ಬಿಗ್ ಬಾಸ್ ನಲ್ಲಿ ರಾಮಾಚಾರಿ ವಿಲ್ಲನ್ ಉದಯ್ ಸೂರ್ಯ ಗೆಲ್ಲಲು ಅದೊಂದು ಕಾರಣ ಸಾಕು. ಏನು ಗೊತ್ತೇ??
ಬಹು ನಿರೀಕ್ಷಿತ ಶೋ ಬಿಗ್ ಬಾಸ್ ಓಟಿಟಿ ನಿನ್ನೆಯಷ್ಟೇ ಶುರುವಾಗಿದೆ. ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ ಬಿಗ್ ಬಾಸ್ ಶೋನ ಮೊದಲ ಓಟಿಟಿ ಸೀಸನ್ ನಿನ್ನೆಯಷ್ಟೇ ಲಾಂಚ್ ಆಗಿದ್ದು, 16 ಸ್ಪರ್ಧಿಗಳು ಮನೆಯ ಒಳಗೆ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ಹೆಚ್ಚಾಗಿ ಹೊಸ ಮುಖಗಳು ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡಿದ್ದು, 16 ಸ್ಪರ್ಧಿಗಳು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಶುರು ಮಾಡಿದ್ದಾರೆ. ಬಿಗ್ ಬಾಸ್ ಮನೆಗೆ 11ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟವರು ನಟ ಉದಯ್ ಸೂರ್ಯ.
ಇವರು ಈಗಾಗಲೇ ಕನ್ನಡ ಕಿರುತೆರೆಯಲ್ಲಿ ಬಹಳ ಫೇಮಸ್ ಆಗಿದ್ದಾರೆ. ನಾಗಕನ್ನಿಕೆ ಧಾರವಾಹಿಯ ವಿಲ್ಲನ್ ಪಾತ್ರದಲ್ಲಿ ಮಿಂಚಿದ್ದ ಉದಯ್ ಸೂರ್ಯ, ಧಾರವಾಹಿಯಿಂದ ಒಂದು ಬ್ರೇಕ್ ಪಡೆದು, ಮತ್ತೊಮ್ಮೆ ರಾಮಾಚಾರಿ ಧಾರವಾಹಿಯಲ್ಲಿ ಮತ್ತೊಂದು ವಿಲ್ಲನ್ ಪಾತ್ರದಲ್ಲಿ ನಟಿಸಿ, ಹೆಸರು ಮಾಡಿದ್ದರು. ಅಷ್ಟೇ ಅಲ್ಲದೆ, ಬಡ್ಡೀಸ್ ಸಿನಿಮಾ ಮೂಲಕ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟರು. ಆದರೆ ಆ ಸಿನಿಮಾ ಹೆಚ್ಚಾಗಿ ಯಶಸ್ಸೇನು ಪಡೆಯಲಿಲ್ಲ. ಸಿನಿಮಾ, ಧಾರವಾಹಿ ಎರಡನ್ನು ಟ್ರೈ ಮಾಡಿರುವ ಉದಯ್ ಸೂರ್ಯ ಇದೀಗ ತಮ್ಮ ಲಕ್ ಪರೀಕ್ಷೆ ಮಾಡಲು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಇದೀಗ ಉದಯ್ ಸೂರ್ಯ ಅವರು ಬಿಗ್ ಬಾಸ್ ಓಟಿಟಿ ಶೋ ಗೆಲ್ಲಲು ಅದೊಂದು ಕಾರಣ ಸಾಕು ಎನ್ನುತ್ತಿದ್ದಾರೆ ಕಿರುತೆರೆ ವೀಕ್ಷಕರು.
ಉದಯ ಸೂರ್ಯ ಕನ್ನಡತಿ ಧಾರವಾಹಿ ಖ್ಯಾತಿಯ ನಟ ಕಿರಣ್ ರಾಜ್ ಅವರ ಆಪ್ತ ಸ್ನೇಹಿತರು, ಇವರಿಬ್ಬರು ಬೆಸ್ಟ್ ಫ್ರೆಂಡ್ಸ್ ಆಗಿದ್ದು, ಈ ಹಿಂದೆ ಬಿಗ್ ಬಾಸ್ ಮಿನಿ ಸೀಸನ್ ಗೆ ಕಿರಣ್ ರಾಜ್ ಅವರು ಸಹ ಬಂದಿದ್ದರು. ಉದಯ್ ಸೂರ್ಯ ಅವರು ಬಿಗ್ ಮನೆಗೆ ಎಂಟ್ರಿ ಕೊಡುವಾಗ, ಕಿಚ್ಚ ಸುದೀಪ್ ಅವರು ವೇದಿಕೆಯಲ್ಲಿ ಕಿರಣ್ ರಾಜ್ ಅವರ ಹೆಸರು ಹೇಳಿದಾಗ, ಜನರು ಜೋರಾಗಿ ಕೂಗಿದ್ದರು, ಆಗ ಸುದೀಪ್ ಅವರು ಸಹ ಕಿರಣ್ ರಾಜ್ ಅವರ ಬಗ್ಗೆ ಸಂತೋಷದ ಮಾತುಗಳನ್ನಾಡಿದ್ದರು. ಇದೊಂದು ಮುಖ್ಯ ಕಾರಣದಿಂದ ಉದಯ್ ಸೂರ್ಯ ಅವರು ಈ ಶೋ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಬಿಗ್ ಬಾಸ್ ಓಟಿಟಿಯಲ್ಲಿ ಟಾಪ್ ನಲ್ಲಿ ಬರುವ ಸ್ಪರ್ಧಿಗಳು, ಟಿವಿಯಲ್ಲಿ ನಡೆಯುವ 100 ದಿನಗಳ ಬಿಗ್ ಬಾಸ್ ಜರ್ನಿಗೆ ನೇರವಾಗಿ ಆಯ್ಕೆಯಾಗುತ್ತಾರೆ.