೋಡದೇ ಇರುವುದು ಎಂದು ಕೆಲವರು ಹೇಳಿದ್ದರು. ರಶ್ಮಿಕಾ ಮಂದಣ್ಣ ಅವರು ರಿಷಬ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ (Kirik Party) ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಈ ಸಿನಿಮಾ ನಂತರ ರಶ್ಮಿಕಾ ಅವರು ಅವಕಾಶಗಳು ಮತ್ತು ಹೆಸರು ಎರಡು ಕೂಡ ಬಂದಿತು. ಆದರೆ ಆ ಸಮಯದಲ್ಲಿ ನಡೆದ ಕೆಲ ಜಗಳಗಳಿಂದ ರಶ್ಮಿಕಾ ಹಾಗೂ ರಿಷಬ್ ದೂರ ಉಳಿದಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಕಾಂತಾರ (Kantara) ಸಿನಿಮಾವನ್ನ ರಶ್ಮಿಕಾ ಅವರು ನೋಡದ ಕಾರಣ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಯಿತು.

ಎಲ್ಲಕ್ಕಿಂತ ಹೆಚ್ಚಾಗಿ ರಶ್ಮಿಕಾ ಮಂದಣ್ಣ ಮಾತನಾಡುವ ರೀತಿ ಜನರಿಗೆ ಇಷ್ಟವಾಜಿಲ್ಲಾ. ಹಾಗಾಗಿ ಕನ್ನಡದವರು ರಶ್ಮಿಕಾ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕೆಂದು ಒತ್ತಾಯ ಶುರು ಮಸಿದರು. ಇದೆಲ್ಲವೂ ಒಂದು ಕಡೆ ನಡೆಯುತ್ತಿರುವಾಗ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಒಂದು ಶೋ ರೂಮ್ ನಲ್ಲಿ ಕಾಣಿಸಿಕೊಂಡಾಗ, ಮಾಧ್ಯಮದವರ ಜೊತೆಗೆ ಮಾತನಾಡಿದರು, ಆಗ, ಈ ವಿಷಯದ ಬಗ್ಗೆ ಕೇಳಿದ್ದಕ್ಕೆ, ರಶ್ಮಿಮ ನೇರವಾಗಿ ಉತ್ತರ ಕೊಟ್ಟಿದ್ದಾರೆ.. “ಜನ ತಮಗೆ ಇಷ್ಟ ಬಂದಿದ್ದನ್ನು ಬರೆಯುತ್ತಾರೆ.. ಅದು ನಿಜ ಎಂದು ನಾನು ನಂಬುವುದಿಲ್ಲ, ಕನ್ನಡ ಇಂಡಸ್ಟ್ರಿ ನನ್ನನ್ನು ಬ್ಯಾನ್ ಮಾಡುತ್ತದೆ ಎನ್ನುವ ಸುದ್ದಿ ಕೂಡ ಬಂದಿದೆ.. ಆದರೆ ಇಲ್ಲಿಯವರೆಗೆ ಯಾರು ನನಗೆ ಸೂಚನೆ ನೀಡಿಲ್ಲ. ಅವರು ಮಾಡುತ್ತಾರೆ ಎಂದು ನಾನು ಯೋಚನೆ ಮಾಡುವುದಿಲ್ಲ ಎಂದಿದ್ದಾರೆ ರಶ್ಮಿಕಾ ಮಂದಣ್ಣ. ರಿಷಬ್ ಶೆಟ್ಟಿ ಅವರ ಜೊತೆಗಿನ ಜಗಳದ ಬಗ್ಗೆ ಸುಮ್ಮನೆ ಬರೆಯುತ್ತಿರುವುದು ತಮಗೆ ಇಷ್ಟವಿಲ್ಲ ಎಂದಿದ್ದಾರೆ. ಇದನ್ನು ಓದಿ..Kannada News: ಕ್ರಾಂತಿ ಸಿನಿಮಾ ಪ್ರಚಾರ ಮಾಡುವಾಗ ಚಿತ್ರರಂಗದ ಮತ್ತೊಂದು ಕರಾಳ ಮುಖ ಬಿಚ್ಚಿಟ್ಟ ದರ್ಶನ್, ಹೇಳಿದ್ದೇನು ಗೊತ್ತೇ??

ಕಾಂತಾರ ಸಿನಿಮಾ ಚಿತ್ರ ಬಿಡುಗಡೆಯಾದ ಎರಡ್ಮೂರು ದಿನಗಳ ನಂತರ ನನಗೆ ಸಿನಿಮಾ ನೋಡಿದ್ದೀರಾ ಎಂದು ಕೇಳಿದರು. ಆಗ ನಾನು ನೋಡಿರಲಿಲ್ಲ. ಪ್ರಾಮಾಣಿಕವಾಗಿ ಇನ್ನು ನೋಡಿಲ್ಲ ಸಮಯ ಸಿಕ್ಕಾಗ ನೋಡ್ತೇನೆ ಎಂದು ಹೇಳಿದೆ ನಂತರ ನಾನು ಸಿನಿಮಾ ನೋಡಿ, ಟೀಮ್ ಗೆ ಮೆಸೇಜ್ ಮಾಡಿದೆ. ಅವರಿಂದಲು ಒಳ್ಳೆಯ ರಿಪ್ಲೈ ಬಂತು. ಯಾರೋ ಏನೋ ಕಲ್ಪನೆ ಮಾಡಿಕೊಂಡು ಬರೆದರೆ, ಅದೆಲ್ಲ ನಿಜವಾಗುವುದಿಲ್ಲ ಎಂದಿದ್ದಾರೆ ರಶ್ಮಿಕಾ ಮಂದಣ್ಣ. ಒಳಗೆ ಏನಾಗುತ್ತದೆ ಎಂದು ಯಾರಿಗು ಗೊತ್ತಾಗುವುದಿಲ್ಲ.. ಎಂದು ಖಾರವಾಗಿ ಹೇಳಿದ್ದಾರೆ.. ಈ ಮಾತು ಮತ್ತಷ್ಟು ವಿವಾದ ಸೃಷ್ಟಿ ಆಗುವುದಕ್ಕೆ ಕಾರಣ ಆಗಿದೆ.. ಏಕೆಂದರೆ ಈ ಸಮಯದಲ್ಲಿ ಕೂಡ ರಶ್ಮಿಕಾ ಮಂದಣ್ಣ ಅವರು ರಿಷಬ್ ಶೆಟ್ಟಿ ಅವರ ಹೆಸರನ್ನು ಹೇಳಿಲ್ಲ.. ಇದನ್ನು ಓದಿ.. Rashmika Mandanna: ಮೊದಲ ಬಾರಿಗೆ ಕನ್ನಡ ಚಿತ್ರರಂಗದ ಬ್ಯಾನ್ ಕುರಿತು ಮಾತನಾಡಿದ ರಶ್ಮಿಕಾ ಹೇಳಿದ್ದೇನು ಗೊತ್ತೇ??

Get real time updates directly on you device, subscribe now.