ಜೊತೆ ಜೊತೆಯಲಿ ಅಭಿಮಾನಿಗಳಿಗೆ ನಿಜಕ್ಕೂ ಷಾಕಿಂಗ್ ಸುದ್ದಿ ಕಾದಿದೆಯೇ?? ನಿಜಕ್ಕೂ ಧಾರವಾಹಿ ಮುಗಿಯುತ್ತ??
ನಮಸ್ಕಾರ ಸ್ನೇಹಿತರೆ ಕನ್ನಡ ಕಿರುತೆರೆಯ ವಾಹಿನಿಯಲ್ಲಿ ನಂಬರ್1 ವಾಹಿನಿಯಾಗಿ ಕಾಣಿಸಿಕೊಂಡಿರುವ ಜೀ ಕನ್ನಡ ವಾಹಿನಿಯ ಟಾಪ್ ಧಾರವಾಹಿ ಆಗಿರುವ ಜೊತೆ ಜೊತೆಯಲಿ ಈಗಾಗಲೇ ಪ್ರಾರಂಭವಾಗಿ ಮೂರು ನಾಲ್ಕು ವರ್ಷಗಳು ಕಳೆದಿವೆ. ಅಂದಿನಿಂದ ಇಂದಿನವರೆಗೂ ಕೂಡ ಧಾರವಾಹಿ ಎನ್ನುವುದು ಕಿರುತೆರೆ ಇತಿಹಾಸದಲ್ಲಿ ಒಂದು ದೊಡ್ಡಮಟ್ಟದ ಸ್ಟ್ಯಾಂಡರ್ಡ್ ಅನ್ನು ಸೆಟ್ ಮಾಡಿದೆ ಎಂದರೆ ತಪ್ಪಾಗಲಾರದು. ಸಿನಿಮಾದಿಂದ ಸಾಕಷ್ಟು ವರ್ಷಗಳ ಕಾಲ ಸನ್ಯಾಸವನ್ನು ಪಡೆದಿದ್ದ ಅನಿರುದ್ಧ ರವರು ಧಾರವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡುತ್ತಾರೆ.
ಆರ್ಯವರ್ಧನ್ ಪಾತ್ರದಲ್ಲಿ ಅನಿರುದ್ಧ ರವರು ಪರಕಾಯ ಪ್ರವೇಶಮಾಡಿ ಪ್ರತಿಯೊಬ್ಬ ಕಿರುತೆರೆ ಪ್ರೇಕ್ಷಕರ ನೆಚ್ಚಿನ ನಟನಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಮೇಘಾ ಶೆಟ್ಟಿ ಅವರು ಕೂಡ ಅನುಸಿರಿಮನೆ ಪಾತ್ರದಲ್ಲಿ ಇಷ್ಟು ವರ್ಷಗಳ ಕಾಲ ಮನೋಜ್ಞವಾದ ನಟನೆಯನ್ನು ನಿರ್ವಹಿಸಿಕೊಂಡು ಬಂದಿದ್ದಾರೆ. ದಿನದಿಂದ ದಿನಕ್ಕೆ ಜೊತೆಜೊತೆಯಲ್ಲಿ ಧಾರವಾಹಿಯಲ್ಲಿ ರೋಚಕ ರೋಮಾಂಚನ ದೃಶ್ಯಗಳು ಹಾಗೂ ಕ್ಷಣಗಳು ಕಂಡುಬರುತ್ತಿವೆ. ಇಷ್ಟೊಂದು ದೀರ್ಘ ಕಾಲದಿಂದಲೂ ಕೂಡ ಎಲ್ಲು ಕೂಡ ಬೇಸರವನ್ನು ಪಡಿಸಿದಂತೆ ಧಾರವಾಹಿಯನ್ನು ರಸವತ್ತಾಗಿ ತಂಡ ಕಟ್ಟಿಕೊಟ್ಟಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಬಹುದಾಗಿದೆ. ಸದ್ಯಕ್ಕೆ ಅನುಸಿರಿಮನೆ ಹಾಗೂ ಆರ್ಯನ ರಿವೇಂಜ್ ಸನ್ನಿವೇಶಗಳು ಧಾರವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು ಅನು ಗರ್ಭಿಣಿಯಾಗಿರುವ ವಿಚಾರವೂ ಕೂಡ ಮನೆಯವರಿಗೆ ತಿಳಿದಿಲ್ಲ.
ಇದು ಮುಂದಿನ ದಿನಗಳಲ್ಲಿ ಯಾವ ತಿರುವನ್ನು ಕಾದು ನೋಡಬೇಕಾಗುತ್ತದೆ ಆದರೆ ಜೊತೆ ಜೊತೆಯಲ್ಲಿ ದಾರವಾಹಿ ಅತಿಶೀಘ್ರದಲ್ಲೇ ಮುಗಿಯುವ ಸನ್ನಿವೇಶ ಎದುರಾಗಲಿದೆ ಎಂಬುದಾಗಿ ತಿಳಿದುಬಂದಿದೆ. ಇತ್ತೀಚಿಗಷ್ಟೇ ಮೇಘ ಶೆಟ್ಟಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಧಾರವಾಹಿ ತಂಡದ ಗೆಟ್ ಟುಗೆದರ್ ಪಾರ್ಟಿಯ ವಿಡಿಯೋವನ್ನು ಹಂಚಿಕೊಂಡಿದ್ದರು. ಸಾಮಾನ್ಯವಾಗಿ ನಿಮಗೆಲ್ಲರಿಗೂ ತಿಳಿದಿರುವಂತೆ ಇಂತಹ ಪಾರ್ಟಿಗಳನ್ನು ಹಂಚಿಕೊಳ್ಳುವುದು ಆ ಸಿನಿಮಾ ಅಥವಾ ಧಾರವಾಹಿ ಮುಗಿದಮೇಲೆ ಅಷ್ಟೇ. ಹೀಗಾಗಿ ಈ ವಿಡಿಯೋದ ಕಮೆಂಟ್ ಬಾಕ್ಸ್ ನಲ್ಲಿ ಪ್ರತಿಯೊಬ್ಬರೂ ಕೂಡ ಈ ಕುರಿತಂತೆ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.