ಮದುವೆಯಾದ ಮೇಲೆ ರೊಚ್ಚಿಗೆದ್ದ ನಯನತಾರ: ಮದುವೆಯಾದ ಮೇಲೆ ಮೊದಲ ಬಾರಿಗೆ…
ಕಾಲಿವುಡ್ ನ ಸ್ಟಾರ್ ಹೀರೋಯಿನ್ ನಯನತಾರಾ, ಪತಿ ವಿಘ್ನೇಶ್ ಶಿವನ್ ಜೊತೆ ಈ ನಟಿ ಈಗ ಎಂಜಾಯ್ ಮಾಡುತ್ತಿದ್ದಾರೆ. ಕಾಲಿವುಡ್ ನ ಸ್ಟಾರ್ ಹೀರೋಯಿನ್ ಆಗಿ ಇಂಡಸ್ಟ್ರಿಯನ್ನು ಬೆಚ್ಚಿಬೀಳಿಸಿದ ಈ ನಟಿ, ಪ್ರಸ್ತುತ ಮದುವೆಯಾಗಿ ಗಂಡನ ಜೊತೆಗೆ ಸಮಯ ಕಳೆಯುತ್ತಿದ್ದಾರೆ. ನಯನತಾರಾ ಕಾಲಿವುಡ್ ಸ್ಟಾರ್ ಡೈರೆಕ್ಟರ್ ವಿಘ್ನೇಶ್ ಶಿವನ್ ಅವರನ್ನು ಪ್ರೀತಿಸಿ ಮದುವೆಯಾದದ್ದು ನಮಗೆ ಗೊತ್ತೇ ಇದೆ. ಕಳೆದ ಕೆಲ ದಿನಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಇತ್ತೀಚೆಗಷ್ಟೇ ಮದುವೆಯಾಗಿದ್ದಾರೆ. ಸದ್ಯ ಈ ಜೋಡಿ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಫಾರಿನ್ ಟ್ರಿಪ್ ಗೆ ಹೋಗಿದ್ದ ನಯನ ವಿಘ್ನೇಶ್ ನಗರದ ರಸ್ತೆಗಳಲ್ಲಿ ಓಡಾಡುತ್ತಿರುವುದು ಕಂಡು ಬಂದಿತ್ತು. ಇದಕ್ಕೆ ಸಂಬಂಧಿಸಿದ ಫೋಟೋಗಳು ಸದ್ಯ ವೈರಲ್ ಆಗಿವೆ. ಈ ಚಿತ್ರಗಳನ್ನು ನೋಡಿದ ಅಭಿಮಾನಿಗಳು ಮತ್ತು ನೆಟ್ಟಿಗರು ಖುಷಿಯಾಗಿದ್ದಾರೆ.
ಮದುವೆಯ ನಂತರ ನಯನತಾರಾ ಮೊದಲ ಬಾರಿಗೆ ಬೋಲ್ಡ್ ಫೋಟೋ ಶೂಟ್ ಗೆ ಪೋಸ್ ನೀಡಿದ್ದಾರೆ. ನಯನತಾರಾ ಸೌಂದರ್ಯಕ್ಕೆ ಹುಡುಗರು ಫಿದಾ ಆಗಿದ್ದಾರೆ. ನಯನತಾರಾ ಕಪ್ಪು ಬಣ್ಣದ ಚಿಕ್ಕ ಡ್ರೆಸ್ ನಲ್ಲಿ ಸುಂದರವಾಗಿ ಕಾಣಿಸುತ್ತಿದ್ದಾರೆ. ಇವರ ಮುದ್ದಾದ ಲುಕ್ಸ್ ಮನ ಮುಟ್ಟುವಂತಿದೆ. ಸದ್ಯ, ನಯನತಾರಾ ಅವರ ಲುಕ್‌ಗೆ ಹೊಗಳುವುದನ್ನು ತಡೆಯಲು ಸಾಧ್ಯವಿಲ್ಲ. ಇನ್ನು ಅವರ ಸಿನಿಮಾಗಳ ವಿಚಾರಕ್ಕೆ ಬಂದರೆ, ವಿಘ್ನೇಶ್ ಶಿವನ್ ನಿರ್ದೇಶನದ ಕಾತು ವಾಕುಲ ರೆಂಡು ಕಾದಲ್ ನಲ್ಲಿ ನಟಿಸಿದರು. ಈ ಚಿತ್ರದಲ್ಲಿ ವಿಜಯ್ ಸೇತುಪತಿ ನಾಯಕನಾಗಿ ನಟಿಸಿದ್ದರು. ಮತ್ತೊಬ್ಬ ನಾಯಕಿಯಾಗಿ ಸಮಂತಾ ನಟಿಸಿದ್ದರು, ಏಪ್ರಿಲ್ 28 ರಂದು ಬಿಡುಗಡೆಯಾಗಿ ಹಿಟ್ ಆಯಿತು.

ತಮಿಳಿನಲ್ಲಿ ಅರಮ್, ಡೋರಾ, ಕೋಲಮಾವು ಕೋಕಿಲ, ಐರ, ಕೊಲೈಯುದಿರ್ ಕಾಲಂ, ಮುಂತಾದ ನಾಯಕಿ ಪ್ರಧಾನ ಚಿತ್ರಗಳಲ್ಲಿ ನಟಿಸಿದ ನಯನತಾರಾ, ತಮಿಳಿನಲ್ಲಿ ತನಗೊಂದು ಮನ್ನಣೆ ಮತ್ತು ಚಿತ್ರರಂಗದಲ್ಲಿ ವಿಶೇಷ ಸ್ಥಾನವನ್ನು ಗಳಿಸಿದರು. ಹಾಗೊಂದು ವೇಳೆ ಈಕೆ ಇತ್ತೀಚೆಗಷ್ಟೇ ಬೇರೊಂದು ಕೆಲಸಕ್ಕೂ ಇಳಿದಂತೆ ಕಾಣುತ್ತಿದೆ. ನಯನತಾರಾ ಸೌಂದರ್ಯ ಉತ್ಪನ್ನಗಳ ವ್ಯಾಪಾರವನ್ನು ಪ್ರಾರಂಭಿಸಿದರು. ಅವರು ದಿ ಲಿಪ್ ಬಾಮ್ ಕಂಪನಿ ಎಂಬ ಬ್ರಾಂಡ್ ಶುರು ಮಾಡಿದ್ಫಾರೆ. ಚರ್ಮರೋಗ ತಜ್ಞ ರೆನಿಟಾ ರಾಜನ್ ಅವರೊಂದಿಗೆ ಈ ವ್ಯವಹಾರ ಶುರು ಮಾಡಿದ್ದಾರೆ. ಒಟ್ಟಿನಲ್ಲಿ ನಯನತಾರಾ ತಮ್ಮ ವೃತ್ತಿಜೀವನವನ್ನು ಚೆನ್ನಾಗಿಯೇ ನಿರ್ವಹಿಸುತ್ತಿದ್ದಾರೆ.