ದರ್ಶನ್ ರವರ ಕ್ರಾಂತಿ ಸಿನೆಮಾಕ್ಕೆ ಎಲ್ಲರೂ ಕಾಯುತ್ತಿರುವಾಗ ಅನಧಿಕೃತವಾಗಿ ಷಾಕಿಂಗ್ ಹೇಳಿಕೆ ಕೊಟ್ಟ ಸಾಧು ಕೋಕಿಲ. ಹೇಳಿದ್ದೇನು ಗೊತ್ತೇ??

25

Get real time updates directly on you device, subscribe now.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 55ನೇ ಸಿನಿಮಾ ಕ್ರಾಂತಿ, ಈ ಸಿನಿಮಾವನ್ನು ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಅವರು ನಿರ್ದೇಶನ ಮಾಡುತ್ತಿದ್ದು, ಯಜಮಾನ ಸಿನಿಮಾಗೆ ಬಂಡವಾಳ ಹೂಡಿದ್ದ ಶೈಲಜಾ ನಾಗ್ ಅವರೆ ಕ್ರಾಂತಿ ಸಿನಿಮಾ ನಿರ್ಮಾಣ ಮಾಡಿದ್ದಾರೆ ಎನ್ನುವುದು ಗೊತ್ತಿರುವ ವಿಷಯ. ಈ ವರ್ಷ ಕನ್ನಡ ರಾಜ್ಯೋತ್ಸವಕ್ಕೆ ಕ್ರಾಂತಿ ಸಿನಿಮಾ ತೆರೆಕಾಣುವ ನಿರೀಕ್ಷೆ ಇತ್ತು, ಆದರೆ ಕ್ರಾಂತಿ ಸಿನಿಮಾ ಕೆಲಸಗಳು ತಡ ಆಗುತ್ತಿರುವ ಕಾರಣ, ಸಿನಿಮಾ ಬಗ್ಗೆ ಯಾವುದೇ ಹೊಸ ಅಪ್ಡೇಟ್ ಸಿಕಿಲ್ಲ.

ಸಿನಿಮಾದ ಆಡಿಯೋ ಲಾಂಚ್ ಆಗಲಿ, ಅಥವಾ ಟ್ರೈಲರ್ ಬಿಡುಗಡೆ ಆಗಲಿ ನಡೆದಿಲ್ಲ. ಕ್ರಾಂತಿ ಸಿನಿಮಾ ಬಗ್ಗೆ ಯಾವುದೇ ಹೊಸ ಅಪ್ಡೇಟ್ ಸಿಕ್ಕಿಲ್ಲ ಎಂದು ಅಭಿಮಾನಿಗಳು ಬೇಸರ ಮತ್ತು ನಿರಾಶೆ ಹೊರಹಾಕುತ್ತಿದ್ದರು, ಆದರೆ ನಿನ್ನೆ ಸಾಧು ಕೋಕಿಲ ಅವರ ಕಡೆಯಿಂದ ಒಂದು ಹೊಸ ಅಪ್ಡೇಟ್ ಸಿಕ್ಕಿದೆ, ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕ್ರಾಂತಿ ಸಿನಿಮಾ ಡಬ್ಬಿಂಗ್ ಗಾಗಿ ತಮ್ಮ ಸ್ಟುಡಿಯೋಗೆ ಮೊದಲ ಬಾರಿಗೆ ಬಂದ ಸಮಯದ ಫೋಟೋವನ್ನು ಸಾಧುಕೋಕಿಲ ಅವರು ಶೇರ್ ಮಾಡಿಕೊಂಡಿದ್ದು, “ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ #Kranti ಚಿತ್ರದ ಡಬ್ಬಿಂಗ್‌ಗಾಗಿ ಮೊಟ್ಟಮೊದಲ ಬಾರಿಗೆ ನಮ್ಮ ಸ್ಟುಡಿಯೋಗೆ ಬಂದ ಕನಸುಗಾರ, ಕ್ರೇಜಿ಼ ಸ್ಟಾರ್ ರವಿಚಂದ್ರನ್ ಸರ್ ಅವರ ಜೊತೆ ಕಳೆದ ಕ್ಷಣಗಳು ಮರೆಯಲಾಗದ್ದು.ನಿರ್ದೇಶಕ ಹರಿಕೃಷ್ಣ ಅವರೂ ಜೊತೆಯಲ್ಲಿದ್ದರು.” ಎಂದು ಟ್ವೀಟ್ ಮಾಡಿದ್ದಾರೆ.

ಸಾಧು ಕೋಕಿಲ ಅವರ ಈ ಟ್ವೀಟ್ ಗೆ ಅಭಿಮಾನಿಗಳು ಸಮಾಧಾನ ಪಟ್ಟುಕೊಂಡಿದ್ದು ಡಬ್ಬಿಂಗ್ ಕೆಲಸ ಶುರುವಾಗಿದೆ ಎಂದರೆ, ಸಿನಿಮಾ ಚಿತ್ರೀಕರಣ ಮುಗಿದಿದೆ ಎಂದು ಅರ್ಥ. ಆದಷ್ಟು ಸಿನಿಮಾ ಬೇಗ ಸಿನಿಮಾ ಆಡಿಯೋ ಬಿಡುಗಡೆ ಮತ್ತು ಟ್ರೈಲರ್ ಬಗ್ಗೆ ಹೊಸ ಅಪ್ಡೇಟ್ ಕೊಡಲಿ ಎನ್ನುತ್ತಿದ್ದಾರೆ. ಸಾಧು ಕೋಕಿಲ ಅವರ ಬಳಿ ಸಿನಿಮಾ ರಿಲೀಸ್ ಬಗ್ಗೆ ಅಪ್ಡೇಟ್ ಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ ಅಭಿಮಾನಿಗಳು. ಈ ವರ್ಷ ಮುಗಿಯಲು ಉಳಿದಿರುವುದು ಇನ್ನೆರಡು ತಿಂಗಳು ಮಾತ್ರ. ಹಾಗಾಗಿ, ಕ್ರಾಂತಿ ಸಿನಿಮಾ ಈ ವರ್ಷ ತೆರೆಕಾಣುವುದು ಸಂಶಯ ಆಗಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಕ್ರಾಂತಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ತೆರೆಕಾಣಲಿದೆ.

Get real time updates directly on you device, subscribe now.