ಮತ್ತೆ ಮುನ್ನೆಲೆಗೆ ಬಂದ ಸೂರ್ಯವಂಶ ನಟಿ: ಚಿತ್ರರಂಗದ ಮತ್ತೊಂದು ಮುಖ ತೆರೆದಿಟ್ಟು ಹೇಳಿದ್ದೇನು ಗೊತ್ತೇ??
ಚಿತ್ರರಂಗದಲ್ಲಿ ಈಗ ಕ್ಯಾಸ್ಟಿಂಗ್ ಕೌಚ್ ಎನ್ನುವುದು ಸಾಧಾರಣ ವಿಚಾರದ ಹಾಗೆ ಆಗಿಹೋಗಿದೆ. ಮೀಡಿಯಾ ಕೂಡ ಈಗ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಹೆಚ್ಚು ಗಮನ ಕೊಡುತ್ತಿಲ್ಲ. ಚಿತ್ರರಂಗಕ್ಕೆ ಬಂದು ತಮ್ಮನ್ನು ತಾವು ರೂಪಿಸಿಕೊಳ್ಳಬೇಕು ಎಂದು ಕನಸು ಕಾಣುವವರಿಗೆ ಕ್ಯಾಸ್ಟಿಂಗ್ ಕೌಚ್ ಬಹಳ ತೊಂದರೆ ಕೊಟ್ಟಿದೆ. ಎಲ್ಲಾ ಭಾಷೆಯ ಚಿತ್ರರಂಗದಲ್ಲೂ ಇದು ಸಾಮಾನ್ಯ ಎನ್ನುವ ಹಾಗೆ ಆಗಿಹೋಗಿದೆ. ತೆಲುಗು ಚಿತ್ರರಂಗದಲ್ಲಿ ಸಹ ಕ್ಯಾಸ್ಟಿಂಗ್ ಕೌಚ್ ವಿಚಾರಗಳು ಕೇಳಿಬಂದಿವೆ. ಇತ್ತೀಚೆಗೆ ನಟಿ ವಿಷ್ಣುಪ್ರಿಯಾ ಸಹ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಮಾಡಿದ ಕಮೆಂಟ್ಸ್ ಗಳು ಬಹಳ ವೈರಲ್ ಆದವು.
ಇದೀಗ ತೆಲುಗು ಹಾಗೂ ದಕ್ಷಿಣ ಭಾರತ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಮತ್ತೊಬ್ಬ ಖ್ಯಾತ ನಟಿ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ತೆಲುಗಿನಲ್ಲಿ ಚಂದ್ರಲೇಖ, ಪ್ರೇಮತೋ ರಾ, ಕನ್ನಡದಲ್ಲಿ ಸೂರ್ಯವಂಶ, ಓ ನನ್ನ ನಲ್ಲೇ ಹಾಗೂ ಇನ್ನಿತರ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವವರು ನಟಿ ಇಷಾ ಕೊಪ್ಪಿಕರ್. ಇವರು ಈಗ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ. ತಮಗೆ ಒಂದು ಸಿನಿಮಾ ಅವಕಾಶ ಬಂದಾಗ, ನಿರ್ಮಾಪಕರು ಒಂದು ಫೇವರ್ ಬೇಕು ಎಂದು ಕೇಳಿದ್ದು, ಅದನ್ನು ತಾವು ತಡೆಯಲು ಪ್ರಯತ್ನ ಮಾಡಿದ್ದಾಗಿ ತಿಳಿಸಿದ್ದಾರೆ ಇಷಾ.
ಒಂದು ಪ್ರೆಸ್ ಮೀಟ್ ನಲ್ಲಿ ನಿರ್ಮಾಪಕನ ಬಗ್ಗೆ ಹೇಳಲು ಬಯಸಿದ್ದರು ಎಂದು ಇಷಾ ತಿಳಿಸಿದ್ದಾರೆ. ಆ ವಿಚಾರ ಆ ನಿರ್ಮಾಪಕನಿಗೆ ಗೊತ್ತಾದ ತಕ್ಷಣವೇ ಆತ ಪ್ರೆಸ್ ಮೀಟ್ ಕ್ಯಾನ್ಸಲ್ ಮಾಡಿ, ಕೂಡಲೇ ಇಷಾ ಅವರನ್ನು ಸಿನಿಮಾ ಇಂದ ತೆಗೆದುಹಾಕಿದ್ದಾಗಿ ಇಷಾ ತಿಳಿಸಿದ್ದಾರೆ. ಪ್ರಾಮಾಣಿಕವಾಗಿ ಸಿನಿಮಾಗಳಲ್ಲಿ ನಟಿಸುತ್ತೇನೆ ಆದರೆ ಇಂತಹ ತಪ್ಪುಗಳನ್ನು ಮಾಡುವುದಿಲ್ಲ ಎಂದಿದ್ದಾರೆ ಇಷಾ. ಸಿನಿಮಾದಲ್ಲಿ ಹೆಸರು ಮಾಡಬೇಕಾದರೆ ನಿರ್ಮಾಪಕರು ಹಾಗೂ ನಟರ ಸಹಕಾರ ಬಹಕ ಮುಖ್ಯ ಎಂದು ಇಷಾ ಹೇಳಿದ್ದಾರೆ.