ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಿದ್ದವಾದ ಖ್ಯಾತ ಒಂದು ಕಾಲದ ಟಾಪ್ ನಟಿಯ ಮಗಳು. ಈಕೆ ಯಾರು ಗೊತ್ತೇ??
ಚಿತ್ರರಂಗದಲ್ಲಿ ವಾರಸತ್ವ ಎನ್ನುವುದು ಮುಂದುವರೆಯುತ್ತಲೇ ಸಾಗುತ್ತಿದೆ. ಅನೇಕ ಸಿನಿಮಾ ಕಲಾವಿದರು ಮತ್ತು ಚಿತ್ರರಂಗದ ತಂತ್ರಜ್ಞರು ತಮ್ಮ ಮಕ್ಕಳನ್ನು ಸಿನಿಮಾರಂಗಕ್ಕೆ ಕರೆತರುತ್ತಿದ್ದಾರೆ. ಮೆಗಾಸ್ಟಾರ್, ದಗ್ಗುಬಾಟಿ ಮತ್ತು ಅಕ್ಕಿನೇನಿ ಕುಟುಂಬಗಳು ತಮ್ಮ ವಂಶಸ್ಥರನ್ನು ಚಿತ್ರರಂಗಕ್ಕೆ ಕರೆತಂದಿವೆ. ಈ ಹಿನ್ನಲೆಯಲ್ಲಿ ನಟರ ಪುತ್ರರು ಮಾತ್ರವಲ್ಲದೆ ಪುತ್ರಿಯರು ಸಹ ಚಿತ್ರರಂಗಕ್ಕೆ ಬರುತ್ತಿದ್ದಾರೆ.
ತೆಲುಗಿನ ಹೆಸರಾಂತ ಮೆಗಾಸ್ಟಾರ್ ಕುಟುಂಬದ ನಾಗಬಾಬು ಅವರ ಮಗಳು ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿರುವುದು ಗೊತ್ತೇ ಇದೆ.
ಇತ್ತೀಚೆಗಷ್ಟೇ ಹಿರಿಯ ನಟಿ, ವೈಸಿಪಿ ನಾಯಕಿ ಹಾಗೂ ಎಪಿ ಸಚಿವೆ ರೋಜಾ ತಮ್ಮ ಮಗಳನ್ನು ಇದೇ ರೀತಿ ಲಾಂಚ್ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಸದ್ಯದಲ್ಲೇ ರೋಜಾ ಅವರ ಮಗಳು ಹೀರೋಯಿನ್ ಆಗಿ ಎಂಟ್ರಿ ಕೊಡುತ್ತಾರೆ ಎನ್ನಲಾಗುತ್ತಿದೆ. ರೋಜಾ ಅವರ ಮಗಳು ಅಂಶು ಮಲಿಕಾ ಇತ್ತೀಚೆಗೆ 18ನೇ ವರ್ಷ ಪೂರೈಸಿ 19 ವರ್ಷಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗಷ್ಟೇ ಫೋಟೋ ಶೂಟ್ ಗಳ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ರೋಜಾ ಹಾಗೂ ಅವರ ಮಗಳನ್ನು ನೋಡಿದವರು ಸದ್ಯದಲ್ಲೇ ಮತ್ತೊಬ್ಬ ನಾಯಕಿ ಇಂಡಸ್ಟ್ರಿಗೆ ಎಂಟ್ರಿ ಕೊಡಲಿದ್ದಾರೆ ಎನ್ನುತ್ತಿದ್ದಾರೆ.

ಇತ್ತೀಚೆಗಷ್ಟೇ ರೋಜಾ ಮಗಳು ಹೀರೋಯಿನ್ ಆಗಿ ಸಿನಿಮಾಗಳಿಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ತಮಿಳಿನ ಸ್ಟಾರ್ ಹೀರೋ ಚಿಯಾನ್ ವಿಕ್ರಮ್ ಅವರ ಮಗ ಧ್ರುವ ವಿಕ್ರಮ್ ನಾಯಕನಾಗಿ ನಟಿಸುತ್ತಿರುವ ಸಿನಿಮಾಗೆ ನಟಿ ರೋಜಾ ಅವರ ಮಗಳು ಅಂಶು ಮಲಿಕಾ ನಟಿಯಾಗಿ ಎಂಟ್ರಿ ಕೊಡಲಿದ್ದಾರೆ ಎಂಬ ವರದಿಗಳಿವೆ. ತೆಲುಗಿನ ಹಿಟ್ ಸಿನಿಮಾ ಅರ್ಜುನ್ ರೆಡ್ಡಿ ರಿಮೇಕ್ ಮೂಲಕ ಧ್ರುವ ವಿಕ್ರಂ ಈಗಾಗಲೇ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ, ಈಗ ಅವರು ರೋಜಾ ಅವರ ಮಗಳ ಜೊತೆಗೆ ತೆಲುಗಿಗೆ ಡೈರೆಕ್ಟ್ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ರೋಜಾ ಅವರ ಮಗಳು ಹೇಗೆ ನಟಿಸುತ್ತಾರೆ ಎಂದು ಕಾದು ನೋಡಬೇಕಿದೆ.