ಖುದ್ದು ರಾಜಮೌಳಿ ಯವರೇ ಸೋನು ಸೂದ್ ರವರನ್ನು ಬಾಹುಬಲಿಯಲ್ಲಿ ನಟನೆ ಮಾಡುವಂತೆ ಕೇಳಿದ್ದರೂ ಸೋನು ಒಪ್ಪಿರಲಿಲ್ಲ ಯಾಕೆ ಗೊತ್ತೇ?

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ರಾಜಮೌಳಿ ಅವರು ಭಾರತ ದೇಶ ಕಂಡಂತಹ ಅತ್ಯುತ್ತಮ ನಿರ್ದೇಶಕರಲ್ಲಿ ಅಗ್ರಪಂಕ್ತಿಯಲ್ಲಿ ಕಾಣಸಿಗುತ್ತಾರೆ. ಬಾಹುಬಲಿ ಸರಣಿ ಚಿತ್ರಗಳ ಮೂಲಕ ಭಾರತ ದೇಶದ ಚಿತ್ರರಂಗವನ್ನು ಬೇರೆಯ ಹಂತಕ್ಕೆ ಕೊಂಡೊಯ್ದ್ದಂತಹ ಮಹಾನ್ ನಿರ್ದೇಶಕ. ಅವರ ಸಿನಿಮಾಗಳಿಗೆ ಯಾವ ನಟನೆ ಕೂಡ ಅವಕಾಶ ಹುಡುಕಿಕೊಂಡು ಬಂದರೆ ಇಲ್ಲ ಅನ್ನೋದಕ್ಕೆ ಚಾನ್ಸೇ ಇಲ್ಲ.

ಆದರೆ ನಿಮಗೆ ಗೊತ್ತಾ ಗೆಳೆಯರೇ ಭಾರತ ಚಿತ್ರರಂಗದ ಮತ್ತೊಬ್ಬ ಮಹೋನ್ನತ ನಟ ಆಗಿರುವ ಸೋನು ಸೂದ್ ರವರು ರಾಜಮೌಳಿ ಅವರಿಂದ ಬಾಹುಬಲಿ1 ಚಿತ್ರಕ್ಕೆ ಅವಕಾಶ ಹುಡುಕಿಕೊಂಡು ಬಂದಿದ್ದರು ಕೂಡ ಅವಕಾಶವನ್ನು ತಿರಸ್ಕರಿಸಿದ್ದರು. ರಾಜಮೌಳಿ ಅವರ ಚಿತ್ರಕ್ಕೆ ನಟಿಸಲು ಎಂತೆಂತಹ ಕಲಾವಿದರು ಕೂಡ ಹಾತೊರೆಯುತ್ತಾರೆ ಎಂಬುದು ನಿಮಗೆ ಗೊತ್ತಿರುವ ವಿಚಾರ ಅದರಲ್ಲಿ ಸೋನು ಸೂದ್ ರವರು ರಾಜಮೌಳಿಯವರ ಜೀವನಶ್ರೇಷ್ಠ ಸಿನಿಮಾ ಆಗಿರುವ ಬಾಹುಬಲಿ ಸಿನಿಮಾದಲ್ಲಿ ನಟಿಸಲು ಯಾಕೆ ತಿರಸ್ಕರಿಸುತ್ತಾರೆ ಎಂಬುದಾಗಿ ನೀವು ಯೋಚಿಸುತ್ತಿರಬಹುದು. ಅದಕ್ಕೆ ಸ್ವತಃ ಸೋನು ಸೂದ್ ರವರೇ ಕಾರಣಗಳೊಂದಿಗೆ ಈ ಘಟನೆಯನ್ನು ವಿವರಿಸುತ್ತಾರೆ. ಹೌದು ಗೆಳೆಯರೇ ಈ ಸಂದರ್ಭದಲ್ಲಿ ಅವರು ಶಾರುಖ್ ಖಾನ್ ನಟನೆಯ ಹ್ಯಾಪಿ ನ್ಯೂ ಇಯರ್ ಸಿನಿಮಾದಲ್ಲಿ ನಟಿಸಿದ್ದರು.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಾಜಮೌಳಿ ಅವರ ಸಿನಿಮಾದಲ್ಲಿ ನಟಿಸಲು ತಿಂಗಳಾನುಗಟ್ಟಲೆ ಗಳ ಕಾಲ ಕಲಾವಿದರು ಅವರ ಸಿನಿಮಾದಲ್ಲಿ ನಟಿಸಬೇಕು ಆಗುತ್ತದೆ ಹಾಗೂ ಅವರ ಕಾಲ್ ಶೀಟ್ ಕೂಡ ಬೇಕಾಗುತ್ತದೆ. ಈ ಸಂದರ್ಭದಲ್ಲಿ ಬೇರೆ ಸಿನಿಮಾಗಳಲ್ಲಿ ನಟಿಸುವ ಹಾಗೆ ಕೂಡ ಇರುವುದಿಲ್ಲ. ಇದರಿಂದಾಗಿ ಸೋನು ಸೂದ್ ರವರು ಬಾಹುಬಲಿ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಬಾಹುಬಲಿ ಸಿನಿಮಾದಲ್ಲಿ ಯಾವ ಪಾತ್ರಕ್ಕಾಗಿ ರಾಜಮೌಳಿಯವರು ಸೋನು ಸೂದ್ ಅವರನ್ನು ಆಹ್ವಾನಿಸಿದ್ದರು ಎಂಬುದು ಇಂದಿಗೂ ಕೂಡ ಸೀಕ್ರೇಟಾಗಿ ಉಳಿದುಕೊಂಡಿದೆ.

Get real time updates directly on you device, subscribe now.