ಟ್ರೆಂಡಿಂಗ್ ನಲ್ಲಿ ಇರುವ ರಾನು ರಾನು ಅನ್ನುವ ಹಾಡಿಗೆ ಎಲ್ಲರ ಮೈಂಡ್ ಬ್ಲಾಕ್ ಆಗುವಂತೆ ಡಾನ್ಸ್ ಮಾಡಿ ಚಾಹಲ್ ಪತ್ನಿ: ಹೇಗಿದೆ ಗೊತ್ತೇ ಡಾನ್ಸ್ ವಿಡಿಯೋ??
ಸೋಷಿಯಲ್ ಮೀಡಿಯಾದಲ್ಲಿ ಯಾವ ವಿಡಿಯೋ ಯಾವಾಗ ವೈರಲ್ ಆಗುತ್ತೋ ಗೊತ್ತಿಲ್ಲ. ಸದ್ಯ ನಟ ನಿತಿನ್ ಅಭಿನಯದ ಮಾಚರ್ಲ ಸಿನಿಮಾದ ‘ರಾನು ರಾನು ಅನ್ನಿನೆ ಚಿನ್ನದೋ’ ಹಾಡು ವೈರಲ್ ಆಗುತ್ತಿದೆ. ಇಂದಿನ ಪೀಳಿಗೆಯ ಹುಡುಗಿಯರು ಮತ್ತು ಹುಡುಗರು ಈ ಹಾಡನ್ನು ಕೇಳಿ ಉತ್ಸುಕರಾಗಿದ್ದಾರೆ, ಈ ಮಾಸ್ ಬೀಟ್ ಗೆ ಹೆಜ್ಜೆ ಹಾಕುತ್ತಿದ್ದಾರೆ. ಈ ಹಾಡು ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಹೀಗೆ ಎಲ್ಲೆಲ್ಲೂ ಕಾಣಸಿಗುತ್ತದೆ. ನಿತಿನ್ ಅಭಿನಯದ ಚೊಚ್ಚಲ ಸಿನಿಮಾ ‘ಜಯಂ’ ಚಿತ್ರದ ಸಣ್ಣ ಹಾಡು ರಾನು ರಾನು ಹಾಡನ್ನು ಮಾಚರ್ಲಾ ಸಿನಿಮಾದಲ್ಲಿ ರೀಮೇಕ್ ಮಾಡಿ ಬಳಸಿಕೊಂಡಿದ್ದು ಗೊತ್ತೇ ಇದೆ. ನಿತಿನ್ ವೃತ್ತಿ ಜೀವನದಲ್ಲಿ ಇದು ಮೊದಲ ಹಿಟ್ ಸಿನಿಮಾ ಆಗಿತ್ತು.
ನಿರ್ದೇಶಕ ತೇಜ ಹಾಗು ನಟಿ ಸದಾ ಅವರಿಗೂ ಜಯಂ ಮೊದಲ ಸಿನಿಮಾ ಆಗಿತ್ತು. ಸದ್ಯ ಈ ಸಿನಿಮಾದ ಮಾಸ್ ಹಾಡಿನ ಬೀಟ್ ವೈರಲ್ ಆಗುತ್ತಿರುವಾಗಲೇ ಅದಕ್ಕೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದೆ. ಉತ್ತರ ಭಾರತೀಯರು ಸಹ ತೆಲುಗು ಸಿನಿಮಾದ ಹಾಡನ್ನು ಎಂಜಾಯ್ ಮಾಡುತ್ತಿದ್ದಾರೆ ಎಂಬುದು ಈ ವಿಡಿಯೋ ನೋಡಿದರೆ ಅರ್ಥವಾಗುತ್ತದೆ. ಇಲ್ಲಿ ಹೇಳಲೇಬೇಕಾದ ಅಂಶವೇನು ಎಂದರೆ, ಈ ಹಾಡಿಗೆ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಯುಜುವೇಂದ್ರ ಚಾಹಲ್ ಅವರ ಪತ್ನಿ ಅದ್ಭುತವಾಗಿ ಸ್ಟೆಪ್ ಹಾಕಿದ್ದಾರೆ. ಪ್ರಸ್ತುತ, ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಧನುಶ್ರೀ ವರ್ಮಾ ಜನಪ್ರಿಯ ಯೂಟ್ಯೂಬರ್, ಇವರು ಯಜ್ವೇಂದ್ರ ಚಹಾಲ್ ಅವರ ಪತ್ನಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಯಾವಾಗಲೂ ಸಕ್ರಿಯರಾಗಿದ್ದಾರೆ.
ಆಗಾಗ ಬರುವ ಹೊಸ ಹೊಸ ಹಾಡುಗಳಿಗೆ ತಮ್ಮದೇ ಆದ ಮಾಸ್ ಸ್ಟೆಪ್ಸ್ ಹಾಕಿ ಅಭಿಮಾನಿಗಳನ್ನು ರಂಜಿಸುತ್ತಾರೆ ಧನಶ್ರೀ. ತಮ್ಮ ಸೌಂದರ್ಯ ಮತ್ತು ನಟನೆಯಿಂದ ಮಾಸ್ ಡ್ಯಾನ್ಸ್ ಮಾಡುವ ಮೂಲಕ ನೆಟ್ಟಿಗರನ್ನು ಸೆಳೆದಿದ್ದಾರೆ. ‘ನೀನು ಮಾತನಾಡದಿದ್ದರೂ.. ನಿನ್ನೊಳಗಿನ ಶಕ್ತಿ ಯಾವಾಗಲೂ ಗಟ್ಟಿಯಾಗಿ ಮಾತನಾಡುತ್ತದೆ’ ಎಂದು ತನ್ನ ವಿಡಿಯೋಗೆ ಕ್ಯಾಪ್ಶನ್ ಬರೆದಿದ್ದಾರೆ. ಧನುಶ್ರೀ ನೃತ್ಯ ನಿರ್ದೇಶಕಿ ಎನ್ನುವುದರ ಜೊತೆಗೆ ಜನಪ್ರಿಯ ಯೂಟ್ಯೂಬರ್ ಮತ್ತು ದಂತವೈದ್ಯೆ ಸಹ ಹೌದು.. ಧನು ಶ್ರೀ ತಮ್ಮದೇ ಆದ ದಂತ ಚಿಕಿತ್ಸಾಲಯವನ್ನು ಕೂಡ ನಡೆಸುತ್ತಿದ್ದಾರೆ. ಸಧ್ಯಕ್ಕೆ ನೆಟ್ಟಿಗರು ಧನುಶ್ರೀ ಅವರ ಸ್ಟೆಪ್ ಗಳಿಗೆ ಫಿದಾ ಆಗಿದ್ದಾರೆ.