ಎಲ್ಲರೆದುರು ಹಠ ಮಾಡಿ, 18 ವರ್ಷದ ಹುಡುಗಿ ಅದ್ಯಾಕೆ 60 ವರ್ಷದ ಮದುವೆಯಾದಳು, ಮರುದಿನ ಮುದುಕ ಏನು ಮಾಡಿದ್ದಾನೆ ಗೊತ್ತೇ??
ಪ್ರಪಂಚದಲ್ಲಿ ಪ್ರೀತಿಗೆ ಕಣ್ಣಿಲ್ಲ ಎನ್ನುತ್ತಾರೆ. ಯಾರಿಗೆ ಯಾರ ಮೇಲೆ ಯಾವಾಗ ಬೇಕಾದರು ಪ್ರೀತಿ ಮೂಡಬಹುದು. ಪ್ರೀತಿಗೆ ವಯಸ್ಸಿನ ಅಂತರ ಇಲ್ಲ. ವಯಸ್ಸಿನಲ್ಲಿ ತಮಗಿಂತ ಬಹಳ ದೊಡ್ಡ ವಯಸ್ಸಿನ ಹುಡುಗಿಯನ್ನು ಮದುವೆ ಆಗುವ ಹುಡುಗರನ್ನು ನೋಡಿದ್ದೇವೆ, ಅದೇ ರೀತಿ ತಮಗಿಂತ ವಯಸ್ಸಿನಲ್ಲಿ ಬಹಳ ದೊಡ್ಡವರಾದ ಗಂಡಸರನ್ನು ಮದುವೆ ಆಗುವ ಹುಡುಗಿಯರು ಸಹ ಇದ್ದಾರೆ. ಈ ಮದುವೆಗಳು ಕೆಲವೊಮ್ಮೆ ಜೀವನವಿಡೀ ಯಶಸ್ವಿಯಾಗಿ ಸಾಗುತ್ತದೆ. ಇನ್ನು ಕೆಲವು ಅರ್ಧದಲ್ಲೇ ಮುರಿದು ಬೀಳುತ್ತದೆ. ಇದೇ ರೀತಿ, ಎಲ್ಲರೂ ಎಷ್ಟೇ ಬೇಡ ಎಂದರು 60 ವರ್ಷದ ಮುದುಕನನ್ನು ಪ್ರೀತಿ ಮಾಡಿದ 18 ವರ್ಷದ ಹುಡುಗಿಯ ಜೀವನ ಏನಾಯಿತು ಎಂದು ತಿಳಿಸುತ್ತೇವೆ ನೋಡಿ..
18 ವರ್ಷದ ಹರೆಯದ ಹುಡುಗಿಯೊಬ್ಬಳು, 60 ವರ್ಷದ ಮುದುಕನ ನ್ನು ಪ್ರೀತಿ ಮಾಡಿ ಆತನನ್ನೇ ಮದುವೆಯಾಗಿದ್ದಾಳೆ. ಈ ಘಟನೆ ನಡೆದಿರುವುದು ಭಾರತದ ಝಾರ್ಖಂಡ್ ನಲ್ಲಿ, ಇಲ್ಲಿನ ಒಂದು ಊರಿನಲ್ಲಿ ವಾಸ ಮಾಡುತ್ತಿದ್ದ 18 ವರ್ಷದ ಹುಡುಗಿಯೊಬ್ಬಳು, ಅದೇ ಊರಿನ 60 ವರ್ಷದ ಮುದುಕನನ್ನು ಪ್ರೀತಿಸಿದ್ದಾಳೆ. 60 ವರ್ಷದ ಮುದುಕನ ಹೆಂಡತಿ 5 ವರ್ಷದ ಹಿಂದೆ ಮೃತರಾದರು. ಬಳಿಕ ಆತ ಯಾರ ಮೇಲೂ ಡಿಪೆಂಡ್ ಆಗದೆ, ತನ್ನ ಕೆಲಸಗಳನ್ನು ತಾನೇ ಮಾಡಿಕೊಂಡು ಸ್ವಾತಂತ್ರ್ಯವಾಗಿದ್ದ. ಇದನ್ನು ನೋಡಿ 18 ವರ್ಷದ ಹುಡುಗಿಗೆ ಮುದುಕನ ಮೇಲೆ ಪ್ರೀತಿ ಶುರುವಾಯಿತು. ಆಕೆ ಮುದುಕನ ಬಳಿ ಹೋಗಿ ಪ್ರೀತಿಯನ್ನು ಹೇಳಿಕೊಂಡಳು. ಮುದುಕ ಕೂಡ ಆಕೆಯ ಪ್ರೀತಿಯನ್ನು ಒಪ್ಪಿಕೊಂಡು ಇಬ್ಬರು ಏಕಾಂತವಾಗಿ ಸಮಯ ಕಳೆಯಲು ಶುರು ಮಾಡಿದರು.
ಬಳಿಕ ಹುಡುಗಿ ಇದ್ದಕ್ಕಿದ್ದ ಹಾಗೆ ಒಂದು ದಿನ ಮುದುಕನ ಬಳಿ ಬಂದು, ನಮ್ಮ ಮನೆಯವರು ನಾವಿಬ್ಬರು ಜೊತೆಯಾಗಿ ಇರಲು ಬಿಡುವುದಿಲ್ಲ, ಮದುವೆ ಅಗೋಣ ಎಂದು ಹೇಳಿ. ಮುದುಕನ ಜೊತೆಗೆ ದೇವಸ್ಥಾನದಲ್ಲಿ ಮದುವೆಯಾದಳು. ಆಕೆಯ ತಂದೆ ತಾಯಿ ಮಗಳನ್ನು ಮನೆಗೆ ಕರೆದುಕೊಂಡು ಹೋಗಲು ಎಷ್ಟೇ ಪ್ರಯತ್ನ ಪಟ್ಟರು ಆಕೆ ಬರಲಿಲ್ಲ. ಹಾಗಾಗಿ ಮದುವೆಯಾದ ಮರುದಿನವೇ ಹುಡುಗಿಯ ತಂದೆ ತಾಯಿ ಕೋರ್ಟ್ ನಲ್ಲಿ ಕೇಸ್ ಹಾಕಿದ್ದು, ಕೇಸ್ ನ ತೀರ್ಪು ಇನ್ನು ಬಂದಿಲ್ಲ. ಹುಡುಗಿಯ ಮನೆಯವರು ತಮ್ಮ ಮಗಳು ತಮ್ಮ ಮನೆಗೆ ವಾಪಸ್ ಬರಬೇಕು ಎಂದು ತೀರ್ಪು ಬರಲಿ ಎನ್ನುತ್ತಿದ್ದಾರೆ. ಈ ಕೇಸ್ ನಲ್ಲಿ ನ್ಯಾಯಾಲಯ ಯಾವ ರೀತಿಯ ತೀರ್ಪು ಕೊಡಲಿದೆ ಎಂದು ಕಾದು ನೋಡಬೇಕಿದೆ.