ಓಲ್ಡ್ ಮಾಂಕ್ ಸಿನಿಮಾದಲ್ಲಿ ಕಮಲ್ ಮಾಡಿ ಭರವಸೆಯ ನಟ ನಿರ್ದೇಶಕ ಎನಿಸಿರುವ ಶ್ರೀನಿ ನಿಜಕ್ಕೂ ಯಾರು ಗೊತ್ತಾ?? ಬ್ಯಾಕ್ ಗ್ರೌಂಡ್ ಏನು ಗೊತ್ತೇ??

36

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಚಿತ್ರವೆಂದರೆ ಓಲ್ಡ್ ಮಾಂಕ್ ಚಿತ್ರ. ಈ ಹಿಂದೆ ಶ್ರೀನಿ ಬೀರಬಲ್ ಹಾಗೂ ಶ್ರೀನಿವಾಸ ಕಲ್ಯಾಣ ಎಂಬ ಎರಡು ಚಿತ್ರಗಳನ್ನು ನಿರ್ದೇಶಿಸಿದ್ದರು. ಜನರ ಮನಸ್ಸನ್ನು ಗೆಲ್ಲಲು ಯಶಸ್ವಿಯಾಗಿದ್ದರು ಕೂಡ ಬಾಕ್ಸಾಫೀಸ್ ನಲ್ಲಿ ಹೆಚ್ಚು ಸದ್ದು ಮಾಡಲಿಲ್ಲ. ಆದರೆ ಮತ್ತೊಮ್ಮೆ ಈಗ ನಾಯಕ ಹಾಗೂ ನಿರ್ದೇಶಕನಾಗಿ ಓಲ್ಡ್ ಮಾಂಕ್ ಚಿತ್ರದ ಮೂಲಕ ಯಶಸ್ಸನ್ನು ಸಂಪಾದಿಸಿದ್ದಾರೆ. ಇವರ ಕುರಿತಂತೆ ಸ್ಯಾಂಡಲ್ವುಡ್ ಚಿತ್ರರಂಗದ ಅನಭಿಷಕ್ತ ರಾಣಿಯಾಗಿ ರುವ ರಮ್ಯಾರವರು ಮಾತನಾಡಿದ್ದಾರೆ ಹಾಗಿದ್ದರೆ ಅವರಿಗೂ ರಮ್ಯಾರವರಿಗೆ ಇರುವಂತಹ ಸಂಬಂಧ ಏನೆಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಶ್ರೀನಿ ಅವರ ಕುರಿತಂತೆ ಹೇಳುವುದಾದರೆ ನಿಜಕ್ಕೂ ಕೂಡ ಕನ್ನಡ ಚಿತ್ರರಂಗದಲ್ಲಿ ಸದ್ಯದ ಮಟ್ಟಿಗೆ ಒಳ್ಳೆಯ ಆಲೋಚನೆ ಹೊಂದಿರುವಂತಹ ನಟ ಹಾಗೂ ನಿರ್ದೇಶಕರಾಗಿದ್ದಾರೆ. ತಾವು ಕಂಡ ಕನಸಿನಂತೆ ಶ್ರೀನಿವಾಸ ಕಲ್ಯಾಣ ವನ್ನು ನಿರ್ದೇಶಿಸಿ ನಾಯಕ ನಟನಾಗಿ ಕೂಡ ಕಾಣಿಸಿಕೊಳ್ಳುತ್ತಾರೆ. ಶ್ರೀನಿವಾಸ ಕಲ್ಯಾಣ ಸಿನಿಮಾ ಚೆನ್ನಾಗಿ ಮೂಡಿ ಬಂದಿದ್ದರೂ ಕೂಡ ಕನ್ನಡ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಸಫಲವಾಯಿತು. ಆದರೆ ಜನ ಅದನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ನೋಡಿ ಖುಷಿ ಪಟ್ಟಿದ್ದರು. ಸಿನಿಮಾಗಳಲ್ಲಿ ಶ್ರೀನಿವಾಸ ಕಲ್ಯಾಣ ಯಾರ ದರ್ಶನವಿಲ್ಲದೆ ಖಾಲಿಯಾಯಿತು. ಆದರೆ ಶ್ರೀನಿ ತಮ್ಮ ಪ್ರಯತ್ನವನ್ನು ಬಿಡಲಿಲ್ಲ.

ಮತ್ತೊಮ್ಮೆ ನಿರ್ದೇಶಕ ಹಾಗೂ ನಾಯಕನಟನಾಗಿ ಬೀರಬಲ್ ಚಿತ್ರವನ್ನು ಮಾಡುತ್ತಾರೆ. ಬೀರಬಲ್ ಚಿತ್ರ ಕೂಡ ಕಂಟೆಂಟ್ ವಿಚಾರದಲ್ಲಿ ಟಾಪ್ ಕ್ವಾಲಿಟಿಯದ್ದಾಗಿತ್ತು. ಆದರೆ ಇದು ಕೂಡ ಬಾಕ್ಸಾಫೀಸ್ ನಲ್ಲಿ ಕಮಲ್ ಮಾಡುವುದರಲ್ಲಿ ಎಡವಿತು. ಅಮೆಜಾನ್ ಪ್ರೈಮ್ ನಲ್ಲಿ ಲಕ್ಷಾಂತರ ಜನರು ವೀಕ್ಷಣೆಯನ್ನು ಮಾಡುತ್ತಾರೆ. ಅದಾದನಂತರ ಕೂಡ ಛಲಬಿಡದ ತ್ರಿವಿಕ್ರಮನಂತೆ ಓಲ್ಡ್ ಮಾಂಕ್ ಚಿತ್ರವನ್ನು ಪ್ರಾರಂಭಿಸುತ್ತಾರೆ. ಈ ಚಿತ್ರದಲ್ಲಿ ಕೂಡ ನಿರ್ದೇಶಕ ಹಾಗೂ ನಾಯಕನಟರಾಗಿ ಕಾಣಿಸಿಕೊಳ್ಳುತ್ತಾರೆ. ಬಿಡುಗಡೆಗೂ ಮುನ್ನ ಅವಿರತವಾಗಿ ಪ್ರಮೋಷನ್ ಕಾರ್ಯವನ್ನು ಕೂಡ ಕೈಗೊಳ್ಳಲಾಗಿತ್ತು. ನಂತರ ಚಿತ್ರವನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದು.

ನಟ ಹಾಗೂ ನಿರ್ದೇಶಕ ಶ್ರೀನಿ ರವರ ಅವಿರತ ಪ್ರಯತ್ನದಿಂದಾಗಿ ಓಲ್ಡ್ ಮಾಂಕ್ ಚಿತ್ರ ಸಾಕಷ್ಟು ನಿರೀಕ್ಷೆಗಳ ನಡುವೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಂಡಿತ್ತು. ಅಂತು ಇಂತು ನಿರ್ದೇಶಕ ಹಾಗೂ ನಟ ಶ್ರೀನಿ ಕಂಡಿರುವ ಕನಸು ನನಸಾಯ್ತು. ಈಗಾಗಲೇ ರಾಜ್ಯಾದ್ಯಂತ ಓಲ್ಡ್ ಮಾಂಕ್ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ ಎಂಬ ರಿಪೋರ್ಟ್ ಗಳು ಕೂಡ ವರದಿಯಾಗಿದೆ. ಕೇವಲ ಪ್ರೇಕ್ಷಕರು ಮಾತ್ರವಲ್ಲದೆ ಸೆಲೆಬ್ರಿಟಿಗಳು ಕೂಡ ಓಲ್ಡ್ ಮಾಂಕ್ ಚಿತ್ರವನ್ನು ನೋಡಿ ಪ್ರಶಂಸೆಯನ್ನು ತಿಳಿಸುತ್ತಿದ್ದಾರೆ. ಇದು ನಿಜಕ್ಕೂ ಕೂಡ ಒಂದು ಉತ್ತಮ ಬೆಳವಣಿಗೆಯಾಗಿದೆ.

ಶ್ರೀನಿ ನಟಿಸಿ ನಿರ್ದೇಶಿಸಿರುವ ಸೂಪರ್ ಹಿಟ್ ಚಿತ್ರ ಓಲ್ಡ್ ಮಾಂಕ್ ಕುರಿತಂತೆ ಈಗ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾರವರು ಕೂಡ ಪ್ರತಿಕ್ರಿಯಿಸಿದ್ದಾರೆ. ರಮ್ಯಾರವರು ಓಲ್ಡ್ ಮಾಂಕ್ ಚಿತ್ರವನ್ನು ಸ್ಟ್ರೆಸ್ ಬಸ್ಟರ್ ಎನ್ನುವುದಾಗಿ ಹಾಡಿಹೊಗಳಿದ್ದಾರೆ. ಇಷ್ಟು ಮಾತ್ರವಲ್ಲದೆ ಈ ಹುಡುಗ ಮುಂದೊಂದು ದಿನ ಎಲ್ಲರೂ ಮೆಚ್ಚುವಂತಹ ನಿರ್ದೇಶಕ ಆಗುತ್ತಾನೆ ಎಂಬುದು ಯಾರಿಗೆ ಗೊತ್ತಿತ್ತು ಎಂಬುದಾಗಿ ಕೂಡ ಹೇಳಿದ್ದಾರೆ ಹೌದು ಮುಸ್ಸಂಜೆಮಾತು ಚಿತ್ರದಲ್ಲಿ ನಟಿ ರಮ್ಯಾ ರವರ ಜೊತೆಗೆ ಶ್ರೀನಿ ತಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಟ ಹಾಗೂ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಶ್ರೀನಿ ಅವರಿಗೆ ಶುಭಹಾರೈಕೆ ಯನ್ನು ಕೂಡ ತಿಳಿಸಿದ್ದಾರೆ ನಟಿ ರಮ್ಯಾ ರವರು.

ತಮ್ಮ ಹಾಗೂ ಶ್ರೀನಿಯ ಒಡನಾಟವನ್ನು ಮೆಲಕು ಹಾಕಿಕೊಳ್ಳುತ್ತಾ ನಟಿ ರಮ್ಯಾ ರವರು ಯಾರಿಗೆ ಗೊತ್ತಿತ್ತು ಜಸ್ಟ್ ಮಾತ್ ಮಾತಲ್ಲಿ ಚಿತ್ರದಲ್ಲಿ ನನ್ನ ತಮ್ಮನಾಗಿ ನಟಿಸಿದ್ದ ಶ್ರೀನಿ ಇಂತಹ ಒಳ್ಳೆಯ ಸಿನಿಮಾವನ್ನು ಕನ್ನಡ ಚಿತ್ರರಂಗಕ್ಕೆ ನೀಡುತ್ತಾನೆ ಎಂದು ಯಾರಿಗೆ ತಾನೇ ಗೊತ್ತಿತ್ತು ಈತ ಇಂತಹ ಒಳ್ಳೆಯ ಚಿತ್ರ ವನ್ನು ನೀಡಿರುವ ನಿರ್ದೇಶಕ ನಾಗುತ್ತಾನೆ ಎಂಬುದಾಗಿ. ನಿಜಕ್ಕೂ ಕೂಡ ಶ್ರೀನಿಯ ಕುರಿತಂತೆ ನನಗೆ ಹೆಮ್ಮೆಯಾಗುತ್ತಿದೆ ಎಂಬುದಾಗಿ ಹರ್ಷವನ್ನು ವ್ಯಕ್ತಪಡಿಸಿದ್ದಾರೆ. ಯಾರೆಲ್ಲಾ ಸಿನಿಮಾವನ್ನು ನೋಡಿಲ್ಲವೋ ಇಂದೇ ಟಿಕೆಟ್ ಅನ್ನು ಖರೀದಿಸಿ ಚಿತ್ರವನ್ನು ನೋಡಿ ಸಪೋರ್ಟ್ ಮಾಡಿ ಎಂಬುದಾಗಿ ಕೂಡಾ ಹೇಳಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೇ ಶೇರ್ ಮಾಡಿಕೊಳ್ಳಿ.

Get real time updates directly on you device, subscribe now.