ರಿಲೀಸ್ ಗು ಮುನ್ನವೇ ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ ಮಾಡಿದ ಅಪ್ಪು ಗಂಡಾದ ಗುಡಿ. ಅಪ್ಪು ಕನಸಿಗೆ ಬಂತು ಮತ್ತೊಂದು ರೆಕ್ಕೆ. ಏನು ಗೊತ್ತೇ??

53

Get real time updates directly on you device, subscribe now.

ಅಪ್ಪು ಅವರ ಬಹುದೊಡ್ಡ ಕನಸು ಗಂಧದಗುಡಿ ಪ್ರಾಜೆಕ್ಟ್ ನಾಳೆ ಬಿಡುಗಡೆಯಾಗಲಿದೆ. ಈ ಸಾಕ್ಷ್ಯಚಿತ್ರದ ಬಗ್ಗೆ ಅವರಿಗೆ ಬಹಳ ಹೆಮ್ಮೆ ಇತ್ತು. ಜೊತೆಗೆ ಗಂಧದಗುಡಿ ಬಗ್ಗೆ ಕನಸು ಕಟ್ಟಿಕೊಂಡಿದ್ದರು, ಗಂಧದಗುಡಿಯನ್ನು ಎಲ್ಲರೂ ನೋಡಬೇಕು ಎಂದು ಆಸೆ ಇಟ್ಟುಕೊಂಡಿದ್ದರು ಅಪ್ಪು. ಆದರೆ ಗಂಧದಗುಡಿಯನ್ನು ಎಲ್ಲವೂ ನೋಡುವ ಮೊದಲೇ ಅಪ್ಪು ಅವರು ದೈಹಿಕವಾಗಿ ನಮ್ಮೆಲ್ಲರಿಂದ ದೂರವಾದರು. ಇಂದು ಅಪ್ಪು ಅವರ ಅನುಪಸ್ಥಿತಿಯಲ್ಲಿ ಗಂಧದಗುಡಿ ಬಿಡುಗಡೆ ಆಗುತ್ತಿದೆ. ಸಿನಿಮಾ ಬಿಡುಗಡೆ ಆಗುವುದಕ್ಕಿಂತ ಮೊದಲೇ ದಾಖಲೆಗಳನ್ನು ಪುಡಿ ಪುಡಿ ಮಾಡುತ್ತಿದೆ ಗಂಧದಗುಡಿ..

ನಾಳೆ ಸಿನಿಮಾ ಬಿಡುಗಡೆ ಆಗುತ್ತಿದೆ, ಇಂದು ಸಂಜೆ ರಾಜ್ಯದ ಹಲವೆಡೆ ಪೇಯ್ಡ್ ಪ್ರೀಮಿಯರ್ ಶೋ ಇದೆ. ಪೇಯ್ಡ್ ಪ್ರೀಮಿಯರ್ ಶೋಗೆ ಬುಕಿಂಗ್ಸ್ ಶುರುವಾಗಿ ಕೆಲವೇ ನಿಮಿಷಗಳಲ್ಲಿ ಎಲ್ಲಾ ಟಿಕೆಟ್ಸ್ ಸೋಲ್ಡ್ ಔಟ್ ಆಯಿತು. ಕರ್ನಾಟಕದ ಪ್ರತಿಯೊಬ್ಬರು ಸಹ ಗಂಧದಗುಡಿಯನ್ನು ಅಪ್ಪು ಅವರ ಕಣ್ಣುಗಳಿಂದ ನೋಡಲು ಭಾವುಕರಾಗಿ ಕಾತುರರಾಗಿ ಕಾಯುತ್ತಿದ್ದಾರೆ. ಇನ್ನು ನಾಳೆ ಬೆಳಗ್ಗೆ 10 ಗಂಟೆಗಿಂತ ಮೊದಲು ಬೆಂಗಳೂರಿನ ಪ್ರಮುಖ ಮಾಲ್ ಗಳಲ್ಲಿ 50 ಕ್ಕಿಂತ ಹೆಚ್ಚು ಶೋಗಳು ಪ್ರದರ್ಶನವಾಗುತ್ತಿದೆ. ಸಿನಿಮಾ ನೋಡಲು ಜನರು ಆಸಕ್ತಿ ತೋರಿಸುತ್ತಿದ್ದಾರೆ, ಅದೇ ರೀತಿ ಶೋಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕೆ.ಆರ್.ಜಿ ಸಂಸ್ಥೆಯ ಕಾರ್ತಿಕ್ ಅವರು ತಿಳಿಸಿದ್ದಾರೆ.

ಈ ಮೂಲಕ ಗಂಧದಗುಡಿ ಸಾಕ್ಷ್ಯಚಿತ್ರ ಮತ್ತೊಂದು ದೊಡ್ಡ ದಾಖಲೆ ಬರೆದಿದೆ. ಗಂಧದಗುಡಿ ಪ್ರಚಾರಕ್ಕಾಗಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಮೊದಲ ಬಾರಿಗೆ ಸಂದರ್ಶನದಲ್ಲಿ ಪಾಲ್ಗೊಂಡಿದ್ದಾರೆ, ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಅಶ್ವಿನಿ ಅವರನ್ನು ಸಂದರ್ಶನ ಮಾಡಿದ್ದು, ಅದರಲ್ಲಿ ಮಾತನಾಡಿದ ಅಶ್ವಿನಿ ಅವರು, ಗಂಧದಗುಡಿ ನನಗೆ ಹೆಮ್ಮೆ ತಂದಿರುವ ಪ್ರಾಜೆಕ್ಟ್, ಇದರಿಂದ ಸಂತೋಷ ಮತ್ತು ದುಃಖ ಎರಡು ಇದೆ ಎಂದಿದ್ದಾರೆ. ಹಾಗೆಯೇ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ ಅಶ್ವಿನಿ ಅವರು.

Get real time updates directly on you device, subscribe now.