ಬೇರೆ ಪ್ರತಿಭೆಗಳಿದ್ದರೂ ಕೂಡ ಹೆಚ್ಚು ಹೈಪ್ ಕೊಡಲಾಗುತ್ತಿರುವ ನಟ ನಟಿಯರು ಯಾರ್ಯಾರು ಗೊತ್ತೇ?? ಇದು ಕೊಂಚ ಹೆಚ್ಚಾಗಿಯೇ ಇದೆ ಎನ್ನುತ್ತಿರುವುದು ಯಾರ್ಯಾರನ್ನು ಗೊತ್ತೇ?

4

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಕರ್ನಾಟಕ ಹಾಗೂ ಕನ್ನಡ ಚಿತ್ರರಂಗ ಎನ್ನುವುದು ಸಾಕಷ್ಟು ಪ್ರತಿಭೆಗಳಿಗೆ ಆಶ್ರಯ ನೀಡಿರುವಂತಹ ತಾಣ ಎಂದರೆ ತಪ್ಪಾಗಲಾರದು. ನಮ್ಮ ಕನ್ನಡ ಚಿತ್ರರಂಗದಲ್ಲಿ ನೋಡುವುದಾದರೆ ಹಲವಾರು ಪ್ರತಿಭೆಗಳಿವೆ. ನಮ್ಮ ಕನ್ನಡ ಪ್ರೇಕ್ಷಕರು ಕೂಡ ಪ್ರತಿಭೆಗಳನ್ನು ನೋಡಿ ಅವರ ಪ್ರತಿಭೆಗೆ ಸರಿಯಾದ ಪ್ರೋತ್ಸಾಹ ನೀಡುವ ಕೆಲಸವನ್ನು ಹಲವಾರು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ಅದಕ್ಕಾಗಿಯೇ ನಮ್ಮ ಕನ್ನಡ ನೆಲದಲ್ಲಿ ಈಗಾಗಲೇ ಹಲವಾರು ಸೂಪರ್ ಸ್ಟಾರ್ ಗಳು ಹುಟ್ಟಿಕೊಂಡಿದ್ದಾರೆ. ಇವರೆಲ್ಲರೂ ತಮ್ಮ ಪರಿಶ್ರಮ ಹಾಗೂ ಪ್ರತಿಭೆಯ ಮೂಲಕ ಜನರಿಂದ ಮೆಚ್ಚುಗೆ ಪಡೆದು ಬಂದವರು. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಕನ್ನಡ ಚಿತ್ರರಂಗದ ಓವರ್ ರೇಟೆಡ್ ಕಲಾವಿದರ ಕುರಿತಂತೆ.

ಓವರ್ ರೇಟೆಡ್ ಎಂದ ಮಾತ್ರಕ್ಕೆ ನಾವು ಅವರನ್ನು ಟೀಕಿಸುತ್ತಿದ್ದೇವೆ ಎಂಬ ಭಾವನೆಗೆ ಒಳಗಾಗುವುದು ಬೇಡ. ಹೌದು ಗೆಳೆಯರೇ ನಾವು ಅವರನ್ನು ಯಾವ ರೀತಿಯಲ್ಲಿ ಓವರ್ ರೇಟೆಡ್ ಎಂದು ಹೇಳಲು ಹೊರಟಿದ್ದೇವೆ ಎಂದರೆ ಅಗತ್ಯಕ್ಕಿಂತ ಜನರು ಅವರನ್ನು ಅಟ್ಟದ ಮೇಲೆ ಕೂರಿಸಿದ್ದಾರೆ ಎಂದು ಹೇಳಬಹುದಾಗಿದೆ. ಹಾಗಿದ್ದರೆ ಅಂತಹ ಕಲಾವಿದರು ಕನ್ನಡ ಚಿತ್ರರಂಗದಲ್ಲಿ ಯಾರೆಲ್ಲ ಇದ್ದಾರೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಚಿಕ್ಕಣ್ಣ; ಈ ಲಿಸ್ಟಿನಲ್ಲಿ ಮೊದಲಿಗೆ ಬರುವಂತಹ ಹೆಸರೇ ಚಿಕ್ಕಣ್ಣ ಎಂದು ಹೇಳಬಹುದಾಗಿದೆ. ಅರೆ ಇದೇನಿದು ಪ್ರತಿ ಸಿನಿಮಾದಲ್ಲಿ ಕೂಡ ಚಿಕ್ಕಣ್ಣನವರಿಗೆ ಅಷ್ಟೊಂದು ಬೇಡಿಕೆ ಇದೆ ನೀವು ಅವರನ್ನು ಅದೇಗೆ ಓವರ್ ರೇಟೆಡ್ ನಟ ಎಂಬುದಾಗಿ ಹೇಳುತ್ತೀರಾ ಎಂಬುದಾಗಿ ಪ್ರಶ್ನೆ ಮಾಡಬಹುದು. ಕಿರಾತಕ ಚಿತ್ರದಲ್ಲಿ ಇವರ ಕಾಮಿಡಿ ಸ್ಟೈಲನ್ನು ಎಲ್ಲರೂ ಮೆಚ್ಚಿಕೊಂಡು ಇವರನ್ನು ದೊಡ್ಡಮಟ್ಟದಲ್ಲಿ ಪ್ರೇಕ್ಷಕರು ಮೆರೆಸಿದರು. ಆದರೆ ಆ ಚಿತ್ರದ ನಂತರ ಆ ಮಟ್ಟಿಗಿನ ಕಾಮಿಡಿ ಅನ್ನು ಯಾವುದೇ ಸಿನಿಮಾಗಳಲ್ಲಿ ಅವರ ತೋರ್ಪಡಿಸಿಲ್ಲ. ಇನ್ನು ಅವರ ಡಬಲ್ ಮೀನಿಂಗ್ ಡೈಲಾಗ್ ಗಳು ಕುಟುಂಬದ ಜೊತೆಗೆ ಹೋಗಿ ಸಿನಿಮಾವನ್ನು ನೋಡುವವರಿಗೆ ಸಾಕಷ್ಟು ಇರಿಸುಮುರುಸು ತರಬಹುದಾಗಿದೆ. ಹೀಗಾಗಿ ತಮ್ಮ ಹಾಸ್ಯ ನಟನೆಯಲ್ಲಿ ತಾಜಾತನವನ್ನು ಹಾಗೂ ಸಹಜ ವಂತಿಕೆಯನ್ನು ಒಳಗೂಡಿಸಬೇಕು. ಇದನ್ನು ಅಳವಡಿಸಿಕೊಂಡರೆ ಖಂಡಿತವಾಗಿ ಅವರನ್ನು ಎಲ್ಲರೂ ಮೆಚ್ಚುತ್ತಾರೆ.

ರಶ್ಮಿಕ ಮಂದಣ್ಣ; ನಟಿ ರಶ್ಮಿಕಾ ಮಂದಣ್ಣ ನವರು ಕನ್ನಡದ ಕಿರಿಕ್ ಪಾರ್ಟಿ ಚಿತ್ರದಲ್ಲಿ ನಟಿಸುವ ಮೂಲಕ ಈಗ ಭಾರತೀಯ ಚಿತ್ರರಂಗದ ಎಲ್ಲಾ ಪ್ರಮುಖ ಭಾಷೆಗಳಲ್ಲಿ ಕೂಡ ನಟಿಸುತ್ತಿದ್ದಾರೆ. ಬಹು ಬೇಡಿಕೆ ಹಾಗೂ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಕೂಡ ಒಬ್ಬರಾಗಿದ್ದಾರೆ. ಆದರೆ ಅವರನ್ನು ನ್ಯಾಷನಲ್ ಕೃಷ್ ಅಥವಾ ಇಷ್ಟೊಂದು ಹೊಗಳಿ ಕೊಂಡಾಡುವಂಥ ಸೌಂದರ್ಯ ವಾಗಲಿ ಅಥವಾ ನಟನೆ ಯಾಗಲಿ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಇದಕ್ಕಾಗಿಯೇ ರಶ್ಮಿಕ ಮಂದಣ್ಣ ಓವರ್ ರೇಟೆಡ್ ಲಿಸ್ಟಿನಲ್ಲಿ ಇದ್ದಾರೆ.

ಅನುಶ್ರೀ; ನೀವು ನೋಡಿರಬಹುದು ಗೆಳೆಯರೇ ಕನ್ನಡ ಕಿರುತೆರೆಯ ಹಲವಾರು ಪ್ರಮುಖ ವಾಹಿನಿಗಳ ಕಾರ್ಯಕ್ರಮದಿಂದ ಪ್ರಾರಂಭಿಸಿ ಕನ್ನಡ ಚಿತ್ರರಂಗದ ಎಲ್ಲಾ ಕಾರ್ಯಕ್ರಮಗಳನ್ನು ಕೂಡ ಅನುಶ್ರೀ ಅವರೇ ನಿರೂಪಣೆ ಮಾಡುತ್ತಿರುತ್ತಾರೆ. ಹೀಗಾಗಿ ಅವರನ್ನು ಹೊರತುಪಡಿಸಿ ಅವರಂತಹ ಇನ್ನಷ್ಟು ಪ್ರತಿಭಾವಂತ ನಿರೂಪಕರಿಗೆ ಅವಕಾಶವನ್ನು ನೀಡುವುದು ಉತ್ತಮ ಅವರು ಅವರು ಓವರ್ ರೇಟೆಡ್ ಆಗಿದ್ದಾರೆ ಎಂಬುದಾಗಿ ಹೇಳಬಹುದಾಗಿದೆ.

ನಿಖಿಲ್ ಕುಮಾರ್; ನಿಖಿಲ್ ರವರ ಮೊದಲ ಚಿತ್ರದಿಂದ ಪ್ರಾರಂಭಿಸಿ ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ರೈಡರ್ ಚಿತ್ರದವರೆಗೂ ಕೂಡ ಅವರ ಸಿನಿಮಾವನ್ನು ಸೋತಿದ್ದರು ಕೂಡ ಗೆದ್ದ ರೀತಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ಬಿಂಬಿಸಲಾಗಿದೆ ಅವರನ್ನು ಕನ್ನಡ ಚಿತ್ರರಂಗದ ಸ್ಟಾರ್ ನಟರ ಪೈಕಿ ಯಲ್ಲಿ ಒತ್ತಾಯಪೂರ್ವಕವಾಗಿ ಸೇರಿಸಲಾಗಿದೆ. ಇನ್ನು ನಟನೆಯಲ್ಲಿ ಕೂಡ ಅವರ ಅನುಭವ ಅಗತ್ಯಕ್ಕಿಂತ ತುಂಬಾನೇ ಕಡಿಮೆ ಇದೆ. ಇನ್ನೂ ಅವರು ಕಲಿಯೂರು ಸಾಕಷ್ಟಿದ್ದರೂ ಕೂಡ ಅವರನ್ನು ಸ್ಟಾರ್ ನಟ ಎಂದು ಹೇಳುತ್ತಿರುವುದು ನಿಜಕ್ಕೂ ಕೂಡ ಓವರ್ ರೇಟೆಡ್ ಆಗಿದೆ. ನಾವು ಹೇಳಿರುವ ಈ ಕಲಾವಿದರ ಕುರಿತಂತೆ ನಿಮಗಿರುವ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.