ಓಳು ಬರೀ ಗೋಳು. ಪ್ರಾಸ ಹೇಳಲು ಹೋಗಿ ಬಾಯ್ತಪ್ಪಿ ಎಡವಟ್ಟು ಮಾಡಿಕೊಂಡ ಕಾವ್ಯಶ್ರೀ. ಮನೆಯಲ್ಲಿ ಏನಾಗಿದೆ ಗೊತ್ತೇ??
ಬಿಗ್ ಬಾಸ್ ಮನೆಯಲ್ಲಿ ಮನರಂಜನೆಗೆ ಯಾವುದೇ ಅಡೆತಡೆ ಇಲ್ಲ. ತರ್ಲೆ ತಮಾಷೆ ತುಂಟತನ ಇದೆಲ್ಲವು ನಡೆಯುತ್ತಲೇ ಇರುತ್ತದೆ. ಬಿಗ್ ಬಾಸ್ ಶೋ ಮನರಂಜನೆಯ ಮಹಾಪೂರ ಎಂದರೆ ತಪ್ಪಾಗುವುದಿಲ್ಲ. ಈ ಸಾರಿ, ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ಇಂತಹ ತಮಾಷೆಯ ಹಲವು ಘಟನೆಗಳು ನಡೆಯುತ್ತಲೇ ಇದೆ. ಅದರಲ್ಲು ಅರುಣ್ ಸಾಗರ್, ವಿನೋದ್ ಗೊಬ್ಬರಗಾಲ ಅವರು ಇರುವ ಕಾರಣ ತಮಾಷೆ ಹೆಚ್ಚಾಗಿಯೇ ಇದೆ. ಕಾವ್ಯಶ್ರೀಗೌಡ ಅವರ ಜೊತೆಗೂ ಇಂಥದ್ದೇ ಆದ ಮಾತುಕತೆ ನಡೆದು, ಮನೆಯ ಸದಸ್ಯರು ಬಿದ್ದು ನಕ್ಕಿದ್ದಾರೆ.
ಮಂಗಳಗೌರಿ ಮದುವೆ ಧಾರವಾಹಿ ಇಂದ ಕಾವ್ಯಶ್ರೀ ಗೌಡ ಅವರು ಒಂದು ರೀತಿ ಅಳುಮುಂಜಿ ಎಂದೇ ಖ್ಯಾತಿಯಾಗಿದ್ದರು. ಆದರೆ ಬಿಗ್ ಬಾಸ್ ಮನೆಯಲ್ಲಿ ತಾವು ನಿಜ ಜೀವನದಲ್ಲಿ ಹೇಗಿರುತ್ತಾರೋ ಹಾಗೆಯೇ ಇದ್ದಾರೆ ಕಾವ್ಯ. ಇದೀಗ ಕಾವ್ಯ ಅವರು ಪ್ರಾಸದಲ್ಲಿ ಮಾತನಾಡಲು ಹೋಗಿ, ಎಡವಟ್ಟು ಮಾಡಿಕೊಂಡಿದ್ದು, ಮನೆಯವರೆಲ್ಲಾ ನಕ್ಕಿದ್ದಾರೆ. ಬೆಡ್ ರೂಮ್ ಏರಿಯಾದಲ್ಲಿ, ಕಾವ್ಯ, ಅರುಣ್ ಸಾಗರ್, ವಿನೋದ್ ಮಾತನಾಡುವಾಗ, ಕಾವ್ಯ ಪ್ರಾಸದಲ್ಲಿ ಮಾತನಾಡುತ್ತಾರೆ, “ನಾನು ಒಳ್ಳೆಯವರಿಗೆ ಕೊಡ್ತೀನಿ ಬಾಳು.. ನಾನು ಒಳ್ಳೆಯವರಿಗೆ ಕೊಡ್ತೀನಿ ಬಾಳು.. ನೀನು ಮಾಡೋದೆಲ್ಲ ಓಳು..” ಎಂದು ವಿನೋದ್ ಅವರಿಗೆ ತಮಾಷೆ ಮಾಡುತ್ತಾರೆ ಕಾವ್ಯ. ಆಗ ವಿನೋದ್ ಕೂಡ ಕಾವ್ಯ ಅವರಿಗೆ ಪ್ರಾಸದಲ್ಲೇ ಉತ್ತರ ಕೊಡುತ್ತಾರೆ.

“ಓಳು ಅಂತಾಳೆ ಇವಳು.. ಓಳು ಅಂತಾಳೆ ಇವಳು.. ಇವಳನ್ನು ಕಟ್ಟಿಕೊಂಡವರ ಬಾಳು ಗೋಳೋ ಗೋಳು..” ಎಂದು ಕಾವ್ಯ ಅವರಿಗೆ ಪ್ರತ್ಯುತ್ತರ ಕೊಡುತ್ತಾರೆ ವಿನೋದ್. ನಂತರ ಅರುಣ್ ಸಾಗರ್ ಅವರು ಕೂಡ ಉಪ್ಪು ಹುಳಿ ಖಾರ ಎಂದು ಪ್ರಾಸದಲ್ಲೇ ಮತ್ತೇನನ್ನೋ ಹೇಳುತ್ತಾರೆ. ಬಳಿಕ ಕಾವ್ಯ ಪ್ರಾಸ ಹೇಳಲು ಹೋಗಿ ಬಾಯಿತಪ್ಪಿ, “ನನ್ನ ಕಟ್ಟಿಕೊಂಡವನ ಬಾಳು ಆಳು..” ಎನ್ನುತ್ತಾರೆ. ಕಾವ್ಯ ಹೇಳಿದ ಈ ಮಾತನ್ನು ಕೇಳಿಸಿಕೊಂಡ ಬಿಗ್ ಮನೆ ಮಂದಿ, ಬಿದ್ದು ಬಿದ್ದು ನಕ್ಕಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನಡೆಯುವ ಇಂತಹ ಸನ್ನಿವೇಶಗಳು, ವೀಕ್ಷಕರನ್ನು ಸಹ ನಕ್ಕು ನಗಿಸುತ್ತವೆ.