ಮತ್ತೊಮ್ಮೆ ಮುನ್ನೆಲೆಗೆ ಬಂದ ಕಿಚ್ಚ ದರ್ಶನ್ ಅಭಿಮಾನಿಗಳು. ಟಾಪ್ ನಟರು ಒಂದಾಗಲು ಮಾಡಲು ಹೊರಟಿರುವುದಾದರೂ ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಸ್ನೇಹಕ್ಕೆ ಹೆಸರಾಗಿದ್ದವರು ಎಂದರೆ ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ರೆಬಲ್ ಸ್ಟಾರ್ ಅಂಬರೀಶ್ ರವರು. ಇವರಿಬ್ಬರನ್ನು ಕನ್ನಡ ಚಿತ್ರರಂಗದ ಕುಚಿಕು ಗಳು ಎಂಬುದಾಗಿ ಕರೆಯುತ್ತಿದ್ದರು. ಇವರ ಆದನಂತರ ಆಸ್ಥಾನಕ್ಕೆ ಅವರ ಅಭಿಮಾನಿಗಳಿಗೆ ಕಂಡಿದ್ದು ಕಿಚ್ಚ ಹಾಗೂ ದಚ್ಚು. ವಿಷ್ಣುವರ್ಧನ್ ಅವರ ಅಭಿಮಾನಿಗಳ ಪಾಲಿಗೆ ಕಿಚ್ಚ ಹಾಗೂ ಅಂಬರೀಶ್ ಅವರ ಅಭಿಮಾನಿಗಳ ಪಾಲಿಗೆ ದಚ್ಚು ಆ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ.
ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರಲಾರದಂತೆ ಅಷ್ಟೊಂದು ಕ್ಲೋಸ್ ಆಗಿದ್ದರು. ಇಷ್ಟರಮಟ್ಟಿಗೆ ಪ್ರಾಣ ಸ್ನೇಹಿತರಾಗಿದ್ದ ಕಿಚ್ಚ ಹಾಗೂ ದಚ್ಚು ಇಬ್ಬರೂ ಕೂಡ ಈಗ ಪರಸ್ಪರ ದುಶ್ಮನ್ ಗಳಾಗಿದ್ದಾರೆ. ಇದು ನಿಜಕ್ಕೂ ಕೂಡ ಕನ್ನಡ ಚಿತ್ರರಂಗದ ದುರ್ದೈವ ಎಂದು ಹೇಳಬಹುದಾಗಿದೆ. ಒಂದು ಕಾಲದಲ್ಲಿ ಕುಚಿಕು ಗೆಳೆಯರಾಗಿದ್ದ ಇವರಿಬ್ಬರು ಇಂದು ಒಬ್ಬರನ್ನೊಬ್ಬರು ಕಂಡರೆ ಒಬ್ಬರಿಗೆ ಆಗುವುದಿಲ್ಲ ಎನ್ನುವಷ್ಟರಮಟ್ಟಿಗೆ ವೈರತ್ವವನ್ನು ಹೊಂದಿದ್ದಾರೆ ಎನ್ನಬಹುದಾಗಿದೆ.
ಇವರಿಬ್ಬರ ನಡುವೆ ಇದ್ದಂತಹ ಗೆಳೆತನವನ್ನು ವಿಷ್ಣುದಾದ ಹಾಗೂ ಅಂಬಿ ಅವರ ಗೆಳೆತನಕ್ಕೆ ಎಲ್ಲರೂ ಹೋಲಿಸುತ್ತಿದ್ದರು. ಕಿಚ್ಚ ಸುದೀಪ್ ರವರು ದರ್ಶನ್ ರವರ ಸಿನಿಮಾಗಳಿಗೆ ಸಪೋರ್ಟ್ ಮಾಡಿದರೆ ದರ್ಶನ್ ಅವರು ಕಿಚ್ಚ ಸುದೀಪ್ ರವರ ಸಿನಿಮಾಗಳಿಗೆ ಸಪೋರ್ಟ್ ಮಾಡುತ್ತಿದ್ದರು. ಇಬ್ಬರೂ ಕೂಡ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಒಟ್ಟಾಗಿ ಕ್ರಿಕೆಟ್ ಆಡುತ್ತಿದ್ದರು. ಯಾವುದೇ ಸಮಾರಂಭಗಳು ಇದ್ದರೂ ಕೂಡ ಇಬ್ಬರು ಒಟ್ಟಿಗೆ ಕಾರಿನಲ್ಲಿ ಹೋಗುತ್ತಿದ್ದರು. ಇಷ್ಟೆಲ್ಲಾ ಬಾಂಧವ್ಯವನ್ನು ಹೊಂದಿದ್ದ ಇವರಿಬ್ಬರ ಸ್ನೇಹದ ಮೇಲೆ ಯಾರ ಕಣ್ಣು ಬಿತ್ತೋ ಏನೋ ಈಗ ಇವರಿಬ್ಬರೂ ಬದ್ಧವೈರಿ ಗಳಾಗಿದ್ದಾರೆ ಎಂದು ಹೇಳಬಹುದಾಗಿದೆ.
ಅಂಬರೀಶ್ ರವರು ಸೇರಿದಂತೆ ಹಲವಾರು ಜನರು ಅವರ ಸ್ನೇಹವನ್ನು ಸರಿಪಡಿಸುವ ಕೆಲಸವನ್ನು ಮಾಡಿದರು ಕೂಡ ಅದು ಕಾರ್ಯಕ್ಕೆ ಬರಲಿಲ್ಲ. ಆದರೆ ಈಗ ಈ ಕಾರ್ಯಕ್ಕೆ ಅಭಿಮಾನಿಗಳು ಮುಂದಾದಂತಿದೆ. ಹೌದು ಗೆಳೆಯರೇ ನಿರ್ಮಾಪಕ ಸೂರಪ್ಪ ಬಾಬು ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಹೆಸರಿನಲ್ಲಿರುವ ಟ್ವಿಟರ್ ಅಕೌಂಟ್ ನಿಂದ ಕಿಚ್ಚ ದಚ್ಚು ಮತ್ತೊಮ್ಮೆ ಒಂದಾಗಲಿ ಎನ್ನುವ ಹ್ಯಾಷ್ ಟ್ಯಾಗ್ ಗಳೊಂದಿಗೆ ಸೋಶಿಯಲ್ ಮೀಡಿಯಾ ಗಳಲ್ಲಿ ಟ್ವೀಟ್ ಗಳು ಬರಲು ಆರಂಭವಾಗುತ್ತದೆ.
ಇದನ್ನು ನೋಡಿ ಕಿಚ್ಚ ಹಾಗೂ ದಚ್ಚು ಅಭಿಮಾನಿಗಳು ಕೂಡ ಇದನ್ನು ಪ್ರೋತ್ಸಾಹಿಸಿ ಸಾವಿರಾರು ಟ್ವೀಟ್ ಗಳನ್ನು ಮಾಡಲು ಮುಂದಾಗುತ್ತಾರೆ. ಕಿಚ್ಚ ದಚ್ಚು ಒಂದಾಗಲಿ ಎನ್ನುವ ಅಭಿಯಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಈಗಾಗಲೇ ಟ್ವಿಟರ್ನಲ್ಲಿ ಟ್ವೀಟ್ ಮಾಡುತ್ತಿದ್ದಾರೆ. ಈಗಾಗಲೇ ಈ ಹ್ಯಾಷ್ ಟ್ಯಾಗ್ ನಲ್ಲಿ 10 ಸಾವಿರಕ್ಕೂ ಅಧಿಕ ಟ್ವೀಟುಗಳು ಅಭಿಮಾನಿಗಳಿಂದ ಬಂದಿದ್ದು ಈ ಅಭಿಯಾನಕ್ಕೆ ದೊಡ್ಡಮಟ್ಟದಲ್ಲಿ ಅಭಿಮಾನಿಗಳು ಎರಡು ಕಡೆಯಿಂದ ಸೇರಿದ್ದಾರೆ ಎಂದು ಹೇಳಬಹುದಾಗಿದೆ.
ಆದರೆ ಈಗ ಪರಿಶೀಲಿಸಿ ನೋಡಿದ ನಂತರ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ನಿರ್ಮಾಪಕ ಸೂರಪ್ಪ ಬಾಬು ರವರ ಟ್ವಿಟರ್ ಅಕೌಂಟ್ ಫೇಕ್ ಎಂಬುದಾಗಿ ತಿಳಿದುಬಂದಿದೆ. ಅದೇನೇ ಇರಲಿ ಅಭಿಮಾನಿಗಳು ಇವರಿಬ್ಬರು ಒಂದಾಗಲಿ ಎನ್ನುವ ಕಾರಣಕ್ಕಾಗಿ ಹೀಗೆ ಮಾಡಿರಬಹುದು. ನಿಜಕ್ಕೂ ಕೂಡ ಈಗ 2ಕಡೆಗಳಲ್ಲಿ ಇವರಿಬ್ಬರು ಒಂದಾಗಬೇಕು ಎನ್ನುವ ಆಶಯ ಹೆಚ್ಚಾಗಿದೆ. ಕಿಚ್ಚ ದಚ್ಚು ಒಂದಾಗಲಿ ಎನ್ನುವ ಅಭಿಲಾಷೆ 2 ಅಭಿಮಾನಿಗಳಲ್ಲಿ ಇದೆ ಆದರೆ ಇಬ್ಬರೂ ಕೂಡ ಹಲವಾರು ವರ್ಷಗಳಿಂದ ಮುನಿಸನ್ನು ಹೊಂದಿದ್ದಾರೆ. ನಿಜಕ್ಕೂ ಕೂಡ ಇದು ಕನ್ನಡ ಚಿತ್ರರಂಗದ ಮಟ್ಟಿಗೆ ಒಳ್ಳೆಯ ಬೆಳವಣಿಗೆ ಅಲ್ಲ. ಮುಂದಿನ ದಿನಗಳಲ್ಲಿ ಇಬ್ಬರು ಎಲ್ಲಾ ವೈರತ್ವವನ್ನು ಮರೆತು ಒಂದಾಗಲಿ ಎಂಬುದೇ ಪ್ರತಿಯೊಬ್ಬ ಕನ್ನಡಿಗನ ಆಶಯ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.