ಅನನ್ಯ ಪಾಂಡೆ ನಂತರ ಮತ್ತೊಬ್ಬ ಬಾಲಿವುಡ್ ಚೆಲುವೆ ವಿಜಯ್ ದೇವರಕೊಂಡ ರವರಿಗೆ ನಾಯಕಿಯಾಗಲಿದ್ದಾರೆ, ಆ ಟಾಪ್ ಬ್ಯೂಟಿ ಯಾರು ಗೊತ್ತೇ??

8

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಅರ್ಜುನ್ ರೆಡ್ಡಿ ಚಿತ್ರದ ನಂತರ ತೆಲುಗು ಚಿತ್ರರಂಗದ ಸ್ಟಾರ್ ನಟನಾಗಿ ವಿಜಯ್ ದೇವರಕೊಂಡ ರವರು ಗುರುತಿಸಿಕೊಂಡಿರುವುದು ನಿಮಗೆಲ್ಲಾ ಗೊತ್ತಿರುವ ವಿಚಾರವಾಗಿದೆ. ಮೂರನೇ ವರ್ಗದ ಹೀರೋ ಆಗಿದ್ದ ವಿಜಯ್ ದೇವರಕೊಂಡ ರವರು ಅರ್ಜುನ್ ರೆಡ್ಡಿ ಚಿತ್ರದ ಅದ್ಭುತ ಯಶಸ್ಸಿನ ನಂತರ ತೆಲುಗು ಚಿತ್ರರಂಗದ ಮೊದಲ ವರ್ಗದ ಹೀರೋ ಆಗಿ ಕಾಣಿಸಿಕೊಳ್ಳುತ್ತಾರೆ. ಈಗ ಕೇವಲ ತೆಲುಗು ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್ ಚಿತ್ರರಂಗದಲ್ಲಿ ಕೂಡ ತಮ್ಮ ಝಲಕ್ ಅನ್ನು ವಿಜಯ್ ದೇವರಕೊಂಡ ರವರು ತೋರಿಸುತ್ತಿದ್ದಾರೆ.

ಈಗಾಗಲೇ ತೆಲುಗು ಚಿತ್ರರಂಗದಲ್ಲಿ ಹಲವಾರು ಸೂಪರ್ ಹಿಟ್ ಸಿನಿಮಾ ಗಳನ್ನು ನೀಡಿರುವ ವಿಜಯ್ ದೇವರಕೊಂಡ ರವರು ನೇರವಾಗಿ ಬಾಲಿವುಡ್ ಚಿತ್ರರಂಗಕ್ಕೆ ಹಾರಿದ್ದಾರೆ. ಚಾರ್ಮಿ ಕೌರ್ ಹಾಗೂ ಕರನ್ ಜೋಹರ್ ನಿರ್ಮಾಣದಲ್ಲಿ ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಪಂಚಭಾಷಾ ಚಿತ್ರವಾಗಿರುವ ಲೈಗರ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಈಗಾಗಲೇ ಅನನ್ಯ ಪಾಂಡೆ ಅವರು ವಿಜಯ್ ದೇವರಕೊಂಡ ರವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ವಿಜಯ್ ದೇವರಕೊಂಡ ರವರ ಮುಂದಿನ ಚಿತ್ರದ ನಾಯಕಿಯನ್ನು ಕೂಡ ಈಗಾಗಲೇ ಫೈನಲೈಸ್ ಮಾಡಲಾಗಿದೆ.

ಹೌದು ಗೆಳೆಯರೇ ಅವರು ಮತ್ತಿನ್ಯಾರು ಅಲ್ಲ ಭಾರತೀಯ ಚಿತ್ರರಂಗದ ತ್ರಿಲೋಕ ಸುಂದರಿ ಎಂದೇ ಖ್ಯಾತರಾಗಿದ್ದಂತಹ ಶ್ರೀದೇವಿ ರವರ ಮಗಳಾಗಿರುವ ಜಾಹ್ನವಿ ಕಪೂರ್ ರವರು. ನಿಜವಾಗಿ ಹೇಳಬೇಕೆಂದರೆ ಲೈಗರ್ ಚಿತ್ರಕ್ಕೆ ಜಾಹ್ನವಿ ಕಪೂರ್ ಅವರ ಮೊದಲ ಆಯ್ಕೆಯಾಗಿದ್ದರು. ಆದರೆ ಹಲವಾರು ಕಾರಣಗಳಿಂದಾಗಿ ಅವರು ಚಿತ್ರವನ್ನು ಒಪ್ಪಿಕೊಳ್ಳಲು ಸಾಧ್ಯವಾಗದೆ ಅನನ್ಯ ಪಾಂಡೆ ಅವರು ನಾಯಕಿಯಾಗಿ ಆಯ್ಕೆಯಾಗಿದ್ದರು. ಈಗಾಗಲೇ ಹಲವಾರು ಸಿನಿಮಾಗಳಲ್ಲಿ ಜಾಹ್ನವಿ ಕಪೂರ್ ನಟಿಸಿದ್ದರೂ ಕೂಡ ಅಷ್ಟೊಂದು ದೊಡ್ಡ ಮಟ್ಟದ ಯಶಸ್ಸನ್ನು ಕಂಡಿಲ್ಲ. ಹೀಗಾಗಿ ವಿಜಯ್ ದೇವರಕೊಂಡ ರವರ ಜೊತೆಗಿನ ಅವರ ಸಿನಿಮಾ ದೊಡ್ಡ ಯಶಸ್ಸನ್ನು ಕಾಣಬಹುದು ಎಂಬ ನಿರೀಕ್ಷೆ ಎಲ್ಲರಲ್ಲಿ ಮೂಡಿದೆ. ಈ ಚಿತ್ರಕ್ಕೂ ಕೂಡ ಕರಣ್ ಜೋಹರ್ ರವರ ನಿರ್ಮಾಣ ಹಾಗೂ ಪುರಿ ಜಗನ್ನಾಥ್ ರವರ ನಿರ್ದೇಶನ ಇರಲಿದೆ ಎನ್ನುವುದು ಮತ್ತೊಂದು ವಿಶೇಷ.

Get real time updates directly on you device, subscribe now.