ಕಂಗನಾ ರಾವತ್ ರವರಿಗೆ ಪದ್ಮಶ್ರೀ, ಸೋನು ಸೂದ್ ರವರಿಗೆ ಇಲ್ಲ, ಇದಕ್ಕಾಗಿ ಬೇಜಾರ್ ಮಾಡಿಕೊಂಡ್ರಾ ಸೋನು. ಹೇಳಿದ್ದೇನು ಗೊತ್ತೇ??

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈ ಸಾಲಿನ ಪದ್ಮಶ್ರೀ ಪುರಸ್ಕೃತರ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದ್ದು ಪ್ರಶಸ್ತಿಯನ್ನು ಕೂಡ ಪ್ರದಾನ ಮಾಡಿದೆ. ಪ್ರಶಸ್ತಿ ಪುರಸ್ಕೃತರ ಹೆಸರಿನಲ್ಲಿ ನಮ್ಮ ನಟನಾ ಹೆಸರಿಲ್ಲ ಎಂಬುದಾಗಿ ಹಲವಾರು ನಾಯಕನಟರ ಅಭಿಮಾನಿಗಳು ಚರ್ಚೆಗೆ ಇಳಿದಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ನಟ ಸೋನು ಸೂದ್ ರವರ ಅಭಿಮಾನಿಗಳು ಕೂಡ ಈ ಕುರಿತಂತೆ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್ ಚಿತ್ರರಂಗದಲ್ಲಿ ಕಂಗನಾ ರಾಣಾವತ್ ಸೇರಿದಂತೆ ಹಲವಾರು ನಟ-ನಟಿಯರಿಗೆ ಪ್ರಶಸ್ತಿಗಳು ದೊರಕಿದ್ದವು. ಆದರೆ ಲಾಕ್ಡೌನ್ ಸಂದರ್ಭದಲ್ಲಿ ಲಕ್ಷಾಂತರ ಜನರಿಗೆ ತನ್ನ ಸ್ವಂತ ಹಣದಲ್ಲಿ ಹಲವಾರು ಸಹಾಯಗಳನ್ನು ಮಾಡಿರುವ ನಿಜವಾದ ರಿಯಲ್ ಲೈಫ್ ಹೀರೋ ಸೋನು ಸೂದ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರಕದಿದ್ದಕ್ಕಾಗಿ ಅಭಿಮಾನಿಗಳು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಇಷ್ಟೊಂದು ಒಳ್ಳೆಯ ಜನ ಸೇವೆಗಳನ್ನು ಮಾಡಿರುವ ವ್ಯಕ್ತಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡದೆ ಸಿಕ್ಕ ಸಿಕ್ಕವರಿಗೆ ನೀಡಿದ್ದಾರೆ ಎಂಬುದಾಗಿ ಆಕ್ರೋಶಿತರಾಗಿದ್ದಾರೆ. ಇನ್ನು ಈ ಕುರಿತಂತೆ ಸೋನು ಸೂದ್ ಅವರು ಕೂಡ ಪ್ರತಿಕ್ರಿಯಿಸಿದ್ದಾರೆ.

ಹೌದು ಗೆಳೆಯರ ಸೋನು ಸೂದ್ ರವರು ಕೂಡ ನನಗೆ ಪ್ರಶಸ್ತಿ ಸಿಕ್ಕದ್ದಕ್ಕಾಗಿ ಯಾವುದೇ ಬೇಸರವಿಲ್ಲ ಜನರ ಆಶೀರ್ವಾದವೇ ಹಾಗೂ ಪ್ರೀತಿಯೇ ನನಗೆ ದೊಡ್ಡ ಪ್ರಶಸ್ತಿ ಎಂಬುದಾಗಿ ಹೇಳಿದ್ದಾರೆ. ಪ್ರತಿದಿನ ಬೆಳಿಗ್ಗೆ ನನ್ನ ಮನೆಯ ಮುಂದೆ ನಿಲ್ಲುವ ಜನರಿಗೆ ಕೊನೆಯವರೆಗೂ ನನ್ನ ಕೈಲಾದಷ್ಟು ಸಹಾಯ ಮಾಡುವುದು ನನ್ನ ಆಧ್ಯ ಕರ್ತವ್ಯವಾಗಿದೆ ಎಂಬುದನ್ನು ಕೂಡ ಹೇಳಿದ್ದಾರೆ. ನನ್ನ ಕೆಲಸಕ್ಕೆ ಮನ್ನಣೆ ಸಿಕ್ಕಲ್ಲಿ ಯಾರೋ ನನ್ನ ಕೆಲಸವನ್ನು ಗುರುತಿಸಲಿ ಎಂಬುದಾಗಿ ಈ ಕೆಲಸವನ್ನು ನಾನು ಮಾಡುತ್ತಿಲ್ಲ ಎಂಬುದಾಗಿ ಕೂಡ ಹೇಳಿಕೊಂಡಿದ್ದಾರೆ. ನಾನು ಯಾವುದೇ ಪ್ರಶಸ್ತಿ ಅಥವಾ ಪ್ರತಿಫಲ ಅಪೇಕ್ಷಿಸಿ ಸಹಾಯವನ್ನು ಮಾಡುತ್ತಿಲ್ಲ ನನ್ನ ನೆಮ್ಮದಿಗಾಗಿ ಜನರಿಗೆ ಸಹಾಯವಾಗಲು ಈ ಕೆಲಸಗಳನ್ನು ಮಾಡುತ್ತಿದ್ದೇನೆ ಎಂಬುದಾಗಿ ಕೂಡ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

Get real time updates directly on you device, subscribe now.