Biggboss Kannada: ಒಂದಲ್ಲ ಎರಡಲ್ಲ ಬರೋಬ್ಬರಿ 12 ವರ್ಷ ಇಡೀ ಕರ್ನಾಟಕವನ್ನು ಚಕ್ರವರ್ತಿಯಾಗಿ ಆಳಿದ್ದರಂತೆ ಆರ್ಯವರ್ಧನ್. ಹೇಗೆ ಅಂತೇ ಗೊತ್ತೇ?
Biggboss Kannada: ಬಿಗ್ ಬಾಸ್ (Biggboss) ಮನೆಯ ಸದಸ್ಯರು ಈಗ 8ನೇ ವಾರದ ಪಯಣ ಮುಗಿಸಲಿದ್ದಾರೆ. ಈ ಸಮಯದಲ್ಲಿ ಓಟಿಟಿ (Biggboss OTT) ಇಂದ ಟಿವಿ ಸೀಸನ್ ಗೆ ಬಂದ ಸ್ಪರ್ಧಿಗಳಲ್ಲಿ ಆರ್ಯವರ್ಧನ್ (Aryavardhan), ರಾಕೇಶ್ (Rakesh Adiga) ಮತ್ತು ರೂಪೇಶ್ ಶೆಟ್ಟಿ (Roopesh Shetty) ಬಿಗ್ ಬಾಸ್ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಇವರ ಪೈಕಿ ಆರ್ಯವರ್ಧನ್ ಅವರು ಒಂದು ರೀತಿ ಯಾರಿಂದಲೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದ ವ್ಯಕ್ತಿಯಾಗಿ ಉಳಿದಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಏಕೆಂದರೆ ಇವರು ಒಂದೊಂದು ಸಾರಿ ಒಂದೊಂದು ಥರ ಕಾಣಿಸುತ್ತಾರೆ.
ಕೆಲವೊಮ್ಮೆ ತಮ್ಮನ್ನು ತಾವು ಮುಗ್ಧರ ಹಾಗೆ ಕಾಣುವ ಹಾಗೆ ತೋರಿಸಿಕೊಳ್ಳುತ್ತಾರೆ, ಇನ್ನು ಕೆಲವು ಸಾರಿ ಕೋಪಿಷ್ಟರ ಹಾಗೆ ಕಾಣುತ್ತಾ, ಮನೆಯ ಸದಸ್ಯರ ಜೊತೆಗೆ ಜಗಳ ಆಡುತ್ತಾರೆ. ಇನ್ನು ಕೆಲವು ಸಾರಿ, ಏನು ಗೊತ್ತಿಲ್ಲದ ಹಾಗೆ ಮಾತನಾಡುತ್ತಾರೆ, ಕೆಲವೊಮ್ಮೆ ಬುದ್ಧಿವಂತರ ಹಾಗೆ ಕಾಣಿಸಿಕೊಳ್ಳುತ್ತಾರೆ. ಹಾಗಾಗಿ ಮನೆಯಲ್ಲಿ ಅವರ ಜೊತೆಗಿರುವ ಸದಸ್ಯರು ಕೂಡ ಅವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಿರುವಾದ 7ನೇ ವಾರ ಆರ್ಯವರ್ಧನ್ ಎಲಿಮಿನೇಟ್ ಸಹ ಆಗಿದ್ದರು, ಆದರೆ ಬಾಗಿಲಿನ ವರೆಗು ಹೋಗಿ ವಾಪಸ್ ಬಂದಿದ್ದರು. ಇದನ್ನು ಓದಿ.. Cricket News: ಕಿಂಗ್ ಕೊಹ್ಲಿ vs ಸೂರ್ಯ ಕುಮಾರ್ ಯಾದವ್: ಇವರಿಬ್ಬರಲ್ಲಿ ಬೆಸ್ಟ್ ಟಿ 20 ಆಟಗಾರ ಯಾರು?? ಮಾಜಿ ಕ್ರಿಕೆಟಿಗರು ನೀಡಿದ ಉತ್ತರವೇನು ಗೊತ್ತೇ??
ಏಕೆಂದರೆ ಕಳೆದ ವಾರ ನೋ ಎಲಿಮಿನೇಷನ್ ವೀಕ್ ಆಗಿತ್ತು. ಈ ಕಾರಣದಿಂದ ಆರ್ಯವರ್ಧನ್ ಅವರು ಎಲಿಮಿನೇಟ್ ಆಗಿರಲಿಲ್ಲ. ಈ ನಡುವೆ ಆರ್ಯವರ್ಧನ್ ಅವರು ಈ ವಾರದ ಟಾಸ್ಕ್ ಸಮಯದಲ್ಲಿ ತಮ್ಮ ಬಗ್ಗೆಯೇ ಅವರು ಒಂದು ಮಾತು ಹೇಳಿದ್ದು, ಆ ಮಾತು ಈಗ ವೈರಲ್ ಆಗಿದೆ, ಮನೆಯಲ್ಲಿ ಕ್ಯಾಪ್ಟನ್ ವಿಚಾರಕ್ಕೆ ಜಗಳ ಆದಾಗ, ಆರ್ಯವರ್ಧನ್ ಅವರು ರೂಪೇಶ್ ಶೆಟ್ಟಿ ಅವರ ಜೊತೆಗೆ, “12 ವರ್ಷ ನಾನು ಕರ್ನಾಟಕವನ್ನು ಚಕ್ರವರ್ತಿಯಾಗಿ ಆಳಿದ್ದೀನಿ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗು ಎಲ್ಲರಿಗು ನಾನು ಯಾರು ಅಂತ ಗೊತ್ತು. ಇವರ ಹತ್ರ ಸುಮ್ನೆ ಯಾಕೆ ದ್ವೇಷ ಕಟ್ಟಿಕೊಳ್ಳಬೇಕು?” ಎಂದು ಹೇಳಿದ್ದು, ಈ ಮಾತು ಈಗ ಭಾರಿ ಟ್ರೋಲ್ ಆಗುತ್ತಿದೆ. ಇದನ್ನು ಓದಿ.. Kannada News: ಕರುನಾಡ ದೊರೆ ಡಿ ಬಾಸ್ ದರ್ಶನ್ ರವರಿಗೆ ಶಾಕ್ ಕೊಟ್ಟ ಕಿಲಾಡಿ ನಿರ್ಮಾಪಕ ಉಮಾಪತಿ: ಕನ್ನಡವೇ ಶೇಕ್. ಏನು ಮಾಡಿದ್ದಾರೆ ಗೊತ್ತೇ??