ಬಾಲಿವುಡ್ ನ ಖಾನ್ ಗಳಿಗೆ ನನ್ನನ್ನು ಹೋಲಿಸಬೇಡಿ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ ರಾಕಿಂಗ್ ಸ್ಟಾರ್; ಕಾರಣವೇನಂತೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಇನ್ನೇನು ಕೆಲವೇ ದಿನಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಪಂಚಭಾಷಾ ಚಿತ್ರ ಕೆಜಿಎಫ್ ಚಾಪ್ಟರ್ 2 ಅದ್ದೂರಿಯಾಗಿ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಕರ್ನಾಟಕ ಹೊರತುಪಡಿಸಿ ಬೇರೆಲ್ಲಾ ಕಡೆಗಳಲ್ಲಿ ಚಿತ್ರದ ಅಡ್ವಾನ್ಸ್ ಬುಕಿಂಗ್ ಪ್ರಾರಂಭವಾಗಿದೆ. ಬೇರೆ ಭಾಷೆಗಳ ಸಿನಿಮಾಗಳಿಗಿಂತ ಹೆಚ್ಚಾಗಿ ಕೆಜಿಎಫ್ ಚಾಪ್ಟರ್ 2ನ್ನು ನೋಡಲು ಜನ ಕಾತುರರಾಗಿದ್ದಾರೆ ಎಂಬುದು ಈಗಾಗಲೇ ಸಾಬೀತಾಗಿರುವ ವಿಚಾರವಾಗಿದೆ.
ಖಂಡಿತವಾಗಿ ಮೊದಲ ದಿನದಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನುವುದಾಗಿ ಸಿನಿಮಾ ಪಂಡಿತರು ಭವಿಷ್ಯ ನುಡಿದಿದ್ದಾರೆ. ಹೀಗಾಗಿ ಈ ಬಾರಿ ಬಾಹುಬಲಿ2 ಸಿನಿಮಾದ ದಾಖಲೆಯನ್ನು ಕೆಜಿಎಫ್ ಚಾಪ್ಟರ್ 2 ಖಂಡಿತವಾಗಿ ಮುರಿಯುತ್ತದೆ ಎನ್ನುವುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ನಿಮಗೆ ನೆನಪಿರಬಹುದು ಕೆಜಿಎಫ್ ಚಾಪ್ಟರ್ 1 ಬಿಡುಗಡೆಯಾದಾಗ ಕಿಂಗ್ ಖಾನ್ ಶಾರುಖ್ ಖಾನ್ ರವರ ಜೀರೋ ಸಿನಿಮಾ ಬಿಡುಗಡೆಯಾಗಿತ್ತು. ಹಿಂದಿಯಲ್ಲಿ ಕೂಡ ಕೆಜಿಎಫ್ ಚಾಪ್ಟರ್ 1 ಯಶಸ್ವಿಯಾಗಿ ಜೀರೋ ಸಿನಿಮಾ ಫ್ಲಾಪ್ ಆಗಿತ್ತು. ಅಂದಿನಿಂದ ಇಂದಿನವರೆಗೂ ಕೂಡ ಖಾನ್ ಅಂದರೆ ಶಾರುಖ್ ಖಾನ್ ಸಲ್ಮಾನ್ ಖಾನ್ ಗಿಂತ ಹೆಚ್ಚಾಗಿ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಜನಪ್ರಿಯತೆ ಹೆಚ್ಚಿದೆ ಎನ್ನುವುದಾಗಿ ಸಂದರ್ಶಕರು ಪ್ರಶ್ನೆಗಳನ್ನು ಹಾಗೂ ಅಭಿಮಾನಿಗಳು ಕೂಡ ಇದನ್ನೇ ಹೇಳುತ್ತಿದ್ದರು. ಈಗ ಇವೆಲ್ಲ ವಿಚಾರಕ್ಕೆ ತೆರೆ ಎಳೆದಿದ್ದು ಸ್ವತಃ ಇದರ ಕುರಿತಂತೆ ರಾಕಿಂಗ್ ಸ್ಟಾರ್ ಯಶ್ ಅವರೇ ಮಾತನಾಡಿದ್ದಾರೆ.
ಈ ಕುರಿತಂತೆ ಮಾತನಾಡುತ್ತಾ ಅವರು ಹಿರಿಯ ನಟರು ಎಲ್ಲದಕ್ಕಿಂತ ಸೂಪರ್ ಸ್ಟಾರ್ ನಟರು. ಅವರನ್ನು ನೋಡಿಕೊಂಡು ಬೆಳೆದಂತಹ ನಟ ನಾನು. ಇಬ್ಬರೂ ಕೂಡ ಬಾಲಿವುಡ್ ಇಂಡಸ್ಟ್ರಿಯ ಆಧಾರಸ್ಥಂಭಗಳು ಅವರನ್ನು ನಾವು ಗೌರವಿಸಬೇಕು. ಅವರಿಗೆ ನನ್ನನ್ನು ಹೋಲಿಕೆ ಮಾಡುವುದು ಸರಿಯಲ್ಲ. ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಇಬ್ಬರೂ ಕೂಡ ನನಗೆ ಸ್ಪೂರ್ತಿ ಎಂಬುದಾಗಿ ರಾಕಿಂಗ್ ಸ್ಟಾರ್ ಯಶ್ ರವರು ಹೊಗಳಿದ್ದಾರೆ. ಈಗಾಗಲೇ ಬಾಲಿವುಡ್ ನಿಂದ ಹಿಡಿದು ತಮಿಳು ತೆಲುಗು ಎಲ್ಲಾ ಭಾಷೆಗಳಲ್ಲಿ ಕೂಡ ಚಿತ್ರರಂಗದ ಸ್ಟಾರ್ ನಟರ ಸಿನಿಮಾಗಳಿಗಿಂತ ಹೆಚ್ಚಾಗಿ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ನೋಡಲು ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತಿದ್ದಾರೆ ಎನ್ನುವುದು ಕನ್ನಡ ಚಿತ್ರರಂಗದ ಬೆಳವಣಿಗೆಯನ್ನು ಸಾಬೀತುಪಡಿಸಿದೆ ಎನ್ನುವುದು ಹೆಮ್ಮೆಯ ವಿಚಾರ. ಇದೆಲ್ಲದಕ್ಕೆ ಕಾರಣವಾಗಿದ್ದು ರಾಕಿಂಗ್ ಸ್ಟಾರ್ ಯಶ್ ಎನ್ನುವುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬೇಕು.