ಕೊನೆಗೂ ತನ್ನ ಪ್ರೀತಿಯ ವಿಚಾರವನ್ನು ತಾನೇ ಬಹಿರಂಗ ಪಡಿಸಿದ ವಿಜಯ್ ದೇವರಕೊಂಡ: ರಶ್ಮಿಕಾಗೆ ಕೈ ಕೊಟ್ಟು ಹೇಳಿದ್ದೇನು ಗೊತ್ತೇ?? ಆ ಟಾಪ್ ನಟಿ ಯಾರು ಗೊತ್ತೇ?

29

Get real time updates directly on you device, subscribe now.

ಸೆಲ್ಫ್ ಮೇಡ್ ಸ್ಟಾರ್ ವಿಜಯ್ ದೇವರಕೊಂಡ ಅವರ ಮೇಲಿನ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಪ್ರತಿ ಸಿನಿಮಾದಲ್ಲು ಎತ್ತರಕ್ಕೆ ಬೆಳೆಯುತ್ತಲೇ ಇದ್ದಾರೆ. ಅವರ ಸಿನಿಮಾಗಳು ಈಗಾಗಲೇ ಸಂಚಲನ ಮೂಡಿಸಿವೆ. ಈಗ ವಿಜಯ್ ದೇವರಕೊಂಡ ಅವರು ಲೈಗರ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಲಿದ್ದಾರೆ. ಡ್ಯಾಶಿಂಗ್ ಡೈರೆಕ್ಟರ್ ಪೂರಿ ಜಗನ್ನಾಥ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಲೈಗರ್ ಸಿನಿಮಾ ಮೇಲೆ ಭಾರೀ ನಿರೀಕ್ಷೆಗಳಿವೆ. ಸಿನಿಮಾ ಪ್ರಚಾರದ ಭಾಗವಾಗಿ ವಿಜಯ್ ದೇವರಕೊಂಡ ಮಾಡಿರುವ ಕಮೆಂಟ್‌ಗಳು ಸಂಚಲನ ಮೂಡಿಸುತ್ತಿವೆ.

ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಅವರು ಪ್ರಣಯ ಮತ್ತು ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ. ವಿಜಯ್ ಅವರು ನಟಿ ರಶ್ಮಿಕಾ ಜೊತೆ ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಅವರು ಎಂದಿಗು ಇದರ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ ವಿಜಯ್. ಇತ್ತೀಚೆಗೆ ಅವರು ಡೇಟಿಂಗ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ, ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ವಿಜಯ್ ದೇವರಕೊಂಡ ಅವರಿಗೆ ಈ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಅವರು ಮುಕ್ತವಾಗಿ ಪ್ರತಿಕ್ರಿಯಿಸಿದ್ದಾರೆ. “ಹೌದು ನಾನು ಆಕೆಯ ಜೊತೆಗೆ ಡೇಟಿಂಗ್ ಮಾಡುತ್ತಿದ್ದೇನೆ. ಇದು ನನ್ನ ವೈಯಕ್ತಿಕ ಜೀವನ.


ಆದರೆ ನಾನು ಅದನ್ನು ಬಹಿರಂಗಪಡಿಸಲು ಬಯಸುವುದಿಲ್ಲ. ಏಕೆಂದರೆ ಆಕೆಗೆ ತೊಂದರೆಯಾಗುವುದು ಬೇಡ..” ಎನ್ನುತ್ತಾರೆ ವಿಜಯ್ ದೇವರಕೊಂಡ. “ಹೀರೋ ಆಗಿ ಪಬ್ಲಿಕ್ ನಲ್ಲಿ ಇರೋದು ನನಗೆ ಇಷ್ಟ… ಆದ್ರೆ ಅದೆಲ್ಲ ಆಕೆಗೆ ಇಷ್ಟವಿಲ್ಲ. ಹಾಗಾಗಿ ಆಕೆಯ ಹೆಸರನ್ನು ಉಲ್ಲೇಖಿಸಿಲ್ಲ..” ಎಂದು ವಿವರಿಸಿದ್ದಾರೆ ವಿಜಯ್ ದೇವರಕೊಂಡ. ವಿಜಯ್ ಹೇಳಿದ ಕಮೆಂಟ್ ಗಳು ಈಗ ವೈರಲ್ ಆಗಿದೆ. ಅಲ್ಲದೇ ಅವರು ಹೇಳಿದ್ದು ರಶ್ಮಿಕಾ ಬಗ್ಗೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ವಿಜಯ್ ನಿಜ ಹೇಳುತ್ತಿದ್ದಾರೋ ಇಲ್ಲವೋ ಎಂದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

Get real time updates directly on you device, subscribe now.