ಬಿಗ್ ನ್ಯೂಸ್: ಕನ್ನಡ ಚಿತ್ರರಂಗದಿಂದ ಬ್ಯಾನ್ ಆಗ್ತಾರಾ ರಚಿತಾ ರಾಮ್. ಬಾರಿ ವಿವಾದವನ್ನು ಮೈಮೇಲೆ ಎಳೆದುಕೊಂಡು ಅವಾಂತರ ಸೃಷ್ಟಿ ಮಾಡಿದ ರಚಿತಾ.

2

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಡಿಂಪಲ್ ಕ್ವೀನ್ ರಚಿತಾ ರಾಮ್ ಕನ್ನಡ ಚಿತ್ರರಂಗದ ಅತ್ಯಂತ ಬ್ಯುಸಿ ನಟಿಯೆಂದರೆ ಕಂಡಿತವಾಗಿಯೂ ತಪ್ಪಾಗಲಾರದು. ಅವರ ಕೈಯಲ್ಲಿ ಈಗಾಗಲೇ ಹಲವಾರು ಚಿತ್ರಗಳು ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಅವರು ವಿವಾದಗಳಲ್ಲಿ ಕೂಡ ಅತಿ ಹೆಚ್ಚಾಗಿ ಸಿಲುಕಿಕೊಳ್ಳುತ್ತಿದ್ದಾರೆ. ಮೊದಲಿಗೆ ರಿಯಲ್ ಸ್ಟಾರ್ ಉಪೇಂದ್ರ ರವರ ಜೊತೆಗೆ ಐ ಲವ್ ಯು ಚಿತ್ರದಲ್ಲಿ ಬೋಲ್ಡ್ ದೃಶ್ಯಗಳಲ್ಲಿ ಒಂದು ಸಾಂಗ್ ನಲ್ಲಿ ಕೂಡ ನಟಿಸಿದ್ದರು.

ಇದಾದ ನಂತರ ಇದನ್ನು ಕೊರಿಯೋಗ್ರಫಿ ಮಾಡಿದ್ದು ಉಪೇಂದ್ರ ಅವರು ಎಂದು ಎಲ್ಲಾ ಮಾಧ್ಯಮಗಳ ಬಳಿ ಚೀಮಾರಿ ಹಾಕುತ್ತ ಬಂದಿದ್ದರು. ಇದಕ್ಕೆ ಉಪೇಂದ್ರರವರ ಪತ್ನಿ ಪ್ರಿಯಾಂಕ ಉಪೇಂದ್ರ ಇದನ್ನು ಮಾಡಿದ್ದು ಆರ್ ಚಂದ್ರು ಹಾಗೂ ಚಿನ್ನಿ ಮಾಸ್ಟರ್ ಎಂಬುದಾಗಿ ಯಾಕೆ ಅವರು ಹೀಗೆ ಹೇಳುತ್ತಿದ್ದಾರೆ ಎಂಬುದಾಗಿ ಕೂಡಾ ಪ್ರಶ್ನಿಸಿದ್ದರು. ಇದಾದ ನಂತರ ಯಾವುದೇ ಇಂತಹ ದೃಶ್ಯಗಳಲ್ಲಿ ನಾನು ನಟಿಸುವುದಿಲ್ಲ ಎಂಬುದಾಗಿ ರಚಿತರಾಮ್ ಹೇಳಿಕೊಂಡಿದ್ದರು. ಆದರೆ ಇತ್ತೀಚಿಗಷ್ಟೇ ಏಕ್ ಲವ್ ಯಾ ಚಿತ್ರದಲ್ಲಿ ಕಿಸ್ಸಿಂಗ್ ಸ್ಮೋಕಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಲವ್ ಯು ರಚ್ಚು ಚಿತ್ರದಲ್ಲಿ ಕೂಡ ಇಂತಹ ಬೋಲ್ಡ್ ದೃಶ್ಯಗಳಲ್ಲಿ ಕೃಷ್ಣ ಅಜಯ್ ರಾವ್ ರವರ ಜೊತೆಗೆ ಕಾಣಿಸಿಕೊಂಡಿದ್ದರು.

ನೀನು ಇದೇ ವಿಷಯದ ಕುರಿತಂತೆ ಮಾಧ್ಯಮದವರು ನೀವು ಇಂತಹ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದೀರಿ ಮತ್ತೆ ನಟಿಸಲು ಕಾರಣವೇನು ಎಂದು ಕೇಳಿದಾಗ ನೀವು ಮದುವೆಯಾದ ಮೇಲೆ ಏನು ಮಾಡುತ್ತೀರಿ ಎಂಬುದಾಗಿ ರಚಿತಾರಾಮ್ ರವರು ಎಲ್ಲರ ಬಳಿ ಪ್ರಶ್ನೆ ಕೇಳಿದ್ದಾರೆ. ಹೌದು ಮದುವೆಯಾದಮೇಲೆ ಫಸ್ಟ್ ನೈಟ್ ನಲ್ಲಿ ಎಲ್ಲರೂ ಮಾಡೋದು ರೋಮ್ಯಾನ್ಸ್ ತಾನೇ ಅದೇ ರೀತಿ ಈ ಚಿತ್ರದ ಹಾಡಿನಲ್ಲಿ ಕೂಡ ಅದೇ ದೃಶ್ಯಗಳು ಇತ್ತು ಆದರೆ ಯಾವುದೇ ಡೀಟೇಲ್ ಆಗಿ ಮಾಡಿಲ್ಲ ಎಂಬುದಾಗಿ ಹೇಳಿದ್ದಾರೆ. ಇವೆಲ್ಲದರ ಕುರಿತಂತೆ ಚಿತ್ರವನ್ನು ನೋಡಿದ ನಂತರ ನಿಮಗೆ ಉತ್ತರ ತಿಳಿಯುತ್ತದೆ ಎಂಬುದಾಗಿ ಹೇಳಿದ್ದಾರೆ. ಇನ್ನು ಈ ಹೇಳಿಕೆಯ ನಂತರ ಕರ್ನಾಟಕ ಕ್ರಾಂತಿದಳ ಸಂಸ್ಥೆಯ ರಚಿತಾ ರಾಮ್ ರವರನ್ನು ಬ್ಯಾನ್ ಮಾಡಿ ಎಂಬುದಾಗಿ ಆಗ್ರಹಿಸಿದ್ದಾರೆ. ಕೆಲವರು ರಚಿತಾರಾಮ್ ನಟಿಯಾಗಿ ಪಾತ್ರಕ್ಕೆ ಏನು ಬೇಕು ಅದನ್ನು ನಟಿಸಿದ್ದಾರೆ ಎಂಬುದಾಗಿ ಕೂಡ ಅವರ ಪರ ಬ್ಯಾಟಿಂಗ್ ಮಾಡಿದ್ದಾರೆ.

Get real time updates directly on you device, subscribe now.