ತೆಲುಗಿನಲ್ಲಿ ಮತ್ತೊಂದು ಕರ್ಮಾ ಕಾಂಡ?? ಯುವ ನಟಿ ಬಗ್ಗೆ ಹಿರಿಯ ನಟ ಪೃತ್ವಿ ರಾಜ್ ಹೇಳಿದ್ದೇನು ಗೊತ್ತೇ??
RX100 ಸಿನಿಮಾದಲ್ಲಿ ನಟಿಸಿದ ನಟಿಯ ಬಗ್ಗೆ ನಟ ಪೃಥ್ವಿ ರಾಜ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ನಟ ಪೃಥ್ವಿ ರಾಜ್ ಅವರನ್ನು ಗೊತ್ತಿಲ್ಲ ಎಂದು ಹೇಳುವವರು ಇರುವುದು ಬಹಳ ಕಡಿಮೆ. 30 ವರ್ಷಗಳ ಇಂಡಸ್ಟ್ರಿ ಇಕ್ಕಡ ಎನ್ನುವ ತೆಲುಗು ಡೈಲಾಗ್ ಮೂಲಕ ಬಹಳ ಫೇಮಸ್ ಆದರು ಈ ನಟ. ಕಾಮಿಡಿಯನ್ ಆಗಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಆದರೆ ಈ ಹಿಂದೆ ಒಂದಷ್ಟು ವಿವಾದಗಳನ್ನೂ ಎದುರಿಸಿದ್ದರು.. ಪೃಥ್ವಿ ರಾಜ್ ಅವರು ಸ್ವಲ್ಪ ಗ್ಯಾಪ್ ತೆಗೆದುಕೊಂಡರು ಕೂಡ ಕೂಡ ಕೆಲ ಸಮಯದಿಂದ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಈ ಸಮಯದಲ್ಲಿ ಅವರು ಮಾಡಿದ ಫನ್ನಿ ಕಮೆಂಟ್ಸ್ ಈಗ ವೈರಲ್ ಆಗುತ್ತಿದೆ. ನಟಿ ಪಾಯಲ್ ನನ್ನ ಲವರ್ ಎಂದು ಇಂಟ್ರೆಸ್ಟಿಂಗ್ ಹೇಳಿಕೆ ನೀಡಿದ್ದರು. ರಾಮ್ ಜಕ್ಕಲ ಮತ್ತು ಅಖಿಲಾ ಕರಿಷ್ಮ ಹೀರೋ ಹೀರೋಯಿನ್ ಆಗಿ ನಟಿಸಿರುವ ಇತ್ತೀಚಿನ ಸಿನಿಮಾ AP04 ರಾಮಪುರಂ, ಈ ಸಿನಿಮಾವನ್ನು ಎಸ್. ವಿ ಶಿವಾ ರೆಡ್ಡಿ ನಿರ್ಮಿಸಿದ್ದಾರೆ, ಹೇಮಾ ರೆಡ್ಡಿ ನಿರ್ದೇಶಿನ ಮಾಡಿದ್ದಾರೆ. ಈ ಸಿನಿಮಾದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಹಾಸ್ಯನಟ ಪೃಥ್ವಿ ರಾಜ್ ಅವರು ಕೂಡ ಈ ಟ್ರೈಲರ್ ತುಂಬಾ ಚೆನ್ನಾಗಿದೆ ಎಂದಿದ್ದಾರೆ.
ಟ್ರೈಲರ್ ರಿಲೀಸ್ ನಲ್ಲಿ, ಪೃಥ್ವಿ ರಾಜ್ ಅವರು ಭಾಷಣ ಮಾಡಿ ಅಲ್ಲಿದ್ದ ಜನರನ್ನು ನಗೆಗಡಲಲ್ಲಿ ತೇಲಿಸಿದರು. ಈ ಸಿನಿಮಾ ಯೂನಿಟ್ ತುಂಬಾ ಕಷ್ಟಪಟ್ಟು ದುಡಿದಿದ್ದು ಹಣ ಗಳಿಸಲು ಬಂದವರಲ್ಲ, ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕೆಂಬ ಹಂಬಲದಿಂದ ಬಂದಿದ್ದೇವೆ.. ಚಿತ್ರ ಖಂಡಿತ ಹಿಟ್ ಆಗುತ್ತೆ ಎಂದು ಹೇಳಿದ ಪೃಥ್ವಿರಾಜ್ ಅವರು, ಜೆಸ್ಸಿ ಅವರನ್ನು ಹೊಗಳಿ ಕಮೆಂಟ್ ಮಾಡಿದ್ದಾರೆ. ನಾನು, ಜೆಸ್ಸಿ ಮಾಯಾಪೇಟಿಕಾ ಸಿನಿಮಾದಲ್ಲಿ ನಟಿಸಿದ್ದೆವು.. ನಾನು ಪಾಯಲ್ ರಜಪೂತ್ ಲವ್ವರ್ ಆಗಿದ್ದೆ.. ಹುಡುಗಿ ಕಾಣಿಸಿದರೆ, ಸೋ ಸ್ವೀಟ್ ಎಂದು ಹೇಳುತ್ತಿದ್ದರು, ಸ್ವಲ್ಪ ಸಮಯದ ನಂತರ ನಂಬರ್ ಪ್ಲೀಸ್ ಎನ್ನುತ್ತಿದ್ದರು ಎಂದು, ಆಗಿನ ಸನ್ನಿವೇಶದ ನೆನಪು ಮಾಡಿಕೊಂಡಿದ್ದಾರೆ.