ಮನೆಯಲ್ಲಿಯೇ ಕುಳಿತು ನೋಡಿ ಅಪ್ಪು ರವರ ಕೊನೆಯ ಸಿನಿಮಾ: ಟಿವಿ ಯಲ್ಲಿ ಪ್ರಸಾರ ಆಗುವುದು ಯಾವಾಗ ಅಂತೇ ಗೊತ್ತೇ??
ನಮಸ್ಕಾರ ಸ್ನೇಹಿತರೇ ಅಪ್ಪು ಕೊನೆಯ ಬಾರಿಗೆ ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡ ಚಿತ್ರವೆಂದರೆ ಅದು ಜೇಮ್ಸ್. ಅವರ ಜನ್ಮದಿನಾಚರಣೆಯ ವಿಶೇಷವಾಗಿ ಮಾರ್ಚ್ 17 ರಂದು ಬಿಡುಗಡೆಯಾಗಿ ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ದಾಖಲೆಯ ಪ್ರದರ್ಶನವನ್ನು ಕಂಡಿತ್ತು. ಬಾಕ್ಸ್ ಆಫೀಸ್ ಗಳಿಕೆಯ ವಿಚಾರದಲ್ಲಿ ಕೂಡ ಬೇರೆಲ್ಲ ಸಿನಿಮಾಗಳನ್ನು ಹಿಂದಿಕ್ಕಿತ್ತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಕೊನೆಯ ಬಾರಿಗೆ ನೋಡಲು ಥಿಯೇಟರ್ ನಲ್ಲಿ ಸಾಧ್ಯವಾಗಿಲ್ಲ ಎಂದು ನಿರಾಶೆ ಪಟ್ಟಿದ್ದ ಅಭಿಮಾನಿಗಳಿಗೆ ಒಂದೊಳ್ಳೆ ಸುದ್ದಿ ಸಿಕ್ಕಿದೆ.
ಹೌದು ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಕನ್ನಡ ಚಿತ್ರರಂಗದ ನಂಬರ್ 1 ಫ್ಯಾಮಿಲಿ ಪ್ರೇಕ್ಷಕರ ನೆಚ್ಚಿನ ಹೀರೋ. ಇನ್ನು ಕುಟುಂಬ ಒಟ್ಟಾಗಿ ಕುಳಿತು ನೋಡುವ ಒಂದೇ ಒಂದು ಮಾಧ್ಯಮ ಎಂದರೆ ಅದು ಟಿವಿ. ಹೌದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೇಮ್ಸ್ ಸಿನಿಮಾ ಅತೀ ಶೀಘ್ರದಲ್ಲೇ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವನ್ನು ಕಾಣಲಿದ್ದು ಈಗ ಅದರ ದಿನಾಂಕ ಕೂಡ ನಿಗದಿಯಾಗಿದೆ. ಹಾಗಿದ್ದರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರನ್ನು ಸಣ್ಣ ಪರದೆಯ ಮೇಲೆ ಕಣ್ತುಂಬಿಕೊಳ್ಳುವ ದಿನಾಂಕ ಯಾವುದೆಂಬುದನ್ನು ತಿಳಿಯೋಣ ಬನ್ನಿ.
ಸ್ನೇಹಿತರೇ ಇದೇ ಜುಲೈ 17 ರಂದು ಸಂಜೆ 5.30ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ವರ್ಲ್ಡ್ ಪ್ರೀಮಿಯರ್ ಟೆಲಿಕಾಸ್ಟ್ ಆಗಲಿದೆ. ಇನ್ನು ಈ ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಧ್ವನಿಯೇ ಕೇಳಿಬರಲಿರುವುದು ಮತ್ತೊಂದು ಸಂತೋಷದ ಸುದ್ದಿ. ಪ್ರತಿಯೊಬ್ಬ ಕನ್ನಡ ಸಿನಿಮಾಗಳ ಅಭಿಮಾನಿಗೂ ಇದು ಸಂತೋಷದ ಸುದ್ದಿ ಅಲ್ಲದೇ ಮತ್ತಿನ್ನೇನು.