Kannada News: ಕಿರುತೆರೆಗೆ ಮತ್ತೊಂದು ಶಾಕ್: ರಸ್ತೆ ಅಪಘಾತದಲ್ಲಿ ಉಸಿರು ನಿಲ್ಲಿಸಿದ ಖ್ಯಾತ ನಟಿ. ಯಾವೆಲ್ಲ ಧಾರಾವಾಹಿಯಲ್ಲಿ ನಟಿಸಿದ್ದಾರೆ ಗೊತ್ತೇ??

123

Get real time updates directly on you device, subscribe now.

Kannada News: ಕೆಲವೊಮ್ಮೆ ಎಷ್ಟೇ ಜಾಗರೂಕವಾಗಿದ್ದರು ಇನ್ನೊಬ್ಬರು ಮಾಡಿದ ತಪ್ಪಿನಿಂದ ಮತ್ತೊಬ್ಬ ವ್ಯಕ್ತಿಯ ಜೀವನ ಹಾಳಾಗಿ ಹೋಗುತ್ತದೆ. ಪ್ರಾಣ ಕಳೆದುಕೊಳ್ಳುವ ಹಂತವನ್ನು ತಲುಪಬಹುದು. ಅದೇ ರೀತಿ ಈಗ ನಟಿಯೊಬ್ಬರಿಗೆ ಆಗಿದ್ದು, ರಸ್ತೆ ಅಪಘಾತದಲ್ಲಿ ಆಕೆ ಸಾವನ್ನಪ್ಪಿದ್ದಾರೆ ಮರಾಠಿ ಕಿರುತೆರೆಯಲ್ಲಿ ಬಹಳ ಖ್ಯಾತಿ ಹೊಂದಿದ್ದ ನಟಿ ಕಲ್ಯಾಣ್ ಕುರಲೇ ಜಾಧವ್ (Kalyani Kurale Jadhav) ಅವರು ನಿಧನರಾಗಿದ್ದಾರೆ. ದ್ವಿಚಕ್ರ ವಾಹನದಲ್ಲಿ ಪ್ರಯಾಣ ಮಾಡುವಾಗ ಈ ಅಪಘಾತ ಸಂಭವಿಸಿದೆ.

ಸುಂದರವಾದ ಅಭಿನಯದ ಮೂಲಕ ಈ ನಟಿ ಮರಾಠಿ ಕಿರುತೆರೆಯಲ್ಲಿ ಬಹಳ ಫೇಮಸ್ ಆಗಿದ್ದರು. ಶನಿವಾರ ಸಂಜೆ ಮನೆಗೆ ಹೋಗುವಾಗ ಸಾಂಗ್ಲಿ ಕೊಲ್ಲಾಪುರದ ಹೆದ್ದಾರಿ ಮಧ್ಯದಲ್ಲಿ ಅಪಘಾತ ಸಂಭವಿಸಿದೆ. ಡಿವೈಡರ್ ಹತ್ತಿರ ಈ ಅಪಘಾತ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹಲವು ಧಾರವಾಹಿಗಳಲ್ಲಿ ನಟಿಯಾಗಿ ಮತ್ತು ಪೋಷಕ ಪಾತ್ರಗಳ ಮೂಲಕ ಕಲ್ಯಾಣಿ ಅವರು ಗುರುತಿಸಿಕೊಂಡಿದ್ದರು. ಇದನ್ನು ಓದಿ.. Kannada Astrology: ನಿಮ್ಮ ಮನೆಯಲ್ಲಿ ಕಷ್ಟವೇ?? ಅದೃಷ್ಟ ಕೈ ಹಿಡಿಯಬೇಕೆ? ಹಾಗಿದ್ದರೆ ತುಳಸಿ ಗಿಡದ ಜೊತೆ ಈ ಚಿಕ್ಕ ಕೆಲಸ ಮಾಡಿ ಸಾಕು. ಅದೃಷ್ಟ ಹುಡುಕಿಕೊಂಡು ಬರುತ್ತದೆ.

ಕಲ್ಯಾಣಿ ಅವರಿದ್ದ ದ್ವಿಚಕ್ರ ವಾಹನವು ಕಾಂಕ್ರೀಟ್ ಮಿಕ್ಸರ್ ಲಾರಿಗೆ ಡಿಕ್ಕಿ ಹೊಡೆದಿದೆ. ಇವರು ಸಂಚಿರಿಸುತ್ತಿದ್ದಾಗ ಡಿವೈಡರ್ ಬಳಿ ದುರ್ಘಟನೆ ನಡೆದಿದ್ದು, ಕಲ್ಯಾಣಿ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಿದ್ದರು ಕೂಡ, ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಲಾರಿ ಡ್ರೈವರ್ ವಿರುದ್ಧ ಪೊಲೀಸ್ ಅಧಿಕಾರಿಗಳು ಕೇಸ್ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಕಲ್ಯಾಣಿ ಅವರ ದಿಢೀರ್ ನಿಧನಕ್ಕೆ ಇಡೀ ಮರಾಠಿ ಕಿರುತೆರೆ ಕಂಬನಿ ಮಿಡಿದಿದೆ. ಇದನ್ನು ಓದಿ.. Business: ನೀವೇ ಸ್ವಂತ ಉದ್ಯಮ ಮಾಡಬೇಕು ಎಂದು ಕೊಂಡಿದ್ದರೇ, ಸುಲಭವಾಗಿ ನಿಮಗೆ ಸಾಲ ನೀಡುವ ಯೋಜನೆಗಳು ಯಾವುವು ಗೊತ್ತೇ??

Get real time updates directly on you device, subscribe now.