ಈ ಬಾಲಿವುಡ್ ನಟಿಯರು ಒಂದು ಸಿನಿಮಾಗೆ ತೆಗೆದುಕೊಳ್ಳುವ ಸಂಭಾವನೆಯನ್ನು ಕೇಳಿದರೆ ನೀವು ಕೂಡ ಶಾಕ್ ಆಗ್ತೀರಾ. ಎಷ್ಟು ಗೊತ್ತೇ??
ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದಲ್ಲಿ ಎಲ್ಲವೂ ಕೂಡ ದುಬಾರಿ. ಅಲ್ಲಿನ ಜೀವನ ಹಾಗೂ ಅಲ್ಲಿ ಅವಕಾಶ ಪಡೆಯಲು ಕೂಡ ಸಾಕಷ್ಟು ಕಷ್ಟವನ್ನು ಪಡಬೇಕು. ಅದಕ್ಕಾಗಿಯೇ ಮುಂಬೈಯನ್ನು ಕನಸಿನ ನಗರಿ ಎಂದು ಕರೆಯುತ್ತಾರೆ. ಒಂದು ವೇಳೆ ಅಲ್ಲಿ ಒಂದು ಸಿನಿಮಾದಲ್ಲಿ ಗೆಲುವು ಸಾಧಿಸಿದರೆ ಸಾಕು ಅವರ ಬೇಡಿಕೆ ಹಾಗೂ ಸಂಭಾವನೆ ಎರಡು ಕೂಡ ದ್ವಿಗುಣವಾಗುತ್ತದೆ. ಕೇವಲ ಬಾಲಿವುಡ್ ಚಿತ್ರರಂಗದ ನಟಿಯರು ಹಿಂದಿ ಸಿನಿಮಾಗಳಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಅವರ ಬೇಡಿಕೆ ಹೆಚ್ಚಾಗುತ್ತದೆ. ಅದರಲ್ಲೂ ಬಾಲಿವುಡ್ ಚಿತ್ರರಂಗದ ಸ್ಟಾರ್ ನಾಯಕ ನಟಿಯರನ್ನು ಸಿನಿಮಾಗಳಿಗೆ ಬುಕ್ ಮಾಡಿಕೊಳ್ಳಬೇಕು ಎಂದರೆ ಅವರ ಸಂಭಾವನೆ ಕುರಿತಂತೆ ನಿರ್ಮಾಪಕರು ಸಾಕಷ್ಟು ಲೆಕ್ಕಾಚಾರ ಹಾಕಬೇಕಾಗುತ್ತದೆ.
ಯಾಕೆಂದರೆ ಸಿನಿಮಾಗಳಿಂದ ಸಿನಿಮಾಗಳಿಗೆ ಅವರ ಸಂಭಾವನೆ ಎನ್ನುವುದು ಪೆಟ್ರೋಲ್ ದರದ ಹಾಗೆ ಏರುತ್ತಲೇ ಹೋಗುತ್ತದೆ. ಹಿಂದಿನ ಲೇಖನಿಯಲ್ಲಿ ನಾವು ಬಾಲಿವುಡ್ ಚಿತ್ರರಂಗದ ಸ್ಟಾರ್ ನಾಯಕ ನಟಿಯರು ಎಷ್ಟು ಕೋಟಿ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ ಎಂಬುದರ ಕುರಿತಂತೆ ನಿಮಗೆ ಡೀಟೇಲ್ ಆಗಿ ಹೇಳಲು ಹೊರಟಿದ್ದೇವೆ. ಹಾಗಿದ್ದರೆ ಈ ಲಿಸ್ಟಿನಲ್ಲಿ ಯಾವೆಲ್ಲ ನಾಯಕ ನಟಿಯರು ಎಷ್ಟು ಕೋಟಿ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ ಎಂಬುದನ್ನು ನೋಡೋಣ ಬನ್ನಿ.
ದೀಪಿಕಾ ಪಡುಕೋಣೆ; ಒಂದು ಲೆಕ್ಕದಲ್ಲಿ ಬಾಲಿವುಡ್ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿರುವ ದೀಪಿಕಾ ಪಡುಕೋಣೆ ಅವರು ಈಗಾಗಲೇ ಬಿಡುಗಡೆಯಾಗಿರುವ ಗೆಹರಿಯಾನ್ ಹಾಗೂ ಮುಂದೆ ಬಿಡುಗಡೆಯಾಗಲಿರುವ ಶಾರುಖ್ ಖಾನ್ ಅವರ ಜೊತೆಗಿನ ಪಠಾಣ್ ಸಿನಿಮಾಗೆ ಬರೋಬ್ಬರಿ 15 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೆ ಚಿತ್ರದ ಲಾಭದಲ್ಲಿ ಕೂಡ ಪಾಲನ್ನು ಪಡೆಯುವ ಕ್ರಮವನ್ನು ಈಗಾಗಲೇ ದೀಪಿಕಾ ಪಡುಕೋಣೆ ಅವರು ಗೆಹಾರಿಯಾನ್ ಚಿತ್ರದ ಮೂಲಕ ಪ್ರಾರಂಭಿಸಿದ್ದಾರೆ. ಇದು ಮುಂದಿನ ದಿನಗಳಲ್ಲಿ ಕೂಡ ಮುಂದುವರೆಯ ಬಹುದಾಗಿದೆ.
ಆಲಿಯಾ ಭಟ್; ದೀಪಿಕಾ ಪಡುಕೋಣೆ ಅವರಂತೆ ಆಲಿಯಾ ಭಟ್ ಕೂಡ ಜಂಟಿಯಾಗಿ ಬಾಲಿವುಡ್ ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಾಯಕನಟಿಯ ಸ್ಥಾನವನ್ನು ಹೊಂದಿರುತ್ತಾರೆ. ಹೌದು ಆಲಿಯಾ ಭಟ್ ರವರು ಕೂಡ 15 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ. ಆಲಿಯಾ ಭಟ್ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ ಗಳಾಗಿರುವ ಗಂಗುಬೈ ಕಾಥಿಯವಾಡಿ ಹಾಗೂ ಆರ್ ಆರ್ ಆರ್ ಚಿತ್ರಗಳ ಕುರಿತಂತೆ ನಿರೀಕ್ಷೆ ಹೆಚ್ಚಿದ್ದು ಈ ಚಿತ್ರಗಳ ಯಶಸ್ಸಿನ ನಂತರ ಅವರ ಸಂಭಾವನೆ ಇನ್ನೂ ಕೂಡ ಹೆಚ್ಚಾದರೆ ಆಶ್ಚರ್ಯಪಡಬೇಕಾಗಿಲ್ಲ.
ಕತ್ರಿನಾ ಕೈಫ್ ಹಾಗೂ ಕರೀನಾ ಕಪೂರ್; ಇಬ್ಬರೂ ಕೂಡ 17ರಿಂದ 20 ವರ್ಷಗಳ ಕಾಲ ಬಾಲಿವುಡ್ ಚಿತ್ರರಂಗದಲ್ಲಿ ನಟಿಸಿಕೊಂಡು ಬಂದವರು. ಇಂದಿಗೂ ಕೂಡ ಇಬ್ಬರ ಬೇಡಿಕೆ ಒಂದು ಚೂರು ಕೂಡ ಕಡಿಮೆಯಾಗಿಲ್ಲ. ಇನ್ನು ಇತ್ತೀಚಿನ ವರದಿಗಳ ಪ್ರಕಾರ ಕತ್ರಿನಾ ಕೈಫ್ ಹಾಗೂ ಕರೀನಾ ಕಪೂರ್ 12 ಕೋಟಿ ರೂಪಾಯಿ ಸಂಭಾವನೆಯನ್ನು ಒಂದು ಸಿನಿಮಾಗಾಗಿ ಪಡೆಯುತ್ತಾರೆ.
ಪ್ರಿಯಾಂಕ ಚೋಪ್ರಾ ಹಾಗೂ ಅನುಷ್ಕ ಶರ್ಮ; ಇತ್ತೀಚಿನ ದಿನಗಳಲ್ಲಿ ಅಂದರೆ ಮದುವೆಯಾದ ಮೇಲೆ ಪ್ರಿಯಾಂಕ ಚೋಪ್ರಾ ಹಾಗೂ ಅನುಷ್ಕಶರ್ಮ ಇಬ್ಬರೂ ಕೂಡ ಬಾಲಿವುಡ್ ಚಿತ್ರರಂಗದಲ್ಲಿ ಕೊಂಚಮಟ್ಟಿಗೆ ವಿರಾಮ ಪಡೆದುಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಆದರೂ ಕೂಡ ಸಂಭಾವನೆ ವಿಚಾರದಲ್ಲಿ ಇವರ ವ್ಯಾಲ್ಯೂ ಅಷ್ಟೊಂದು ಕಡಿಮೆಯಾಗಿಲ್ಲ. ಇವರಿಬ್ಬರೂ ತಮ್ಮ ಕೊನೆಯ ಚಿತ್ರಗಳಿಗೆ ಪಡೆದಂತಹ ಸಂಭಾವನೆ ವಿಚಾರದಲ್ಲಿ ಹೇಳುವುದಾದರೆ ಪ್ರಿಯಾಂಕ ಚೋಪ್ರಾ ಹತ್ತು ಕೋಟಿ ರೂಪಾಯಿ ಸಂಭಾವನೆ ಹಾಗೂ ಅನುಷ್ಕಶರ್ಮ ಎಂಟು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು.
ಉಳಿದಂತೆ ಶ್ರದ್ಧಾ ಕಪೂರ್ ಅವರು ಲವ್ ರಂಜನ್ ಚಿತ್ರಕ್ಕಾಗಿ ಏಳು ಕೋಟಿ ರೂಪಾಯಿ ಸಂಭಾವನೆ, ದಕ್ಷಿಣ ಭಾರತ ಚಿತ್ರರಂಗದ ಮೂಲದ ತಾಪ್ಸಿ ಪನ್ನು ರವರು 5 ಕೋಟಿ ರೂಪಾಯಿ ವಿದ್ಯಾಬಾಲನ್ ಹಾಗೂ ಕೃತಿ ಸನೋನ್ ಇಬ್ಬರು ಕೂಡ ನಾಲ್ಕು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಕಿಯಾರಾ ಅಡ್ವಾಣಿ ಜಾಕ್ವಲಿನ್ ಫರ್ನಾಂಡೀಸ್ ದಿಶಾ ಪಟಾನಿ ಮೂವರು ಕೂಡ ಪ್ರತಿ ಸಿನಿಮಾದ 2.50 ಕೋಟಿ ರೂಪಾಯಿ ಪಡೆಯುತ್ತಾರೆ. ಯುವ ಹಾಗೂ ಉದಯೋನ್ಮುಖ ನಟಿಯ ರಾಗಿರುವ ಜಾಹ್ನವಿ ಕಪೂರ್ ಹಾಗೂ ಸಾರಾ ಅಲಿ ಖಾನ್ ಇಬ್ಬರೂ ಕೂಡಾ ಪ್ರತಿ ಸಿನಿಮಾಗೆ ಎರಡು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.
ಇವರೇ ಆ ಬಾಲಿವುಡ್ ಚಿತ್ರರಂಗದ ದುಬಾರಿ ಸಂಭಾವನೆಯನ್ನು ಪಡೆಯುವ ಹಾಗೂ ಅತ್ಯಂತ ಬೇಡಿಕೆಯಲ್ಲಿರುವ ನಾಯಕ ನಟಿಯರು. ಮುಂದಿನ ದಿನಗಳಲ್ಲಿ ಇವರ ಸಂಭಾವನೆ ದ್ವಿಗುಣ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ನಿಮ್ಮ ನೆಚ್ಚಿನ ನಟಿ ಯಾರು ಎಂಬುದನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.