ನಟಿ ಅಮಲಾ ಪೌಲ್ ದಕ್ಷಿಣ ಭಾರತ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ಇಲ್ಲಿ ಇವರಿಗೆ ಬೇಡಿಕೆ ಸಹ ಇದೆ. ತಮಿಳು ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಅಮಲಾ ಪೌಲ್, ಕನ್ನಡ, ತೆಲುಗು ಹಾಗೂ ಮಲಯಾಳಂ ಭಾಷೆಯ ಹಲವು ಸಿನಿಮಾಗಳಲ್ಲಿ ನಟಿಸಿ ಇಂದಿಗೂ ಬೇಡಿಕೆ ಉಳಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಸಮಾನ್ಯವಾಗಿ ಮದುವೆ ನಂತರ ನಾಯಕಿಯರಿಗೆ ಬೇಡಿಕೆ ಕಡಿಮೆ ಆಗುತ್ತದೆ. ಆದರೆ ಅಮಲಾ ಅವರಿಗೆ ಮದುವೆ ಆಗಿ, ವಿಚ್ಛೇದನ ಆಗಿದ್ದರು ಸಹ ಇಂದಿಗೂ ಅದೇ ಬೇಡಿಕೆ ಉಳಿಸಿಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸ್ಕ್ರಿಪ್ಟ್ ವಿಚಾರದಲ್ಲಿ ಬಹಳ ಚೂಸಿ ಆಗಿರುವ ಅಮಲಾ ಪೌಲ್, ಪಾತ್ರಕ್ಕೆ ಪ್ರಾಮುಖ್ಯತೆ ಇರುವ ಪಾತ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅಮಲಾ ಅವರು, ತೆಲುಗು ಚಿತ್ರರಂಗಕ್ಕೆ ಸಹ ಎಂಟ್ರಿ ಕೊಟ್ಟು 4 ಸಿನಿಮಾಗಳಲ್ಲಿ ನಟಿಸಿದ್ದಾರೆ, ಬೆಜವಾಡ ಸಿನಿಮಾ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟರು ಅಮಲಾ, ಆದರೆ ಇವರು ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಲಿಲ್ಲ. ಅದಕ್ಕೆ ಕಾರಣ ಏನು ಎನ್ನುವುದನ್ನು ಇತ್ತೀಚಿನ ಸಂದರ್ಶನ ಒಂದರಲ್ಲಿ ತಿಳಿಸಿದ್ದಾರೆ, ಟಾಲಿವುಡ್ ಬಗ್ಗೆ ಈಕೆ ಮಾಡಿರುವ ಕಮೆಂಟ್ಸ್ ಗಳು ಸಿನಿಪ್ರಿಯರಿಗೆ ಶಾಕ್ ನೀಡಿದೆ.
ಫ್ಯಾಮಿಲಿ ಕಾನ್ಸೆಪ್ಟ್ ಇದೆ ಎನ್ನುವುದು ತೆಲುಗು ಚಿತ್ರರಂಗಕ್ಕೆ ಬಂದಮೇಲೆ ಅರ್ಥವಾಯಿತ. ಕೆಲವು ಫ್ಯಾಮಿಲಿಗೆ ಬಹಳ ದೊಡ್ಡ ಅಭಿಮಾನಿ ಬಳಗ ಇದೆ, ಆ ಫ್ಯಾಮಿಲಿಯವರು ಮಾತ್ರ ವಿಭಿನ್ನವಾದ ಸಿನಿಮಾಗಳನ್ನು ಮಾಡುತ್ತಾರೆ. ಇಬ್ಬರು ನಾಯಕಿಯರನ್ನು ಸಿನಿಮಾಗೆ ತೆಗೆದುಕೊಂಡಿದ್ದು ಹಾಡುಗಳು ಮತ್ತು ರೊಮ್ಯಾಂಟಿಕ್ ದೃಶ್ಯಗಳಿಗೋಸ್ಕರ. ಗ್ಲಾಮರಸ್ ಆಗಿ ಶೂಟಿಂಗ್ ಮಾಡಲಾಗಿತ್ತು. ಇಲ್ಲಿ ಕಮರ್ಷಿಯಲ್ ಸಿನಿಮಾಗಳನ್ನು ಮಾತ್ರ ಹೆಚ್ಚಾಗಿ ಮಾಡಲಾಗುತ್ತದೆ, ಅದರಿಂದ ತೆಲುಗು ಚಿತ್ರರಂಗದ ಜೊತೆಗೆ ಕನೆಕ್ಟ್ ಆಗಲು ಸಾಧ್ಯವಾಗಲಿಲ್ಲ..ಎಂದಿದ್ದಾರೆ. ಈ ಕಮೆಂಟ್ಸ್ ಗಳು ಈಗ ಸಂಚಲನ ಸೃಷ್ಟಿಸಿದೆ. ಇಷ್ಟೇ ಅಲ್ಲದೆ, ತಮಿಳು ಚಿತ್ರರಂಗದಿಂದ ಪರಿಚಯವಾಗಿದ್ದಕ್ಕೆ ಬಹಳ ಸಂತೋಷ ಇದೆ ಎಂದು ಸಹ ಹೇಳಿದ್ದಾರೆ.